Connect with us

Dvgsuddi Kannada | online news portal | Kannada news online

ಭದ್ರಾ ಡ್ಯಾಂ ಒಳ ಹರಿವು 42 ಸಾವಿರ ಕ್ಯೂಸೆಕ್ ; ನೀರಿನ ಮಟ್ಟ174.6 ಅಡಿಗೆ ಏರಿಕೆ; ಭರ್ತಿಗೆ 12 ಅಡಿ ಬಾಕಿ

images 53

ದಾವಣಗೆರೆ

ಭದ್ರಾ ಡ್ಯಾಂ ಒಳ ಹರಿವು 42 ಸಾವಿರ ಕ್ಯೂಸೆಕ್ ; ನೀರಿನ ಮಟ್ಟ174.6 ಅಡಿಗೆ ಏರಿಕೆ; ಭರ್ತಿಗೆ 12 ಅಡಿ ಬಾಕಿ

ಭದ್ರಾವತಿ: ಭದ್ರಾ ಜಲಾಶಯ ಪ್ರದೇಶದಲ್ಲಿ ಮತ್ತೆ ಭಾರೀ ಮಳೆಯಾಗುತ್ತಿದೆ. ಒಳ ಹರಿವಿನ ಪ್ರಮಾಣ ಮತ್ತೆ ಹೆಚ್ಚಳವಾಗುದ್ದು, 42 ಸಾವಿರ ಕ್ಯೂಸೆಕ್ ನೀರು ಒಳ ಹರಿವಿದೆ. ಇದರಿಂದ ಇಂದಿನ ನೀರಿನ ಮಟ್ಟ 174.6ಅಡಿಗೆ ಏರಿಕೆಯಾಗಿದೆ.

ಇಂದು (ಜು.11) 41,645 ಕ್ಯೂಸೆಕ್ ಒಳಹರಿವಿದ್ದು, ನಿನ್ನೆ 31,989 ಕ್ಯೂಸೆಕ್ ಒಳ ಹರಿವಿತ್ತು. ಇಂದೀಗ ಒಮ್ಮೆ 10 ಸಾವಿರ ಕ್ಯೂಸೆಕ್ ನೀರು ಹೆಚ್ಚಳವಾಗಿದೆ. ಇಂದು ಬೆಳಗ್ಗೆ 6 ಗಂಟೆ ವೇಳೆಗೆ ನೀರಿನ ಮಟ್ಟ 174.6 ಅಡಿಗೆ ತಲುಪಿದೆ. ಇದೀಗ ಡ್ಯಾಂ ಭರ್ತಿಗೆ ಇನ್ನು 12 ಅಡಿ ಮಾತ್ರ ಬಾಕಿ ಉಳಿದಿದೆ. ಕಳೆದ ವರ್ಷ ಈ ದಿನ ಕೇವಲ 156 ಅಡಿಯಷ್ಟು ನೀರಿತ್ತು. ಈ ಕಳೆದ ವರ್ಷಕ್ಕಿಂತ 18 ಅಡಿಗೂ ಹೆಚ್ಚುವರಿ ನೀರು ಸಂಗ್ರಹವಾಗಿದೆ.

  • ನೀರಿನ ಸಂಗ್ರಹದ ವಿವರ
  • ಇಂದಿನ ನೀರಿನ ಮಟ್ಟ 174.6 ಅಡಿ
  • ಪೂರ್ಣ ಮಟ್ಟ:186 ಅಡಿ
  • ಇಂದಿನ ಸಾಮರ್ಥ್ಯ: 57.818 ಟಿಎಂಸಿ
  • ಒಟ್ಟು ಸಾಮರ್ಥ್ಯ:71.535 ಟಿಎಂಸಿ
  • ಒಳಹರಿವು: 41,645 ಕ್ಯೂಸೆಕ್
  • ಒಟ್ಟು ಹೊರಹರಿವು: 153 ಕ್ಯೂಸೆಕ್
  • ಬಲದಂಡೆ ನಾಲೆ: 0.00 ಕ್ಯೂಸೆಕ್ಸ್
  • ಎಡದಂಡೆ ನಾಲೆ: 0.00ಕ್ಯೂಸೆಕ್ಸ್
  • ಕಳೆದ ವರ್ಷ ಈ ದಿನ : 156 ಅಡಿ

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top