Connect with us

Dvgsuddi Kannada | online news portal | Kannada news online

ದಾವಣಗೆರೆ; ಜಿಲ್ಲೆಯಲ್ಲಿ ಶೇ.78.12ರಷ್ಟು ಮತದಾನ; ಜಿಲ್ಲಾಧಿಕಾರಿ ಮಾಹಿತಿ

ದಾವಣಗೆರೆ

ದಾವಣಗೆರೆ; ಜಿಲ್ಲೆಯಲ್ಲಿ ಶೇ.78.12ರಷ್ಟು ಮತದಾನ; ಜಿಲ್ಲಾಧಿಕಾರಿ ಮಾಹಿತಿ

ದಾವಣಗೆರೆ: ದಾವಣಗೆರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಂದ 11,26,497 ಜನರು ಮತದಾನ ಮಾಡಿದ್ದು, ಶೇ 78.12 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 721964 ಪುರುಷ, 720004 ಮಹಿಳೆಯರು, 118 ಇತರೆ ಸೇರಿ 1442086 ಮತದಾರರಲ್ಲಿ 573295 ಪುರುಷ, 553179 ಮಹಿಳೆಯರು ಹಾಗೂ 23 ಇತರೆ ಮತದಾರರು ಸೇರಿ ಒಟ್ಟು 11,26,497 ಜನರು ಮತದಾನ ಮಾಡಿದ್ದಾರೆ.

  • ಕ್ಷೇತ್ರವಾರು ವಿವರ;
    ಜಗಳೂರು 97690 ಪುರುಷ, 95257 ಮಹಿಳೆ, ಇತರೆ 11 ಸೇರಿ 192958 ರಲ್ಲಿ 79439 ಪುರುಷ, 75656 ಮಹಿಳೆ ಸೇರಿ 155095 ಜನರು ಮತದಾನ ಮಾಡಿದ್ದು, ಶೇ. 80.38
  • ಹರಿಹರ 103667 ಪುರುಷ, 103832 ಮಹಿಳೆ, 18 ಇತರೆ ಸೇರಿ 207517 ಮತದಾರರಲ್ಲಿ 85247 ಪುರುಷ, 81689 ಮಹಿಳೆ, 9 ಇತರೆ ಸೇರಿ 166945 ಮತ ಚಲಾವಣೆಯಾಗಿ ಶೇ. 80.45
  • ದಾವಣಗೆರೆ ಉತ್ತರ 119353 ಪುರುಷ, 121841 ಮಹಿಳೆ, 38 ಇತರೆ ಸೇರಿ 241232 ಮತದಾರರಲ್ಲಿ 82558 ಪುರುಷ, 82933 ಮಹಿಳೆ, 7 ಇತರೆ ಸೇರಿ 165498 ಮತದಾನ ಮಾಡಿ ಶೇ. 68.61
  • ದಾವಣಗೆರೆ ದಕ್ಷಿಣ 104762 ಪುರುಷ, 105873 ಮಹಿಳೆ, 33 ಇತರೆ ಸೇರಿ 210668 ಮತದಾರರಲ್ಲಿ 73556 ಪುರುಷ, 71975 ಮಹಿಳೆ, 3 ಇತರೆ ಸೇರಿ 145534 ಮತದಾನವಾಗಿ ಶೇ. 69.08
  • ಮಾಯಕೊಂಡ 96491 ಪುರುಷ, 94803 ಮಹಿಳೆ, 6 ಇತರೆ ಸೇರಿ 191300 ಒಟ್ಟು ಮತದಾರರಲ್ಲಿ 82623 ಪುರುಷ, 78603 ಮಹಿಳೆ, 2 ಇತರೆ ಸೇರಿ ಒಟ್ಟು 161228 ಮತ ಚಲಾವಣೆಯಾಗಿ ಶೇ. 84.28,
  • ಚನ್ನಗಿರಿ 100266 ಪುರುಷ, 99194 ಮಹಿಳೆ, 8 ಇತರೆ ಸೇರಿ 199468 ರಲ್ಲಿ 84576 ಪುರುಷ, 80123 ಮಹಿಳೆ, 1 ಇತರೆ ಸೇರಿ 164700 ಮತ ಚಲಾಯಿಸಿದ್ದು ಶೇ. 82.57
  • ಹೊನ್ನಾಳಿ ಕ್ಷೇತ್ರ 99735 ಪುರುಷ, 99204 ಮಹಿಳೆ, 4 ಇತರೆ ಸೇರಿ 198943 ಮತದಾರರಲ್ಲಿ 85296 ಪುರುಷ, 82200 ಮಹಿಳೆಯರು ಹಾಗೂ ಇತರೆ 1 ಸೇರಿ ಒಟ್ಟು 167497 ಮತದಾರರು ಮತ ಚಲಾಯಿಸಿದ್ದು ಶೇ. 84.19 ರಷ್ಟು ಮತದಾನವಾಗಿದೆ.

2018 ರಲ್ಲಿ ನಡೆದ ವಿಧಾನಸಭಾ ಚುನಾವಣೆ ಮತದಾನ ವಿವರ; ದಾವಣಗೆರೆ ಜಿಲ್ಲೆಯಲ್ಲಿ 2018 ರ ಚುನಾವಣೆಯಲ್ಲಿ 75.96 ಶೇಕಡವಾರು ಮತದಾನವಾಗಿತ್ತು. ಕ್ಷೇತ್ರವಾರು ವಿವರದನ್ವಯ ಜಗಳೂರು ಶೇ 77.37, ಹರಿಹರ 71.17, ದಾವಣಗೆರೆ ಉತ್ತರ 64.85, ದಾವಣಗೆರೆ ದಕ್ಷಿಣ65.54, ಮಾಯಕೊಂಡ 82.44, ಚನ್ನಗಿರಿ 79.91 ಹಾಗೂ ಹೊನ್ನಾಳಿಯಲ್ಲಿ ಶೇ 82.96 ರಷ್ಟು ಮತದಾನವಾಗಿತ್ತು.

2023 ರ ಮತದಾನ ಹೆಚ್ಚಳ ವಿವರ; 2023 ರ ವಿಧಾನಸಭಾ ಚುನಾವಣಾ ಮತದಾನದಲ್ಲಿ ಶೇಕಡವಾರು ಹೆಚ್ಚಳವಾದ ವಿವರ, ಜಗಳೂರು ಶೇ 3.03, ಹರಿಹರ 9.31, ದಾವಣಗೆರೆ ಉತ್ತರ 3.76, ದಕ್ಷಿಣ 3.54, ಮಾಯಕೊಂಡ 1.74, ಚನ್ನಗಿರಿ 2.63 ಹಾಗೂ ಹೊನ್ನಾಳಿ ಶೇ 1.25 ರಷ್ಟು ಮತದಾನ ಹೆಚ್ಚಳವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಇಟ್ನಾಳ್ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top