Connect with us

Dvgsuddi Kannada | online news portal | Kannada news online

ದಾವಣಗೆರೆ; ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರ; ಮೇ 13ರ ಮತ ಎಣಿಕೆಯತ್ತ ಎಲ್ಲರ ಚಿತ್ತ; ಶೇಕಡವಾರು ಮತದಾನ ಎಷ್ಟು..?

ದಾವಣಗೆರೆ

ದಾವಣಗೆರೆ; ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರ; ಮೇ 13ರ ಮತ ಎಣಿಕೆಯತ್ತ ಎಲ್ಲರ ಚಿತ್ತ; ಶೇಕಡವಾರು ಮತದಾನ ಎಷ್ಟು..?

ದಾವಣಗೆರೆ: ವಿಧಾನಸಭೆಗೆ ಇಂದು( ಮೇ 10) ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆದಿದೆ. ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಜಿಲ್ಲೆಯಲ್ಲಿ ಶೇ.77.21ರಷ್ಟು ಮತದಾನವಾಗಿದ್ದು, ಮೇ 13ರ ಮತ ಎಣಿಕೆಯತ್ತ ಎಲ್ಲರ ಚಿತ್ತ ನೆಟ್ಟಿದೆ‌.

  • ಕ್ಷೇತ್ರವಾರು ಶೇಕಡವಾರು ಮತದಾನ
  • ಜಗಳೂರು-80.17%
  • ಹರಿಹರ-79.78%
  • ದಾ. ಉತ್ತರ-67.49%
  • ದಾ. ದಕ್ಷಿಣ-66.32%
  • ಮಾಯಕೊಂಡ-83.89%
  • ಚನ್ನಗಿರಿ-81.94%
  • ಹೊನ್ನಾಳಿ-83.78%

ಜನಸ್ನೇಹಿ ಮತಗಟ್ಟೆಗಳ ಸ್ಥಾಪನೆ; ಮತದಾನ ಮಾಡುವ ಎಲ್ಲಾ ಮತಗಟ್ಟೆಗಳಲ್ಲಿ ಸ್ವಚ್ಚತೆ, ನೆರಳು, ಶೌಚಾಲಯ, ಕುಡಿಯುವ ನೀರಿನ ಸೌಕರ್ಯದ ಜೊತೆಗೆ ವಿಶೇಷ ಆಕರ್ಷಣೆಯ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಯುವ ಮತದಾರರು ಸೇರಿದಂತೆ, ಹಿರಿಯ ನಾಗರೀಕರು, ಮಹಿಳೆಯರು ಸೇರಿದಂತೆ ಎಲ್ಲರೂ ಮುಕ್ತವಾಗಿ, ನಿರ್ಭೀತಿಯಿಂದ ಮತದಾನ ಮಾಡುವ ಎಲ್ಲಾ ವ್ಯವಸ್ಥೆಯನ್ನು ಆಯೋಗವು ಕಲ್ಪಿಸಿರುವುದು ವಿಶೇಷವಾಗಿದೆ. ಈ ಭಾರಿ ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಡಲಾಗಿದೆ, ಬೇರೆಡೆ ವರ್ಗವಾಗಿದೆ ಎಂಬ ದೂರುಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಸಹ ಪ್ರಸ್ತುತ ಚುನಾವಣೆ ವಿಶೇಷವಾಗಿದೆ.

ಮತದಾನ ಆರಂಭದಿಂದಲೇ ಜನೋತ್ಸಾಹ; ಮೇ 10 ರಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಯಿತು. ಇದಕ್ಕೂ ಮೊದಲು ಅಭ್ಯರ್ಥಿಗಳಏಜೆಂಟರ ಸಮ್ಮುಖದಲ್ಲಿ ಅಣಕು ಮತದಾನ ಮಾಡಿಸುವ ಮೂಲಕ ಮತಯಂತ್ರಗಳ ಬಗ್ಗೆ ತಿಳಿಸಲಾಯಿತು‌. ಕೆಲಸವು ಬೆಳಗ್ಗೆ 6 ರಿಂದ 7 ಗಂಟೆಯ ಅವಧಿಯಲ್ಲಿ ಮುಕ್ತಾಯವಾಯಿತು. 7 ಗಂಟೆಯಿಂದಲೇ ಮತದಾನ ಮಾಡಲು ಜನರು ಸಾಲಗಟ್ಟಿ ಬರುತ್ತಿದ್ದರು. ಬೆಳಗ್ಗೆ 9 ಗಂಟೆಯ ವೇಳೆಗೆ ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳಿಂದ 100792 ಮತದಾರರು ಮತದಾನ ಮಾಡಿ ಶೇ 6.99 ಮತದಾನವಾಗಿತ್ತು.

ಮತದಾನ ದಿನ ಎಲ್ಲಾ ಸರ್ಕಾರಿ ಕಚೇರಿಗಳಿಗೆ, ಶಾಲಾ, ಕಾಲೇಜುಗಳಿಗೆ ರಜೆ ಮತ್ತು ಸಾರ್ವಜನಿಕ, ಖಾಸಗಿ ಕೈಗಾರಿಕೆಗಳಿಗೆ ಹಾಗೂ ಎಲ್ಲಾ ಅಂಗಡಿ ಮುಂಗಟ್ಟುಗಳಿಗೆ ರಜೆ ನೀಡಿದ್ದರಿಂದ ಕುಟುಂಬ ಸಮೇತರಾಗಿ ಬೆಳಗಿನ ಉಪಹಾರ ಮುಗಿಸಿ ಮತದಾನ ಕೇಂದ್ರದತ್ತ ಹೆಜ್ಜೆ ಹಾಕಿದರು.

ಇದು ಮಧ್ಯಾಹ್ನ 11 ಗಂಟೆಯ ವೇಳೆಗೆ 299670 ಜನರು ಮತದಾನ ಮಾಡಿ ಶೇ 20.78 ಕ್ಕೆ ತಲುಪಿತು. ಮೊದಲ ಮತದಾರರಾದ ಯುವಕ, ಯುವತಿಯರು ತಮ್ಮ ಪೋಷಕರ ಜೊತೆಗೆ ಮತದಾನ ಮಾಡಲು ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಪ್ರಜಾಪ್ರಭುತ್ವದ ಭಾಗವಾಗುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದದು ವಿಶೇಷವಾಗಿತ್ತು. ಮಧ್ಯಾಹ್ನ 1 ಗಂಟೆಯ ವೇಳೆ 557261 ಜನರು ಮತದಾನ ಮಾಡಿ ಶೇ 38.64 ಕ್ಕೆ ತಲುಪಿತು.

ಎಲ್ಲಾ ಮತಗಟ್ಟೆಗಳಲ್ಲಿ ಮತದಾನ ಮಾಡಲು ಸಾಲುಗಟ್ಟಿ ಸರದಿಯಲ್ಲಿ ನಿಂತಿರುವುದು ಎದ್ದು ಕಾಣುತ್ತಿತ್ತು, ಈಗೆ ಅಣಜಿ, ಬಿಳಿಚೋಡು, ಹೆಬ್ಬಾಳು, ಮಾಯಕೊಂಡ ಸೇರಿದಂತೆ ಬಹುತೇಕ ಎಲ್ಲಾ ಮತಗಟ್ಟೆಗಳಲ್ಲಿ ಇದೇ ಉತ್ಸಾಹ ಎದ್ದು ಕಾಣುತ್ತಿತ್ತು. ಇದು ಸಂಜೆ 5 ಗಂಟೆಯ ವೇಳೆಗೆ 1018309 ಮತದಾರರು ಮತದಾನ ಮಾಡಿ ಶೇ 70.61 ಕ್ಕೆ ತಲುಪಿತ್ತು.

ದಾವಣಗೆರೆ ಜಿಲ್ಲೆಯಲ್ಲಿ 7 ಕ್ಷೇತ್ರಗಳಿಂದ 721964 ಪುರುಷ, 720004 ಮಹಿಳೆಯರು, 118 ಇತರೆ ಮತದಾರರು ಸೇರಿ ಒಟ್ಟು 1442086 ಮತದಾರರಿದ್ದರು. 1685 ಮತಗಟ್ಟೆಗಳಲ್ಲಿ ಮತದಾನವು ನಡೆಯಿತು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top