ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಬೆಲೆ ಸ್ಥಿರವಾಗಿದೆ. ಒಂದು ತಿಂಗಳಿಂದ ಸತತ ಏರುಗತಿಯಲ್ಲಿದ್ದ ಅಡಿಕೆ ಬೆಲೆ, ಸ್ವಲ್ಪ ಇಳಿಕೆಯಾದರೂ ಸ್ಥಿರವಾಗಿದೆ. ಇಂದು( ಆ.6) ಜಿಲ್ಲೆಯಲ್ಲಿ ರಾಶಿ ಅಡಿಕೆ ಗರಿಷ್ಠ 54, 809 ರೂ. ಮಾರಾಟವಾಗಿದೆ. ಹಿಂದಿನ ಎರಡು ದಿನದ 54,109 ಮಾರಾಟವಾಗಿತ್ತು. 700ರೂ.ಗಳಷ್ಟು ಚೇತರಿಕೆ ಕಂಡಿದೆ.
ಏಪ್ರಿಲ್ ನಲ್ಲಿ 48 ಸಾವಿರವಿದ್ದ ಬೆಲೆ, ಮೇ ನಲ್ಲಿ 49 ಸಾವಿರ ಗಡಿ ದಾಟಿತ್ತು. ಜೂನ್ ನಲ್ಲಿ 50 ಸಾವಿರ ಗಡಿ ದಾಟಿದ್ದ ಬೆಲೆ, ಜುಲೈನಲ್ಲಿ ಗರಿಷ್ಠ 57 ಸಾವಿರ ಗಡಿ ದಾಟಿತ್ತು. ಇದೀಗ ಆಗಸ್ಟ್ ತಿಂಗಳಲ್ಲಿ ಸತತ ಇಳಿಕೆ ಕಂಡು ಈಗ ಸ್ವಲ್ಪ ಚೇತರಿಕೆ ಕಂಡಿದೆ. ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಆ.06 ರಂದು ಪ್ರತಿ ಕ್ವಿಂಟಾಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 44,110 ಗರಿಷ್ಠ ಬೆಲೆ 54,809 ಹಾಗೂ ಸರಾಸರಿ ಬೆಲೆ 52,233 ರೂ.ಗೆ ಮಾರಾಟವಾಗಿದೆ.



