Connect with us

Dvgsuddi Kannada | online news portal | Kannada news online

ದಾವಣಗೆರೆ: ರಾಶಿ ಅಡಿಕೆ ಬೆಲೆಯಲ್ಲಿ ದಿಢೀರ್ ಏರಿಕೆ; ಇಂದಿನ ಕನಿಷ್ಠ, ಗರಿಷ್ಠ ಬೆಲೆ ಎಷ್ಟಿದೆ..? ವಾತಾವರಣದಲ್ಲಿ ಹೆಚ್ಚಿದ ಬಿಸಿಗಾಳಿ; ಒಣಗಿದ ಬೆಳೆ..!!

ದಾವಣಗೆರೆ

ದಾವಣಗೆರೆ: ರಾಶಿ ಅಡಿಕೆ ಬೆಲೆಯಲ್ಲಿ ದಿಢೀರ್ ಏರಿಕೆ; ಇಂದಿನ ಕನಿಷ್ಠ, ಗರಿಷ್ಠ ಬೆಲೆ ಎಷ್ಟಿದೆ..? ವಾತಾವರಣದಲ್ಲಿ ಹೆಚ್ಚಿದ ಬಿಸಿಗಾಳಿ; ಒಣಗಿದ ಬೆಳೆ..!!

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರದಲ್ಲಿ (arecanut rate) ಒಂದೇ ದಿನ 400 ರೂ. ಗಳಷ್ಟು ಏರಿಕೆ ಕಂಡಿದೆ. ಏಪ್ರಿಲ್ 05 ರಂದು ರಾಶಿ ಅಡಿಕೆ ಗರಿಷ್ಠ‌ ಬೆಲೆ ಕ್ವಿಂಟಲ್ ಗೆ 48,899 ರೂ.ಗಳಿದ್ದು, ಕನಿಷ್ಠ ಬೆಲೆ 46,599 ರೂ.ಗಳಾಗಿದೆ. ಹಿಂದಿನ ದಿನ ಗರಿಷ್ಠ 48,529 ರೂಪಾಯಿ ಇತ್ತು. ಕಳೆದ ವರ್ಷ (2023) ಜುಲೈ ತಿಂಗಳಲ್ಲಿ ಗರಿಷ್ಠ 57 ಸಾವಿರ ತಲುಪಿತ್ತು. ಹೀಗಾಗಿ ಸ್ವಲ್ಪ‌ ದಿನ ಇಟ್ಟು ಮಾರಾಟ ಮಾಡುವವರಿಗೆ‌ ಮುಂದೆ ಒಳ್ಳೆಯ ರೇಟ್ ಸಿಗುವ ಸಾಧ್ಯತೆ ಇದೆ.

ಏಪ್ರಿಲ್ ತಿಂಗಳು ಆರಂಭವಾಗಿದ್ದು, ಅಸಲಿ ಬೇಸಿಗೆ ಈಗ ಶುರುವಾಗಿದೆ. ಬೋರ್ ವೆಲ್ ಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತವಾಗಿದೆ. ವಾತಾವರಣದಲ್ಲಿ ಬಿಸಿಗಾಳಿ ಹೆಚ್ಚಿದ್ದು, ಅಡಿಕೆ ಬೆಳೆ ಒಣಗುತ್ತಿವೆ. ಹೇಗಾದ್ರೂ ಮಾಡಿ ಏಪ್ರಿಲ್, ಮೇ ತಿಂಗಳಲ್ಲಿ ಅಡಿಕೆ ತೋಟ ಬದುಕಿಸಿಕೊಂಡರೆ ಸಾಕು ಎನ್ನುತ್ತಿದ್ದಾರೆ ರೈತರು. ಅಡಿಕೆ ತೋಟದಲ್ಲಿ ಅಡಿಕೆ ಕಾಯಿ ಕಟ್ಟುವ ಕಾರ್ಯ ಶುರುವಾಗಿದೆ. ಆದರೆ, ಜಿಲ್ಲೆಯಲ್ಲಿ ಬಿಸಿ ವಾತಾವರಣ ನಿರ್ಮಾಣವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ತಾಪಮಾನಕ್ಕೆ ಹರಳು ಉದುರುತ್ತಿವೆ. ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದ್ದು, ಬೋರ್ ವೆಲ್ ಗಳು ಬತ್ತಿದ್ದ ಕೆಲವು ಕಡೆ ರೈತರು ಟ್ಯಾಂಕರ್ ಮೊರೆ ಹೋಗಿದ್ದಾರೆ.

2023ರ ಏಪ್ರಿಲ್ ನಲ್ಲಿ 48 ಸಾವಿರವಿದ್ದ ಬೆಲೆ, ಮೇನಲ್ಲಿ 49 ಸಾವಿರ ಗಡಿ ದಾಟಿತ್ತು. ಜೂನ್ ನಲ್ಲಿ 50 ಸಾವಿರ ಗಡಿ ದಾಟಿದ್ದ ಬೆಲೆ, ಜುಲೈನಲ್ಲಿ ವರ್ಷದಲ್ಲಿಯೇ ಗರಿಷ್ಠ 57 ಸಾವಿರ ತಲುಪಿತ್ತು. ಆಗಸ್ಟ್ ತಿಂಗಳಲ್ಲಿ ಸತತ ಇಳಿಕೆ ಕಂಡು 48 ಸಾವಿರ ತಲುಪಿತ್ತು. ಸೆಪ್ಟೆಂಬರ್‌ ಮೊದಲ 15 ದಿನ ‌46 ಸಾವಿರಕ್ಕೆ ಕುಸಿದು ಆತಂಕ ಉಂಟು ಮಾಡಿತ್ತು. ಆದರೆ, ಅಕ್ಟೋಬರ್ ‌ಕೊನೆಯ ವಾರ ಮತ್ತೆ 47,800 ರೂ.ಗೆ ಏರಿಕೆ ಕಂಡಿತ್ತು. ನವೆಂಬರ್ ನಲ್ಲಿ 47 ಸಾವಿರಕ್ಕೆ ತಲುಪಿ ಸ್ಥಿರವಾಗಿತ್ತು. ಡಿಸೆಂಬರ್ ನಲ್ಲಿ 48 ಸಾವಿರ ಗಡಿ ದಾಟಿತ್ತು. ಇದೀಗ 2024 ಜನವರಿ 15ರಂದು ಗರಿಷ್ಠ ದರ 50,500 ರೂಪಾಯಿ ಗಡಿ ತಲುಪಿತ್ತು. ಫೆಬ್ರವರಿ ತಿಂಗಳಿಂದ ಸತತ ಕುಸಿತ ಕಂಡು ಈಗ 48ಸಾವಿರದಿಂದ 49 ಸಾವಿರ ಗಡಿ ಸಮೀಪ ಬಂದಿದೆ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಏಪ್ರಿಲ್ 05ರಂದು ಪ್ರತಿ ಕ್ವಿಂಟಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 46,599 ರೂ, ಗರಿಷ್ಠ ಬೆಲೆ 48,899 ಹಾಗೂ ಸರಾಸರಿ ಬೆಲೆ 48,414ರೂ.ಗೆ ಮಾರಾಟವಾಗಿದೆ. ಇನ್ನೂ ಬೆಟ್ಟೆ ಅಡಿಕೆ ಗರಿಷ್ಠ 32,129 ರೂ‌.ಗೆ ಮಾರಾಟವಾಗಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top