Connect with us

Dvgsuddi Kannada | online news portal | Kannada news online

ದಾವಣಗೆರೆ: ಅಡಿಕೆ ಬೆಲೆಯಲ್ಲಿ ಭರ್ಜರಿ ಏರಿಕೆ; 49 ಸಾವಿರ ಗಡಿದಾಟಿ 50 ಸಾವಿರ ಗಡಿ ಸಮೀಪ; ರೈತರಲ್ಲಿ ಸಂತಸ

ದಾವಣಗೆರೆ

ದಾವಣಗೆರೆ: ಅಡಿಕೆ ಬೆಲೆಯಲ್ಲಿ ಭರ್ಜರಿ ಏರಿಕೆ; 49 ಸಾವಿರ ಗಡಿದಾಟಿ 50 ಸಾವಿರ ಗಡಿ ಸಮೀಪ; ರೈತರಲ್ಲಿ ಸಂತಸ

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಧಾರಣೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ರೈತರಲ್ಲಿ ಸಂತಸ ಮನೆ ಮಾಡಿದೆ. ಮಾರ್ಚ್ ಅಂತ್ಯದಲ್ಲಿ ಕುಸಿತದಲ್ಲಿದ್ದ ಬೆಲೆ ಏಪ್ರಿಲ್ ಆರಂಭದಲ್ಲಿ ಸ್ವಲ್ಪ ಚೇತರಿಕೆ ಕಂಡು ಇದೀಗ ಭರ್ಜರಿ ಬೆಲೆ ಏರಿಕೆಯತ್ತ‌ ಮುಖ ಮಾಡಿದೆ. ಇದರಿಂದ ಅಡಿಕೆ ಬೆಳೆದ ರೈತರಲ್ಲಿ ಸಂತಸದಲ್ಲಿದ್ದಾರೆ. ಕಳೆದ 15 ದಿನದಲ್ಲಿ 2 ಸಾವಿರದ 500 ರಷ್ಟು‌ಏರಿಕೆ‌ ಕಂಡಿದೆ. ಇದೀಗ ಪ್ರತಿ ಕ್ವಿಂಟಾಲ್ ಬೆಲೆ 50 ಸಾವಿರ ಗಡಿ ಸಮೀಪ ಬಂದು ನಿಂತಿದೆ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿಯಲ್ಲಿ ದಿನದ ವಹಿವಾಟಿನಲ್ಲಿ ಏ.19 ರಂದು ಪ್ರತಿ ಕ್ವಿಂಟಾಲ್ ಗೆ ಗರಿಷ್ಠ 49,200 ರೂ.ಗೆ ಮಾರಾಟವಾಗಿದೆ. ನಿನ್ನೆ 47,639 ರೂ.ಗೆ ಮಾರಾಟವಾಗಿತ್ತು. ಉತ್ತಮ ರಾಶಿಯ ಕನಿಷ್ಠ ಬೆಲೆ‌ 46,499 ಆಗಿದ್ದು, ಗರಿಷ್ಠ ಬೆಲೆ 49,200 ಹಾಗೂ ಸರಾಸರಿ ಬೆಲೆ 48,421ರೂ. ಆಗಿದೆ. ಮುಂದಿನಗಳಲ್ಲಿ ಅಡಿಕೆ ಧಾರಣೆ ಮತ್ತಷ್ಟು ಚೇತರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top