ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಬೆಲೆಯಲ್ಲಿ ಕಳೆದ 10 ದಿನದಿಂದ ಸ್ಥಿರ ಬೆಲೆ ಕಂಡು ಬರುತ್ತಿದೆ. ಹಿಂದಿನ ದಿನದ ಮಾರುಕಟ್ಟೆಗೆ ಹೋಲಿಸಿದ್ರೆ ಇಂದು (ಅ.27) ಸಹ ಬೆಲೆ ಸ್ಥಿರವಾದ ಬೆಲೆ ಇದೆ. ಇಂದಿನ ರಾಶಿ ಅಡಿಕೆ ಬೆಲೆ ಗರಿಷ್ಠ ಬೆಲೆ 48,100 ರೂಪಾಯಿಗಳಾಗಿದ್ದು, ಕನಿಷ್ಠ ಬೆಲೆ 44,009 ರೂ. ಆಗಿದೆ.
ಏಪ್ರಿಲ್ ನಲ್ಲಿ 48 ಸಾವಿರವಿದ್ದ ಬೆಲೆ, ಮೇ ನಲ್ಲಿ 49 ಸಾವಿರ ಗಡಿ ದಾಟಿತ್ತು. ಜೂನ್ ನಲ್ಲಿ 50 ಸಾವಿರ ಗಡಿ ದಾಟಿದ್ದ ಬೆಲೆ, ಜುಲೈನಲ್ಲಿ ಗರಿಷ್ಠ 57 ಸಾವಿರ ತಲುಪಿತ್ತು. ಆಗಸ್ಟ್ ತಿಂಗಳಲ್ಲಿ ಸತತ ಇಳಿಕೆ ಕಂಡು 48 ಸಾವಿರ ತಲುಪಿತ್ತು. ಸೆಪ್ಟೆಂಬರ್ ಮೊದಲ 15 ದಿನ 46 ಸಾವಿರಕ್ಕೂ ಕುಸಿದಿತ್ತು. ಅಕ್ಟೋಬರ್ ಮೊದಲ ವಾರ ಮತ್ತೆ 48 ಸಾವಿರಕ್ಕೆ ಏರಿಕೆಯಾಗಿ ಸ್ಥಿರತೆ ಕಾಯ್ದುಕೊಂಡಿತ್ತು. ಇದೀಗ ಅಕ್ಟೋಬರ್ ತಿಂಗಳ ಕೊನೆ ವಾರದಲ್ಲಿಯೂ ಸಹ ಸ್ಥಿರ ಬೆಲೆ ಕಾಣುತ್ತಿದೆ.
ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಅ. 27 ರಂದು ಪ್ರತಿ ಕ್ವಿಂಟಾಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 44,009, ಗರಿಷ್ಠ ಬೆಲೆ 48,100 ಹಾಗೂ ಸರಾಸರಿ ಬೆಲೆ 46,289ರೂ.ಗೆ ಮಾರಾಟವಾಗಿದೆ. ಬೆಟ್ಟೆ ಅಡಿಕೆ ಗರಿಷ್ಠ ಬೆಲೆ 39,131 ರೂ.ಗೆ ಮಾರಾಟವಾಗಿದೆ.



