ದಾವಣಗೆರೆ: ಜಿಲ್ಲೆಯ ರೈತರ ಮುಖ್ಯ ಬೆಳೆಯಾದ ಅಡಿಕೆ ದರ (arecanut rate) ದಿಢೀರ್ ಕುಸಿತ ಕಂಡಿದೆ. ಹೊಸ ವರ್ಷ (2026) ಆರಂಭದಿಂದಲೂ ಸತತ ಏರಿಕೆ ಕಾಣುತ್ತಿದ್ದ ಅಡಿಕೆ ದರ ಇಂದು (ಡಿ. 9) ಏಕಾಏಕಿ ದರ ಕುಸಿತ ಕಂಡಿದೆ. ಹಿಂದಿನ ದಿನದ ಮಾರುಕಟ್ಟೆಗೆ ಹೋಲಿಸಿದ್ರೆ ಇಂದು 2 ಸಾವಿರ ಇಳಿಕೆಯಾಗಿದೆ.
ಡಿ.7 ರಂದು ಪ್ರತಿ ಕ್ವಿಂಟಲ್ ಗೆ ಗರಿಷ್ಠ ಬೆಲೆ 59,299 ರೂ. ಇದ್ದ ಬೆಲೆ ಈಗ 57 ಸಾವಿರಕ್ಕೆ ಇಳಿಕೆಯಾಗಿದೆ. ಡಿಸೆಂಬರ್ ತಿಂಗಳಲ್ಲಿ 55 ಸಾವಿರ ಗಡಿಯಲ್ಲಿದ್ದ ದರ, ಜನವರಿಯಲ್ಲಿ ಸತತ ಏರಿಕೆ ಕಂಡು 60 ಸಾವಿರ ಸಮೀಪ ಬಂದಿತ್ತು. ಆದರೆ, ಎರಡೇ ದಿನದಲ್ಲಿ 2 ಸಾವಿರ ಇಳಿಕೆ ಕಂಡು ರೈತರಲ್ಲಿ ಆತಂಕ ಮೂಡಿಸಿದೆ.
ಜ.09 ಚನ್ನಗಿರಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಲ್ ದರ)
- ಗರಿಷ್ಠ ಬೆಲೆ 57,599
- ಕನಿಷ್ಠ ಬೆಲೆ 48,700
- ಸರಾಸರಿ ಬೆಲೆ 56,074
ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ (Channagiri) ವಹಿವಾಟಿನಲ್ಲಿ ಜ.9ರಂದು ರಾಶಿ ಅಡಿಕೆ ಗರಿಷ್ಠ ಬೆಲೆ ಕ್ವಿಂಟಲ್ ಗೆ 57,599 ರೂ. ಇದ್ದು, ಕನಿಷ್ಠ ಬೆಲೆ 48,700 ರೂ., ಸರಾಸರಿ ಬೆಲೆ 56,074 ರೂ.ಇದೆ. ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕಿನಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದೆ. ಜಿಲ್ಲೆಯಲ್ಲಿ ಕೊಯ್ಲು ಸಂಪೂರ್ಣ ಮುಗಿದಿದೆ.
ದಾವಣಗೆರೆ ದಕ್ಷಿಣಕ್ಕೆ ಎಸ್.ಎಸ್.ಗಣೇಶ್ ಅಭ್ಯರ್ಥಿಯಾಗಲಿ; ಬಿಜೆಪಿ ಹಿರಿಯ ನಾಯಕ ರವೀಂದ್ರನಾಥ್
ಅಡಿಕೆ ಟೆಂಡರ್ ಇರುವುದಿಲ್ಲ
ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘ ನಿಯಮಿತ (ತುಮ್ಕೋಸ್ ) ಸದಸ್ಯರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ಕೇಂದ್ರ ಕಚೇರಿ ಸೇರಿದಂತೆ ಎಲ್ಲಾ ಶಾಖೆಗಳ ಗೋದಾಮುಗಳು ಭರ್ತಿಯಾಗಿರುವ ಕಾರಣ ದಿನಾಂಕ 10-01-2026 ರಿಂದ 13-01-2026ರ (ಶನಿವಾರದಿಂದ ಮಂಗಳವಾರ) ವರೆಗೆ ಸಂಘದ ಎಲ್ಲಾ ಶಾಖೆಗಳಲ್ಲಿ ಟೆಂಡರ್
ಮತ್ತು ಅಡಿಕೆ ತೂಕ ಇರುವುದಿಲ್ಲ.
ದಿನಾಂಕ 14-01-2026ರಂದು (ಬುಧವಾರ) ಸಂಕ್ರಾಂತಿ ಪ್ರಯುಕ್ತ ಕೇಂದ್ರ ಕಚೇರಿ ಮತ್ತು ಸಂಘದಎಲ್ಲಾ ಶಾಖೆಗಳು ರಜೆ ಇರುತ್ತದೆ. ಸದಸ್ಯರು ಸಹಕರಿಸ ಬೇಕೆಂದು ಈ
ಮೂಲಕ ಕೋರಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ಪ್ರಕರಣೆಯಲ್ಲಿ ತಿಳಿಸಿದ್ದಾರೆ.
ನಾಲ್ಕು ವರ್ಷಗಳ ಗರಿಷ್ಠ ದರ ಪಟ್ಟಿ
- 2023 ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ
- 2024 ಮೇ ತಿಂಗಳಲ್ಲಿ ಗರಿಷ್ಠ ದರ 55 ಸಾವಿರ
- 2025 ಅಕ್ಟೋಬರ್ ನಲ್ಲಿ ಗರಿಷ್ಠ ದರ 68,349 ರೂ.
- 2026 ಜನವರಿ ಗರಿಷ್ಠ ದರ 57,599 ರೂ.
ದಾವಣಗೆರೆ: ಅಡಿಕೆಗೆ ಬಂಗಾರದ ಬೆಲೆ- ಬೆಳೆಗಾರರು, ಖೇಣಿದಾರರಿಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಕಿರಿಕ್
2025ರ ಜನವರಿ ಕೊನೆಯಲ್ಲಿ 52 ಸಾವಿರ ಒಳಗೆ ಇದ್ದ ದರ, ಫೆಬ್ರವರಿಯಲ್ಲಿ ಮತ್ತೆ 53 ಸಾವಿರ ಗಡಿದಾಟಿತ್ತು. ಮಾರ್ಚ್ ಮೊದಲ ವಾರದಲ್ಲಿ ಸ್ವಲ್ಪ ಇಳಿಕೆಯಾಗಿದ್ದು, ತಿಂಗಳ ಕೊನೆಯಲ್ಲಿ ಮತ್ತೆ 53 ಸಾವಿರ ಗಡಿ ಮುಟ್ಟಿತ್ತು. ಮೇ ತಿಂಗಳಲ್ಲಿ 59,512 ರೂ.ಗೆ ಇಳಿದಿದ್ದು, ಜೂನ್ ಆರಂಭದಲ್ಲಿ 59,000 ರೂ. ಇದ್ದು ಕೊನೆಯಲ್ಲಿ 56,599 ರೂ. ಗೆ ಇಳಿಕೆಯಾಗಿತ್ತು. ಜುಲೈ ಮೊದಲ ವಾರ ಚೇತರಿಕೆ ಕಂಡು ಈಗ 58,099 ರೂ. ಆಗಿತ್ತು. ಆಗಸ್ಟ್ ಆರಂಭದಲ್ಲಿ ಸತತ ಏರಿಕೆ ಕಂಡು ಕ್ವಿಂಟಲ್ ಗೆ 60,500ರೂ. ತಲುಪಿತ್ತು. ಈಗ ಸೆಪ್ಟೆಂಬರ್ ನಲ್ಲಿ 62,889 ರೂ. ಇತ್ತು. ಅಕ್ಟೋಬರ್ ತಿಂಗಳಲ್ಲಿ ಈ ವರ್ಷದಲ್ಲಿಯೇ ಗರಿಷ್ಠ ಬೆಲೆ 68, 349 ರೂ. ಇತ್ತು. ನವೆಂಬರ್ 60 ಸಾವಿರ ಗಡಿ ದಾಟಿತ್ತು. ಡಿಸೆಂಬರ್ 58,35 ರೂ. ಇತ್ತು. 2026 ವರ್ಷದ ಮೊದಲ ತಿಂಗಳು ಜನವರಿಯಲ್ಲಿ 57,599 ರೂ. ಇದೆ.



