Connect with us

Dvgsuddi Kannada | online news portal | Kannada news online

ದಾವಣಗೆರೆ: ಸತತ ಕುಸಿತ ಬಳಿಕ ಅಡಿಕೆ ದರದಲ್ಲಿ ಚೇತರಿಕೆ; ಜು.02ರ ಕನಿಷ್ಠ, ಗರಿಷ್ಠ ದರ ಎಷ್ಟಿದೆ..?

arecanut rate today

ದಾವಣಗೆರೆ

ದಾವಣಗೆರೆ: ಸತತ ಕುಸಿತ ಬಳಿಕ ಅಡಿಕೆ ದರದಲ್ಲಿ ಚೇತರಿಕೆ; ಜು.02ರ ಕನಿಷ್ಠ, ಗರಿಷ್ಠ ದರ ಎಷ್ಟಿದೆ..?

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರವು (arecanut rate) ಸತತ ಕುಸಿತ ಬಳಿಕ ಜುಲೈ ಮೊದಲ ವಾರದಲ್ಲಿ ಚೇತರಿಕೆ ಕಂಡಿದೆ. ಜು.2ರ ಗರಿಷ್ಠ ಬೆಲೆ ಪ್ರತಿ ಕ್ವಿಂಟಲ್ ಗೆ 57000 ರೂ.ಇದೆ. ಕಳೆದ ತಿಂಗಳು ಪೂರ್ತಿ ಕುಸಿತ ಹಾದಿಯಲ್ಲಿತ್ತು.

ಜು.2ರ ಚನ್ನಗಿರಿ ರಾಶಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಲ್ ದರ)

  • ಗರಿಷ್ಠ ಬೆಲೆ 57000
  • ಕನಿಷ್ಠ ಬೆಲೆ 51,859
  • ಸರಾಸರಿ ಬೆಲೆ 54,230

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ (Channagiri) ವಹಿವಾಟಿನಲ್ಲಿ‌ ಜು.2ರಂದು ರಾಶಿ ಅಡಿಕೆ ಗರಿಷ್ಠ‌ ಬೆಲೆ ಕ್ವಿಂಟಲ್ ಗೆ 57000 ಇದ್ದು, ಕನಿಷ್ಠ ಬೆಲೆ 51,859 ರೂ., ಸರಾಸರಿ ಬೆಲೆ 54,230 ರೂ.‌ಇದೆ.

ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕಿನಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದೆ. ಜಿಲ್ಲೆಯಲ್ಲಿ ಉತ್ತಮವಾಗಿ ಮುಂಗಾರು ಮಳೆಯಾಗುತ್ತಿದ್ದು, ರೈತರಲ್ಲಿ ಸಂತಸ ತಂದಿದೆ.

2025ರ ಜನವರಿ ಕೊನೆಯಲ್ಲಿ 52 ಸಾವಿರ ಒಳಗೆ ಇದ್ದ ದರ, ಫೆಬ್ರವರಿಯಲ್ಲಿ ಮತ್ತೆ 53 ಸಾವಿರ ಗಡಿದಾಟಿತ್ತು. ಮಾರ್ಚ್ ಮೊದಲ ವಾರದಲ್ಲಿ ಸ್ವಲ್ಪ ಇಳಿಕೆಯಾಗಿದ್ದು, ತಿಂಗಳ ಕೊನೆಯಲ್ಲಿ ಮತ್ತೆ 53 ಸಾವಿರ ಗಡಿ ಮುಟ್ಟಿತ್ತು. ಏಪ್ರಿಲ್ 23ರಂದು ಗರಿಷ್ಠ ಬೆಲೆ 60,669 ರೂ. ಇತ್ತು. ಮೇ ತಿಂಗಳ 59,512 ರೂ.ಗೆ ಇಳಿದಿದ್ದು, ಜೂನ್ ಆರಂಭದಲ್ಲಿ 59,000 ರೂ. ಇದ್ದು ಕೊನೆಯಲ್ಲಿ 56,599 ರೂ. ಗೆ ಇಳಿಕೆಯಾಗಿತ್ತು. ಜು. ಮೊದಲ ವಾರ ಚೇತರಿಕೆ ಕಂಡು 57000 ರೂ. ಆಗಿದೆ. 2023 ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ ತಲುಪಿತ್ತು. ಕಳೆದ ವರ್ಷ (2024) ಮೇ ತಿಂಗಳಲ್ಲಿ ಗರಿಷ್ಠ 55 ಸಾವಿರ ತಲುಪಿತ್ತು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top