Connect with us

Dvgsuddi Kannada | online news portal | Kannada news online

ದಾವಣಗೆರೆ: ಅಡಿಕೆ ಬೆಲೆಯಲ್ಲಿ ಮತ್ತೆ ಕುಸಿತ..!

arecanut

ಚನ್ನಗಿರಿ

ದಾವಣಗೆರೆ: ಅಡಿಕೆ ಬೆಲೆಯಲ್ಲಿ ಮತ್ತೆ ಕುಸಿತ..!

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಧಾರಣೆಯಲ್ಲಿ ಮತ್ತೆ ಕುಸಿತ ಕಂಡಿದೆ. ದಿನದ ವಹಿವಾಟಿನ ಏರಿಳಿತ ನಡುವೆಯೇ ಜಿಲ್ಲೆಯ ಇವತ್ತಿನ(ಜ.30) ಮಾರುಕಟ್ಟೆ ಬೆಲೆ ಪ್ರತಿ ಕ್ವಿಂಟಾಲ್ ಗೆ ಗರಿಷ್ಠ 46,899 ರೂ.ಗೆ ಮಾರಾಟವಾಗಿದೆ. ಈ ಮೂಲಕ ಕಳೆದ ದಿನದ ಮಾರುಕಟ್ಟೆಗೆ ಹೊಲಿಸಿದ್ರೆ 150 ರೂಪಾಯಿ ಇಳಿಕೆಯಾಗಿದೆ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿಯಲ್ಲಿ ಉತ್ತಮ ರಾಶಿ ಪ್ರತಿ ಕ್ವಿಂಟಾಲ್ ಗೆ ದರ 46,899 ಗರಿಷ್ಠ ಬೆಲೆ ದಾಖಲಾಗಿದೆ. ನಿನ್ನೆ ಕ್ವಿಂಟಾಲ್ ಗೆ ಗರಿಷ್ಠ 47,037 ರೂ. ದಾಖಲಾಗಿತ್ತು. ಈ ಮೂಲಕ ಬೆಲೆಯಲ್ಲಿ ಇವತ್ತು 150 ರೂಪಾಯಿ ಇಳಿದಿದೆ. 2nd ಬೆಟ್ಟೆ ಅಡಿಕೆ ಗರಿಷ್ಠ 37,229 ಬೆಲೆಗೆ ಮಾರಾಟವಾದೆ.

ಇವತ್ತಿನ (ಜ.30) ಉತ್ತಮ ರಾಶಿಯ ಕನಿಷ್ಠ ಬೆಲೆ‌ 45,299 ಆಗಿದ್ದು, ಗರಿಷ್ಠ ಬೆಲೆ 46,899 ಹಾಗೂ ಸರಾಸರಿ ಬೆಲೆ 45,869 ಆಗಿದೆ. ಇನ್ನೂ 2nd ಬೆಟ್ಟೆ ಅಡಿಕೆ ಬೆಲೆ ಕನಿಷ್ಠ 33,479 ಗರಿಷ್ಠ ಬೆಲೆ37,229 ಹಾಗೂ ಸರಾಸರಿ ಬೆಲೆ 35,102 ಆಗಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಜಗಳೂರು, ಹರಿಹರ, ನ್ಯಾಮತಿ, ಮಾಯಕೊಂಡ ಸೇರಿದಂತೆ ಎಲ್ಲ ಕಡೆ ಅಧಿಕ ಪ್ರಮಾಣದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಅಡಿಕೆ ಬೆಲೆ ಕುಸಿತದಿಂದ ರೈತರಲ್ಲಿ ಆತಂಕ ಉಂಟು ಮಾಡಿತ್ತು. ಇದೀಗ ದಿನದಿಂದ ದಿನಕ್ಕೆ ಸ್ವಲ್ಪ ಚೇತರಿಕೆ ಕಂಡಿದ್ದರೂ ನೂರು, ಇನ್ನೂರು ರೂಪಾಯಿ ಏರಿಳಿತ ಕಾಣುತ್ತಿದೆ. ಜನವರಿ ತಿಂಗಳಲ್ಲಿ ಏರಿಕೆ ಕಾಣುತ್ತಿರುವುದು ರೈತರ ಮೊಗದಲ್ಲಿ ಸಂತಸ ಮೂಡುವಂತೆ ಮಾಡಿದೆ. ಮುಂದಿನಗಳಲ್ಲಿ ಅಡಿಕೆ ಧಾರಣೆ ಮತ್ತಷ್ಟು ಚೇತರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಚನ್ನಗಿರಿ

ದಾವಣಗೆರೆ

Advertisement
Advertisement Enter ad code here

Title

To Top