ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕು ರಾಮತೀರ್ಥ ಮತ್ತು ನಾಗೇನಹಳ್ಳಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಇತ್ತೀಚಿಗೆ ಸುರಿದ ಭಾರೀ ಮಳೆಯಿಂದ ಹಾನಿಗೀಡಾದ ಎಲೆ ಬಳ್ಳಿ ತಾಕುಗಳಿಗೆ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ತಜ್ಞ ಬಸವನಗೌಡ ಭೇಟಿ ನೀಡಿ, ಬೆಳೆ ಚೇತರಿಕೆಗೆ ಸಲಹೆ ನೀಡಿದರು.
ನೀರು ಬಸಿದಿರುವ ತೋಟದಲ್ಲಿ Copper Oxy Chloride 3 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರಸಿ ಬುಡಕ್ಕೆ ಹಾಕಬೇಕು. ಒಂದು ವಾರದ ನಂತರ Ridomyl gold 3g+ ಲಘು ಪೋಷಕಾಂಶ ದ ಮಿಶ್ರಣ 5 ಮಿಲೀ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ. ಅತಿಯಾಗಿ ನೀರು ನಿಂತಿದ್ದರೆ ಬಸಿಗಾಲುವೆಗಳ ಮೂಲಕ ನೀರನ್ನು ಹೊರಹಾಕಬೇಕು ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ. ರಾಘವೇಂದ್ರ ಪ್ರಸಾದ್ ಜಿ.ಸಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ರೇಖಾ ಜಿ.ಪಿ, ಸಸ್ಯ ಸಂರಕ್ಷಣಾ ತಜ್ಞ ಅವಿನಾಶ್, ತೋಟಗಾರಿಕ ಅಧಿಕಾರಿ ಸುನಿಲ್ ಮತ್ತು ರೈತರು ಉಪಸ್ಥಿತರಿದ್ದರು.



