ದಾವಣಗೆರೆ: ತೋಟಗಾರಿಕೆ ಇಲಾಖೆ ವತಿಯಿಂದ ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ಕಸಿ-ಸಸಿಗಳನ್ನು ಸಸ್ಯಾಭಿವೃದ್ಧಿ ಮಾಡಲಾಗಿದ್ದು, ಸರ್ಕಾರಿ ಮಾರಾಟ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಆಸಕ್ತ ರೈತರು ತೋಟಗಾರಿಕೆ ಕ್ಷೇತ್ರಗಳಲ್ಲಿ ಮಾರಾಟಕ್ಕೆ ಲಭ್ಯವಿರುವ ಕಸಿ-ಸಸಿಗಳ ಸದುಪಯೋಗ ಪಡೆದುಕೊಳ್ಳಬಹುದು.
ಚನ್ನಗಿರಿ ತಾಲ್ಲೂಕಿನ ಗರಗ ತೋಟಗಾರಿಕೆ ಕ್ಷೇತ್ರದಲ್ಲಿ ಅರಸಿಕೆರೆ ಟಾಲ್ ತಳಿಗಳ 7000 ತೆಂಗಿನ ಸಸಿಗಳು ಲಭ್ಯವಿದ್ದು ಖರೀದಿಸಲು ಭೈರೇಶಪ್ಪ ಕೆ.ಬಿ-9480647168, ಆವರಗೊಳ್ಳ ತೋಟಗಾರಿಕೆ ಕ್ಷೇತ್ರದಲ್ಲಿ ಅರಸಿಕೆರೆ ಟಾಲ್ ತಳಿಗಳ 15000 ತೆಂಗಿನ ಸಸಿಗಳು ಲಭ್ಯವಿದ್ದು ಖರೀದಿಸಲು ಹನುಮಂತಪ್ಪ-9844966639, ಹರಿಹರ ತಾಲ್ಲೂಕಿನ ಕಡರನಾಯಕನಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಅರಸಿಕೆರೆ ಟಾಲ್ ತಳಿಗಳ 1000 ತೆಂಗಿನ ಸಸಿಗಳು ಲಭ್ಯವಿದ್ದು ಖರೀದಿಸಲು ಹನುಮಂತಪ್ಪ-9844966639, ಜಗಳೂರು ತಾಲ್ಲೂಕಿನ ವ್ಯಾಸಗೊಂಡನಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಅರಸಿಕೆರೆ ಟಾಲ್ ತಳಿಗಳ 3695 ತೆಂಗಿನ ಸಸಿಗಳು ಲಭ್ಯವಿದ್ದು ಖರೀದಿಸಲು ಬಸವರಾಜ-9663670572, ಹೊನ್ನಾಳಿ ತಾಲ್ಲೂಕಿನ ಬೇಲಿಮಲ್ಲೂರು ತೋಟಗಾರಿಕೆ ಕ್ಷೇತ್ರದಲ್ಲಿ ಅರಸಿಕೆರೆ ಟಾಲ್ ತಳಿಗಳ 2000 ತೆಂಗಿನ ಸಸಿಗಳು ಲಭ್ಯವಿದ್ದು ಖರೀದಿಸಲು ಕಿರಣ್‍ಕುಮಾರ್ ಜಿ.ಎಸ್-9591771724, ಹರಿಹರ ತಾಲ್ಲೂಕಿನ ಬುಳ್ಳಾಪುರ ತೋಟಗಾರಿಕೆ ಕ್ಷೇತ್ರದಲ್ಲಿ ಅರಸಿಕೆರೆ ಟಾಲ್ ತಳಿಗಳ 3176 ತೆಂಗಿನ ಸಸಿಗಳು ಲಭ್ಯವಿದ್ದು ಖರೀದಿಸಲು ಶಾಂತಮ್ಮ-9986394432 ಇವರನ್ನು ಸಂಪರ್ಕಿಸಬಹುದು.ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ (ಜಿಲ್ಲಾ ಪಂಚಾಯತ್) ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



