Connect with us

Dvgsuddi Kannada | online news portal | Kannada news online

ದಾವಣಗೆರೆ: ಜಿ.ಎಂ ಹಾಲಮ್ಮ ಪಿಯು ಕಾಲೇಜಿಗೆ ಎಂಪವರ್ಡ್ ಮೈಂಡ್ ಪ್ರಶಸ್ತಿ ಗರಿ

ದಾವಣಗೆರೆ

ದಾವಣಗೆರೆ: ಜಿ.ಎಂ ಹಾಲಮ್ಮ ಪಿಯು ಕಾಲೇಜಿಗೆ ಎಂಪವರ್ಡ್ ಮೈಂಡ್ ಪ್ರಶಸ್ತಿ ಗರಿ

ದಾವಣಗೆರೆ: ಬೆಂಗಳೂರಿನ Empowered Minds ಆಯೋಜಿಸಿರುವ 2022ನೇ ಸಾಲಿನ Digi Techno Cognitive symposium 2022 School Excellence ಅವಾರ್ಡ್ ಜಿ.ಎಂ ಹಾಲಮ್ಮ ಪಿಯು ಕಾಲೇಜಿಗೆ ಲಭಿಸಿದೆ.

ಜಿ.ಎಂ. ಹಾಲಮ್ಮ ಪದವಿ ಪೂರ್ವ ಕಾಲೇಜು ಬೆಸ್ಟ್ ಕಾಲೇಜು ಫಾರ್ ಕಾಂಪಿಟಿಟೀವ್ ಎಕ್ಸಾಮ್ ಹಾಗೂ Physics, Chemistry, Mathematics, Biology ಈ ಎಲ್ಲಾ ವಿಷಯಗಳಲ್ಲಿ 100% ಅಚಿವ್ ಮೆಂಟ್ ಅವಾರ್ಡ್ ಗಳನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ|| ವೆಂಕಟ ರಾಯುಡು ವೆನಿಗಲ್ಲು ಅವರು 2022ನೇ ಸಾಲಿನ ಬೆಸ್ಟ್ ಸಿ.ಇ.ಓ ಮತ್ತು ಪ್ರಾಂಶುಪಾಲರಾಗಿ ಪ್ರಶಸ್ತಿಯನ್ನು ಸ್ವೀಕರಿದರು. Physics ಪ್ರಾಧ್ಯಾಪಕ ರಾಜಶೇಖರ ರೆಡ್ಡಿ ಮತ್ತು Chemistry ಪ್ರಾಧ್ಯಾಪಕರಾದ ಶ್ರೀಮತಿ. ವೆಂಕಟರಾಜ ಪೂರ್ಣರವರು ಭಾಗವಹಿಸಿದ್ದರು. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಸ್ವೀಕರಿಸಲಾಗಿದೆ.

ಈ ಸಂಧರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಛೇರ್ಮನ್ ಡಾ|| ಲತಾಮೂರ್ತಿ ಕೋ ಫೌಂಡರ್ ಮತ್ತು ಡೈರಕ್ಟರ್ ಜ್ಯೋತಿ ಮಂಜುನಾಥ ನೇತೃತ್ವದಲ್ಲಿ ಜರುಗಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಐಟಿ ಮತ್ತು ಬಿಟಿ ಸಚಿವ ಅಶ್ವಥ್ ನಾರಾಯಣ ಹಾಗೂ ಹಲವಾರು ಗಣ್ಯರು ಮತ್ತು ಆಲ್ ಇಂಡಿಯಾ ಪ್ರೈವೇಟ್ ಸ್ಕೂಲ್ ಅಸೋಸಿಯೇಶನ್ ಲೀಡರ್ಸ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾಲೇಜಿನ ಈ ಸಾಧನೆಗೆ ಛೇರ್ಮನ್ ಶ್ರೀ.ಜಿ.ಎಂ. ಲಿಂಗರಾಜು, ಆಡಳಿತಾಧಿಕಾರಿ ಶ್ರೀ. ವೈ. ಯು. ಸುಭಾಷ್ ಚಂದ್ರ ರವರು ಹಾಗೂ ಭೋದಕರು ಹಾಗೂ ಭೋದಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top