ದಾವಣಗೆರೆ: ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡ್ ನ್ನು ಲಿಂಕ್ ಮಾಡುವ ಗಡುವು ಇದೇ ಶುಕ್ರವಾರ (ಮಾ.31) ಕೊನೆಗೊಳ್ಳಲಿದ್ದು, ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆ 1000 ಶುಲ್ಕ ವಿಧಿಸಲಾಗುತ್ತಿದೆ. ಇದರ ವಿರುದ್ಧ ಕಾಂಗ್ರೆಸ್ ಪಕ್ಷದ ನಾಯಕರು ಪ್ರತಿಭಟಿಸಿದರು.
ಆಧಾರ್ ಕಾರ್ಡ್ ಗೆ ಪ್ಯಾನ್ ಕಾರ್ಡನ್ನು ಲಿಂಕ್ ಮಾಡುವುದು ಮೊದಲೆಲ್ಲ ಶುಲ್ಕರಹಿತವಾಗಿತ್ತು. ಆದರೆ ಈ ಪ್ರಕ್ರಿಯೆಗೆ ಶುಲ್ಕ ವಿಧಿಸಲಾಗುತ್ತಿದೆ. ಆದಾಯ ತೆರಿಗೆ ಇಲಾಖೆಯ ಈ ಕ್ರಮ ವಿರೋಧಿಸಿ ಇಂದು ದಾವಣಗೆರೆ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ದಾವಣಗೆರೆ ಒನ್ ಸೆಂಟರ್ ಎದುರು ಪ್ರತಿಭಟನೆ ನಡೆಸಿದರು.
ಕೈಯಲ್ಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್ ಗಳ ಪ್ರತಿಗಳನ್ನು ಹಿಡಿದು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈಗ 1000 ರೂಪಾಯಿ ದಂಡ ವಿಧಿಸಲಾಗುತ್ತಿದೆ. ಏಪ್ರಿಲ್ 1 ನಂತರ ದಂಡ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸೂಚನೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಲು 1,000 ರೂ. ದಂಡದೊಂದಿಗೆ ಮಾರ್ಚ್ 31ರ ತನಕ ಪ್ಯಾನ್ – ಆಧಾರ್ ಲಿಂಕ್ ಮಾಡಲು ಅವಕಾಶವಿದೆ.
ಏಪ್ರಿಲ್ 1ರ ಬಳಿಕ ಪ್ಯಾನ್ ನಿಷ್ಕ್ರಿಯವಾಗಲಿದ್ದು, ಹೊಸ ಪ್ಯಾನ್ ಪಡೆದು ಲಿಂಕ್ ಮಾಡಲು 10,000 ರೂ. ದಂಡ ತೆರಬೇಕಾಗುತ್ತದೆ.ಮಾರ್ಚ್ 31ರೊಳಗೆ ನೀವು ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ಏಪ್ರಿಲ್ 1ರಿಂದಲೇ ನಿಷ್ಕ್ರಿಯವಾಗುತ್ತದೆ.



