ದಾವಣಗೆರೆ: ನಗರದ ಕುಂದವಾಡ ಬಳಿಯ ರಾಷ್ಟ್ರೀಯ ಹೆದ್ದಾರಿ 48ರ ಬಳಿ ಟ್ರ್ಯಾಕ್ಟರ್ – ಶಾಲಾ ಮುಖಾಮುಖಿ ಡಿಕ್ಕಿ ಹೊಡೆದಿವೆ. ಈ ಅಪಘಾತವಾಗಿದ್ದು, ಕೋಳಿ ಫುಡ್ ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಶಾಲಾ ಮಕ್ಕಳಿದ್ದ ಬಸ್ ಅಪಾಯದಿಂದ ಪಾರಾಗಿದ್ದಾರೆ.
ಟ್ರ್ಯಾಕ್ಟರ್ ಪಲ್ಟಿಯಾಗಿದ್ದರಿಂದ ಚಾಲಕನಿಗೆ ತೀವ್ರವಾಗಿ ಗಾಯಗಳಾಗಿವೆ. ಶಾಲೆ ಮುಗಿಸಿಕೊಂಡು ಬಸ್ ವಾಪಸ್ ಬರುವ ವೇಳೆ ಡಿಕ್ಕಿ ಸಂಭವಿಸಿದೆ. ಪುಷ್ಪ ಮಹಾಲಿಂಗಪ್ಪ ಶಾಲೆಯ ಬಸ್ ಇದಾಗಿದ್ದು, ದಾವಣಗೆರೆ ಕಡೆ ಬರುವಾಗ ಈ ಘಟನೆ ಸಂಬವಿಸಿದೆ. ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



