ದಾವಣಗೆರೆ: ಅಸ್ನೇಹಿತರ ಮದುವೆಗೆ ಹೋಗಿ ಬರುವಾಗ ಕಾರು-ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಇಬ್ಬರು ಯುವತಿಯರು ಮೃ*ತಪಟ್ಟಿರುವ ಘಟನೆ ಹರಿಹರ ತಾಲ್ಲೂಕಿನ ಕಡರನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸುಮಾ (22), ಪಲ್ಲವಿ (26) ಮೃತ ಯುಚತಿಯರು. ಸ್ನೇಹಿತರ ಮದುವೆಗೆ ಹೋಗಿ ನಂದಿಗುಡಿ-ಎಕ್ಕೆಗೊಂದಿ ರಸ್ತೆಯಲ್ಲಿ ಎಕ್ಕೆಗೊಂದಿ ಕಡೆಗೆ ಬರುತ್ತಿದ್ದಾಗ, ನಂದಿಗುಡಿ ಕಡೆಗೆ ವೇಗವಾಗಿ ಹೋಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದರಿಂದ ಸುಮಾ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಸ್ಥಳದಲ್ಲೇ
ಮೃ*ತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಪಲ್ಲವಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಮೃ*ತಪಟ್ಟಿದ್ದಾರೆ. ಬೈಕ್ ಓಡಿಸುತ್ತಿದ್ದ ಸಚಿನ್ ಎಂಬ ಯುವಕನಿಗೂ ಸಹ ತೀವ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಕುರಿತು ಸುಮಾ ಸಂಬಂಧಿಕರು ಕಾರು ಚಾಲಕನ ವಿರುದ್ಧ ಮಲೇಬೆನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.