Connect with us

Dvgsuddi Kannada | online news portal | Kannada news online

ಹರಪನಹಳ್ಳಿ: ಕೆರೆಗಳಲ್ಲಿ 5 ವರ್ಷಗಳ ಕಾಲ ಮೀನು ವಿಲೇವಾರಿಗೆ ಮೀನುಗಾರರ ಸಹಕಾರ ಸಂಘಗಳಿಂದ ಅರ್ಜಿ ಆಹ್ವಾನ

ಹರಪನಹಳ್ಳಿ

ಹರಪನಹಳ್ಳಿ: ಕೆರೆಗಳಲ್ಲಿ 5 ವರ್ಷಗಳ ಕಾಲ ಮೀನು ವಿಲೇವಾರಿಗೆ ಮೀನುಗಾರರ ಸಹಕಾರ ಸಂಘಗಳಿಂದ ಅರ್ಜಿ ಆಹ್ವಾನ

ಹರಪನಹಳ್ಳಿ: ಮೀನುಗಾರಿಕೆ ಇಲಾಖೆಯ ವತಿಯಿಂದ 2022-23ನೇ ಸಾಲಿನ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮೀನುಗಾರಿಕೆ ಇಲಾಖೆಯ ಕೆರೆಗಳಾದ ಅರಸೀಕೆರೆ ದೊಡ್ಡಕೆರೆ, ಅಲಮರಸೀಕೆರೆ, ಐಯ್ಯನಕೆರೆ, ಬಾಗಳಿ ಕೆರೆ, ಹಿರೇಮೇಗಳಗೆರೆ ಕೆರೆ, ಬೆಂಡಿಗೆರೆ ಕೆರೆ, ಹಿಕ್ಕಿಂಗೆರೆ ಕೆರೆ, ಅರಸನಾಳು ಕೆರೆ, ನಾಗಲಾಪುರ ಕೆರೆ, ಯು.ಬೇವಿನಹಳ್ಳಿ ಕೆರೆ ಮತ್ತು ತುಂಗಾಭದ್ರ ನದಿಭಾಗದ ಮೀನು ಪಾಶುವಾರು ಹಕ್ಕನ್ನು 05 ವರ್ಷಗಳ ಕಾಲ ನೇರಗುತ್ತಿಗೆ ಮೂಲಕ ವಿಲೇವಾರಿ ಮಾಡಲು ಅರ್ಹ ಮೀನುಗಾರರ ಸಹಕಾರ ಸಂಘಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಹರಪನಹಳ್ಳಿ ಮೀನುಗಾರಿಕೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತರು ಅರ್ಜಿಯನ್ನು ಮೇ.31ರೊಳಗಾಗಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಹರಪನಹಳ್ಳಿ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಬಂದು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಹರಪನಹಳ್ಳಿ

To Top