Connect with us

Dvgsuddi Kannada | online news portal | Kannada news online

ದಾವಣಗೆರೆ: ಅಂತರಾಷ್ಟ್ರೀಯ ಯೋಗ ದಿನಾಚರಣೆ; ನೋಂದಣಿಗೆ ಅವಕಾಶ

ದಾವಣಗೆರೆ

ದಾವಣಗೆರೆ: ಅಂತರಾಷ್ಟ್ರೀಯ ಯೋಗ ದಿನಾಚರಣೆ; ನೋಂದಣಿಗೆ ಅವಕಾಶ

ದಾವಣಗೆರೆ: ಜಿಲ್ಲಾ ಸಂಯುಕ್ತ ಪ್ರಾದೇಶಿಕ ಕೇಂದ್ರದ (ಸಿ.ಆರ್.ಸಿ) ವತಿಯಿಂದ ವಿಕಲಚೇತನರು ಹಾಗೂ ವಿ.ಆರ್.ಡಬ್ಲ್ಯೂ/ಯು.ಆರ್.ಡಬ್ಲ್ಯೂ/ಎಂ.ಆರ್.ಡಬ್ಲ್ಯೂ ಕಾರ್ಯಕರ್ತರಿಗೆ ಜೂನ್.21ರಂದು ಸಿಕಂದರಬಾದ್‍ನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮಕ್ಕೆ ಭಾಗವಹಿಸುವ ವಿಕಲಚೇತನರು ತಪ್ಪದೇ ವಿಕಲಚೇತನರ ಯು.ಡಿ.ಐ.ಡಿ ಕಾರ್ಡ್, ಆಧಾರ್ ಕಾರ್ಡ್, ದಾಖಲೆಗಳನ್ನು ತೆಗೆದುಕೊಂಡು 2 ದಿನ ಮುಂಚಿತವಾಗಿ ಜಿಲ್ಲಾ ಸಂಯುಕ್ತ ಪ್ರಾದೇಶಿಕ ಕೇಂದ್ರ (ಸಿ.ಆರ್.ಸಿ), ದೇವರಾಜ್ ಅರಸ್ ಬಡಾವಣೆ ‘ಬಿ’ ಬ್ಲಾಕ್ ಇಲ್ಲಿನ ಸಿಬ್ಬಂದಿಯಾದ ಕನಗ ಸಭಾಪತಿ ಇವರನ್ನು ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ಭಾಗವಹಿಸುವ ಆಸಕ್ತ ವಿಕಲಚೇತನರಿಗೆ ಸರ್ಟಿಫಿಕೇಟ್, ಟೀ-ಶರ್ಟ್, ಯೋಗ ಮ್ಯಾಟ್, ಸಾರಿಗೆ ವೆಚ್ಚ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ದಾವಣಗೆರೆ ಹಾಗೂ ದೂ.9445153327, 08192-233465ಗೆ ಸಂಪರ್ಕಿಸಬಹುದೆಂದು ಸಬಲೀಕರಣಾಧಿಕಾರಿ ಡಾ. ಕೆ.ಕೆ. ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top