ದಾವಣಗೆರೆ: ಸರ್ಕಾರಿ ಕೆಲಸ ಕೊಡಿಸುವುದಾಗಿ ಆಸೆ ತೋರಿಸಿ 13.76 ಲಕ್ಷ ವಂಚಿಸಿರುವ ಘಟನೆ ನಡೆದಿದೆ. ಹಾವೇರಿಯ ವೀರಭದ್ರಪ್ಪ ಹಾಗೂ ವಿನೋಬಾ ನಗರದ ನಂದಿನಿ ಸರ್ಕಾರದ ಗ್ರೇಡ್ ಆಫೀಸರ್ ಹುದ್ದೆ ಕೊಡಿಸುವುದಾಗಿ ವಂಚಿಸಿದ್ದಾರೆ. ಖಾಸಗಿ ಶಾಲೆ ಶಿಕ್ಷಕ ಮಧುಸೂದನ್, ಸಿದ್ದು ಹಾದಿಮನಿ, ವೀರೇಂದ್ರ ಟಿ.ಎಂ, ಸುನೀಲ್, ವಿದ್ಯಾ ಷಣ್ಮುಖಪ್ಪ ಹಾಗೂ ಚೈತ್ರಾ ವಂಚನೆಗೆ ಒಳಗಾದವರಾಗಿದ್ದಾರೆ.
ಪಿಯುಸಿಯಿಂದ ಹಾಗೂ ಎಂಜಿನಿಯರಿಂಗ್ ಮುಗಿಸಿದವರಿಗೆ ಗ್ರೇಡ್ ಆಫೀಸರ್ ಹುದ್ದೆ ಖಾಲಿ ಇವೆ. ಹುದ್ದೆ ಕೊಡಿಸುತ್ತೇವೆ ಎಂದು ನಕಲಿ ಆದೇಶದ ಪ್ರತಿ ನೀಡಿ ವಂಚಿಸಿದ್ದಾರೆ. ಕೆ.ಟಿ.ಜೆ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಲಾಗಿದೆ.



