ಬಳ್ಳಾರಿ: ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗದಲ್ಲಿ ಡಿ. 30 ರಂದು ನಡೆಯಬೇಕಿದ್ದ ಹೊಸ್ತಿಲಹುಣ್ಣಿಮೆಯನ್ನು ರದ್ದುಗೊಳಿಸಲಾಗಿದೆ. ತಹಶೀಲ್ದಾರ್ ಹಾಗೂ ಶ್ರೀ ಉತ್ಸವಾoಭ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ನಂದೀಶ್ ಆದೇಶ ಹೊರಡಿಸಿದ್ದಾರೆ. ಹುಣ್ಣಿಮೆಗೆ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಹಿನ್ನೆಲೆಯಲ್ಲಿ ರೂಪಾಂತರ ಕೊರೊನಾ ಹರಡುವ ಭೀತಿ ಹಿನ್ನೆಲೆಯಲ್ಲಿ ಹುಣ್ಣಿಮೆ ರದ್ದುಗೊಳಿಸಿದ್ದಾರೆ. ಭಕ್ತಾದಿಗಳು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಡಿ. 30 ರಂದು ಭಕ್ತಾದಿಗಳಿಗೆ ಶ್ರೀ ದೇವಿಯ ದರ್ಶನಕ್ಕೆ ಅವಕಾಶವಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




