ನವದೆಹಲಿ: ಮುಂದಿನ ವರ್ಷದ ಸಪ್ಟೆಂಬರ್ ಒಳಗೆ ದೇಶದ 30 ಕೋಟಿ ಜನರಿಗೆ ಕೊರೊನಾ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದರು.
ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ಅವರು, 2021ರ ಮೊದಲ ಮೂರು ತಿಂಗಳಲ್ಲಿ ಭಾರತ ಕೋವಿಡ್ ಲಸಿಕೆಯನ್ನು ಪಡೆಯಲಿದೆ. ಸಪ್ಟೆಂಬರ್ ಒಳಗೆ 25ರಿಂದ 30 ಕೋಟಿ ಜನರಿಗೆ ಲಸಿಕೆ ಸಿಗಲಿದೆ. ಆರೋಗ್ಯ ಕಾರ್ಯಕರ್ತರ ದತ್ತಾಂಶಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ. ಮುಂಚೂಣಿಯ ಕಾರ್ಯಕರ್ತರಾದ ಪೋಲಿಸ್, ಅರೆಸೈನಿಕ, ನೈರ್ಮಲ್ಯೀಕರಣದಲ್ಲಿ ತೊಡಗಿರುವವರು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟವರನ್ನು ಮೊದಲು ಪರಿಗಣಿಸಲಾಗುತ್ತದೆ ಎಂದರು.
ದೆಹಲಿಯಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಬಗ್ಗೆ ಮಾತನಾಡಿದ ಅವರು, ದಿಲ್ಲಿಯ ಕೆಲವು ವಿದ್ಯಾವಂತ ಜನರ ನಿರ್ಲಕ್ಯವೂ ಇದಕ್ಕೆ ಕಾರಣ. ಆರ್ ಟಿ- ಪಿಸಿಆರ್ ಗಳ ಸಾಮರ್ಥ್ಯ ಹೆಚ್ಚಿಸಲಾಗಿದೆ. ಸಂಚಾರಿ ಪರೀಕ್ಷಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಹೇಳಿದರು.



