Connect with us

Dvgsuddi Kannada | online news portal | Kannada news online

ಶಿವಕುಮಾರ ಶಿವಾಚಾರ್ಯ ಶ್ರೀಗಳು ಬಸವಣ್ಣನವರ ಪಡಿಯಚ್ಚು; ತರಳಬಾಳು ಶ್ರೀ

ಪ್ರಮುಖ ಸುದ್ದಿ

ಶಿವಕುಮಾರ ಶಿವಾಚಾರ್ಯ ಶ್ರೀಗಳು ಬಸವಣ್ಣನವರ ಪಡಿಯಚ್ಚು; ತರಳಬಾಳು ಶ್ರೀ

ಸಿರಿಗೆರೆ; ತರಳಬಾಳು ಮಠದ ಹಿರಿಯ ಗುರುಗಳಾದ ಶಿವಕುಮಾರ ಶಿವಾಚಾರ್ಯ ಶ್ರೀಗಳು ಬಸವಣ್ಣನವರ ಪಡಿಯಚ್ಚು, ಸಾಕ್ಷಾತ್ ಬಸವಣ್ಣನವರ ಸ್ವರೂಪವಾಗಿದ್ದರು ಎಂದು ತರಳಬಾಳು ಮಠದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 29 ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ರಾಮ-ರಾವಣ ಯುದ್ಧ ಹೇಗಿತ್ತು ಎಂದು ಕೇಳಿದರೆ, ರಾಮ-ರಾವಣರ ಯುದ್ಧದಂತೆ ಇತ್ತು ಎನ್ನುವಂತೆ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರು, ಶಿವಕುಮಾರ ಶಿವಾಚಾರ್ಯ ಶ್ರೀಗಳಂತೆಯೇ ಇದ್ದರು ಎಂದು ಉಚ್ಚರಿಸಬೇಕಾಗುತ್ತದೆ. ಅವರನ್ನು ಬೇರೆಯವರಿಗೆ ಹೊಲಿಕೆ ಮಾಡಲು ಸಾಧ್ಯವಿಲ್ಲ. ನಮ್ಮ ಪ್ರಕಾರ ಒಂದು ಹೊಲಿಕೆ ಸರಿ ಅನ್ನಿಸಬಹುದು. ಬಸವ ಜಯಂತಿಯಂದು ಜನ್ಮ ತಾಳಿ, ಬಸವ ಜಯಂತಿಯಂದು ಪೀಠವೇರಿದ ಶ್ರೀಗಳು ಸಾಕ್ಷಾತ್ ಬಸವಣ್ಣ ಸ್ವರೂಪ ಆಗಿದ್ದರು ಎಂದು ಅಭಿಪ್ರಾಯಪಟ್ಟರು.

ಶ್ರೀಗಳು ಓದಿದ್ದ ಕಾಶಿಯಲ್ಲಿ. ಅಲ್ಲಿ ಸಂಸ್ಕೃತ ದಲ್ಲಿ ಪಾಂಡಿತ್ಯ ಪಡೆದಿದ್ದರು. ಆದರೆ, ತರಳಬಾಳು ಪೀಠ ಅಲಂಕರಿಸಿದ ಮೇಲೆ ಬಸವಣ್ಣ ಅವರ ವಚನ ಸಾಹಿತ್ಯದಿಂದ ಪ್ರಭಾವಿತರಾಗಿ ಅವರ ನಡೆ-ನುಡಿಗಳನ್ನೇ ಮೈಗೂಡಿಸಿಕೊಂಡಿದ್ದರು. ಶಿವಕುಮಾರ ಶ್ರೀಗಳನ್ನು ಕೊಡುಗೆಯಾಗಿ ನೀಡಿದ ಗುರು ಶಾಂತ ದೇಶಿಕೇಂದ್ರ ಮಹಾ ಸ್ವಾಮೀಜಿ ಅವರನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಲೇಬೇಕಾಗುತ್ತದೆ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಎಲ್ಲಾ ಕಾರ್ಯಕ್ಕೆ ಅಡಿಪಾಯ ಹಾಕಿದವರು ಶ್ರೀ ಗುರುಶಾಂತ ದೇಶೀಕೇಂದ್ರ ಶ್ರೀಗಳು ಎಂದರು.

ಕೇವಲ 18 ಸಾವಿರ ರೂಪಾಯಿಗೆ ಮೊಟ್ಟ ಮೊದಲ ಬಾರಿಗೆ ತರಳಬಾಳು ಮಠದಿಂದ 1918 ರಲ್ಲಿ ದಾವಣಗೆರೆಯಲ್ಲಿ ಉಚಿತ ಹಾಸ್ಟೆಲ್ ನಿರ್ಮಿಸಿ ಕೀರ್ತಿ ಗುರು ಶಾಂತ ದೇಶೀಕೇಂದ್ರ ಸ್ವಾಮೀಜಿ ಸಲ್ಲುತ್ತದೆ. 10 ಸಾವಿರ ಭಕ್ತರಿಂದ ಸಂಗ್ರಹಿಸಿ ಹಣನ್ನು ನೀಡಿ, ಇನ್ನುಳಿದ 8 ಸಾವಿರ ಸಾಲವಾಗಿ ಪಡೆದು ಒಟ್ಟು 18 ಸಾವಿರ ರೂಪಾಯಿಗೆ ಹಾಸ್ಟೆಲ್ ನಿರ್ಮಿಸಿದ್ದರು. ಶಿವಕುಮಾರ ಶಿವಾಚಾರ್ಯ ಶ್ರೀಗಳು ಹಾಗೂ ಗುರುಶಾಂತ ದೇಶೀಕೇಂದ್ರ ಶ್ರೀಗಳು ಸಮಾಜದ ಮಕ್ಕಳ ಶಿಕ್ಷಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ‌ಹೀಗಾಗಿ ದಾವಣಗೆರೆಯಲ್ಲಿ ಕಟ್ಟಿದ ಹಾಸ್ಟೆಲ್ ಗೆ ನೂರು ವರ್ಷ ತುಂಬಿದ ಈ ಸಂದರ್ಭದಲ್ಲಿ ಸಿರಿಗೆರೆಯಲ್ಲಿನ ಎಲ್ಲಾ ವಸತಿ ನಿಲಯಗಳನ್ನು ಈ ವರ್ಷದಿಂದ ಸಂಪೂರ್ಣ ಉಚಿತವಾಗಿ ನೀಡಲು ನಿರ್ಧಾರ ಕೈಗೊಂಡಿದ್ದೇವೆ. ಒಂದು ವರ್ಷಕ್ಕೆ ಒಂದುವರೆ ಕೋಟಿ ರೂಪಾಯಿ ಖರ್ಚು ಬರುತ್ತದೆ. ಅದನ್ನು ಮಠದಿಂದ ಹಾಗೂ ಭಕ್ತರಿಂದ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಈ ವರ್ಷದಿಂದ ಸಿರಿಗೆರೆಯ ಎರಡೂ ಹಾಸ್ಟೆಲ್ ನಲ್ಲಿ ಊಟ- ವಸತಿ ಉಚಿತವಾಗಿರಲಿದೆ ಎಂದು ಶ್ರೀಗಳು ನುಡಿದರು.

ಭರಮಸಾರ ಕೆರೆ ನೀರು ಯಾವಾಗ ಬರುತ್ತೆ ಎಂಬುದು ಎಲ್ಲರ ನಿರೀಕ್ಷೆ ಆಗಿತ್ತು. ಆದರೆ, ಕೆಲವೊಂದು ತಾಂತ್ರಿಕ ತೊಂದರೆಯಿಂದ ಇನ್ನಷ್ಟು ದಿನ ಆಗಲಿದೆ. 1,200 ಕೋಟಿ ವೆಚ್ಚದಲ್ಲಿ ಹರಿಹರದಿಂದ 55 ಕಿ.ಮೀ. ದೂರದ ಭರಮಸಾರ ಮತ್ತು ಜಗಳೂರು ಕೆರೆಗೆ ನೀರು ಪೂರೈಸಬೇಕಿದೆ. ಯೋಜನೆಗೆ ಕಾಂಗ್ರೆಸ್, ಬಿಜೆಪಿ, ಜನತಾ ದಳ ಸೇರಿ ಮೂರು ಪಕ್ಷದ ನಾಯಕರು ಶ್ರಮಿಸಿದ್ದಾರೆ ಎಂದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});