Connect with us

Dvgsuddi Kannada | online news portal | Kannada news online

ಭಾಗ್ಯಲಕ್ಷ್ಮಿ ಯೋಜನೆ ಇನ್ಮುಂದೆ ಎಲ್ ಐಸಿ ಬದಲು, ಅಂಚೆ ಇಲಾಖೆ ಮೂಲಕ ಜಾರಿ

ಪ್ರಮುಖ ಸುದ್ದಿ

ಭಾಗ್ಯಲಕ್ಷ್ಮಿ ಯೋಜನೆ ಇನ್ಮುಂದೆ ಎಲ್ ಐಸಿ ಬದಲು, ಅಂಚೆ ಇಲಾಖೆ ಮೂಲಕ ಜಾರಿ

ಡಿವಿಜಿ ಸುದ್ದಿ, ಬೆಂಗಳೂರು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಗಳು ಇನ್ಮುಂದೆ ಎಲ್ ಐಸಿ  ಬದಲು ಅಂಚೆ ಇಲಾಖೆ ಸುಕನ್ಯಾ ಸಮೃದ್ಧಿ ಮೂಲಕ ಜಾರಿಯಾಗಲಿದೆ.

ಇಂದು ನಡೆದ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಹೀಗಾಗಿ ಈ ಯೋಜನೆಗೆ ಇನ್ಮುಂದೆ ಎಲ್‌ಐಸಿ ಬದಲು ಅಂಚೆ ಇಲಾಖೆ ಅಧಿಕೃತ ಏಜೆನ್ಸಿಯಾಗಿರುತ್ತದೆ. ಈ ಕುರಿತು ಸರ್ಕಾರ ಇದೀಗ ಸಚಿವ ಸಂಪುಟದ ಒಪ್ಪಿಗೆ ನೀಡಿದೆ.

ಯೋಜನೆಯನ್ನು ಮರು ವಿನ್ಯಾಸಗೊಳಿಸಿ ಜಾರಿ ಮಾಡುವುದರಿಂದ ಫಲಾನುಭವಿಗಳಿಗೆ ಯಾವುದೇ ನಷ್ಟವಾಗುವುದಿಲ್ಲ. ಸರ್ಕಾರದ ಭರವಸೆಯಂತೆ ಹೆಣ್ಣು ಮಗುವಿಗೆ 18 ವರ್ಷ ತುಂಬಿದಾಗ 1 ಲಕ್ಷ ಸಿಗುತ್ತದೆ.  ಭಾರತೀಯ ಜೀವ ವಿಮಾ ನಿಗಮವು ಈ ಹಿಂದೆ ಒಪ್ಪಂದ ಮಾಡಿಕೊಂಡಂತೆ ಬಾಂಡ್‌ ಮುಚ್ಯುರಿಟಿ ಆದ ಬಳಿಕ 1 ಲಕ್ಷ ಪಾವತಿ ಮಾಡಲು ತಕರಾರು ಮಾಡುತ್ತಲೇ ಇತ್ತು. ಆ ಕಾರಣಕ್ಕೆ ಭಾಗ್ಯಲಕ್ಷ್ಮಿ ಯೋಜನೆಯನ್ನು ಸುಕನ್ಯ ಸಮೃದ್ಧಿಗೆ ವರ್ಗಾಯಿಸಲಾಗಿದೆ.

ಬಿಪಿಎಲ್‌ ಕುಟುಂಬದಲ್ಲಿ ಹೆಣ್ಣು ಮಕ್ಕಳು ಜನಿಸಿದರೆ ಅವರಿಗೆ ಬಾಂಡ್‌ ನೀಡುವ ಯೋಜನೆ ಇದಾಗಿದೆ. ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಈ ಯೋಜನೆಯನ್ನು ಜಾರಿಗೆ ತಂದಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top