Connect with us

Dvgsuddi Kannada | online news portal | Kannada news online

ತರಳಬಾಳು‌ ಶ್ರೀಗಳ ಆಶೀರ್ವಾದ ಪಡೆದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ದಾವಣಗೆರೆ

ತರಳಬಾಳು‌ ಶ್ರೀಗಳ ಆಶೀರ್ವಾದ ಪಡೆದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು; ಬೆಂಗಳೂರಿನ ರವೀಂದ್ರನಾಥ ಟ್ಯಾಗೋರ್ ನಗರದಲ್ಲಿರುವ ತರಳಬಾಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶ್ರೀ ತರಳಬಾಳು ಬೃಹ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದ ಪಡೆದರು.ಶ್ರೀಗಳು ಹೆಚ್.ಡಿ.ಕುಮಾರಸ್ವಾಮಿರವರಿಗೆ ಶಾಲು ಹೊದಿಸಿ ಗೌರವಿಸಿದರು.

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ನಿರಂತರವಾದ ಸಮಾಜ ಸೇವಾಕಾರ್ಯಾಗಳನ್ನು ಸ್ಮರಿಸಿದ ಹೆಚ್.ಡಿ.ಕುಮಾರಸ್ವಾಮಿ‌ ಅವರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಕಾಲದಲ್ಲಿನ ರಾಜಕೀಯ ಕಾಲಘಟ್ಟದ ಘಟನೆಗಳನ್ನು ತಂದೆಯವರಾದ ಹೆಚ್.ಡಿ.ದೇವೇಗೌಡರವರು ಹಲವಾರು ಬಾರಿ ನೆನಪಿಸಿಕೊಳ್ಳುವುದನ್ನು ಅಭಿಮಾನದಿಂದ ಹಂಚಿಕೊಂಡರು.

ಶ್ರೀ ಜಗದ್ಗುರುಗಳವರ ನೇತೃತ್ವದಲ್ಲಿ ಜಾರಿಯಾದ 20 ಕ್ಕೂ ಅಧಿಕ ಏತನೀರಾವರಿ ಯೋಜನೆಗಳ ಮೂಲಕ 500 ಕ್ಕೂ ಅಧಿಕ ಕೆರೆಗಳಿಗೆ ನೀರು ತುಂಬಿಸಿ,ರೈತರ ಬಾಳಿಗೆ ಬೆಳಕಾಗಿರುವ ಕಾರ್ಯವನ್ನು ಕುಮಾರಸ್ವಾಮಿರವರು ಮನಃಪೂರ್ವಕವಾಗಿ ಅಭಿವಂದಿಸಿದರು. ಪೂಜ್ಯರು ಹಲವು ಭಾಷೆಗಳಲ್ಲಿ ಹೊರತಂದಿರುವ ಬಸವಾದಿ ಶರಣರ ವಚನಗಳ ಮೊಬೈಲ್ ಆಪ್ ಬಗ್ಗೆ ಚರ್ಚೆ ಮಾಡಿದ್ದು ವಿಶೇಷವಾಗಿತ್ತು. ಶ್ರೀಗಳ ನೇತೃತ್ವದಲ್ಲಿ ಜಾರಿಯಾದ ಏತನೀರಾವರಿ ಯೋಜನೆಗಳನ್ನು, ರೈತರಿಗೆ ನೆರವಾಗಿ ದೇಶಕ್ಕೆ‌ ಮಾದರಿಯಾದ ಬರ ಪರಿಹಾರ, ಬೆಳೆ ವಿಮೆ ತಂತ್ರಾಂಶಗಳ ಬಗ್ಗೆ ಕುಮಾರಸ್ವಾಮಿರವರು ಶ್ಲಾಘನೆ ವ್ಯಕ್ತಪಡಿಸಿದರು.

ಶ್ರೀ ಜಗದ್ಗುರುಗಳವರು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ದೋಷಗಳನ್ನು ಸರಿಪಡಿಸಲು ಶ್ರಮಿಸಿ, ಭೂಮಿ ಆನ್ಲೈನ್ ತಂತ್ರಾಂಶ ರಚಿಸಿ, ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರ ಖಾತೆಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಪಾವತಿ ಮಾಡುವ ಯೋಜನೆಯು ದೇಶಕ್ಕೆ ಮಾದರಿಯಾಗಿರುವುದರ ಬಗ್ಗೆ ಮಾಜಿ ಪ್ರಧಾನಿಯವರು ಮೆಚ್ಚುಗೆಯನ್ನು ಹಂಚಿಕೊಂಡರು. ಹೆಚ್.ಡಿ.ದೇವೇಗೌಡರು ಲಿಂಗೈಕ್ಯ ಗುರುವರ್ಯರ ಕಾಲದಿಂದಲೂ ನಮ್ಮ ಮಠದ ಶ್ರದ್ಧಾ ಭಕ್ತರಾಗಿದ್ದು, ಹಲವು ತರಳಬಾಳು ಹುಣ್ಣಿಮೆ ಮಹೋತ್ಸವಗಳು ಗೌಡರಿಂದ ಉದ್ಘಾಟಿಸಿರುವುದು ನಮಗೆ ಸಂತೋಷ ತಂದಿದೆ ಎಂದು ಶ್ರೀ ಜಗದ್ಗುರುಗಳವರು ನೆನಪಿಸಿದರು.

ಮಾಜಿ ಪ್ರಧಾನಿಯವರ ಆರೋಗ್ಯದ ಬಗ್ಗೆ ವಿಚಾರಿಸಿದ ಪೂಜ್ಯರಿಗೆ ಇತ್ತೀಚೆಗೆ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು ಈಗ ಸಂಪೂರ್ಣವಾಗಿ ಗುಣವಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನಾರೋಗ್ಯ ಮತ್ತು ಸೋಂಕಿನ ಕಾರಣದಿಂದ ಸದ್ಯ ಭಾಗಿಯಾಗಿದಂತೆ ಮನವಿ ಮಾಡಿರುವ ಬಗ್ಗೆ ತಿಳಿಸಿದರು.ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರವರು ನಿರಂತರವಾಗಿ ಶ್ರೀ ಜಗದ್ಗುರುಗಳವರ ಬಿಸಿಲು ಬೆಳದಿಂಗಳು ಅಂಕಣವನ್ನು ಓದುತ್ತಿರುವ ಬಗ್ಗೆ ಹಂಚಿಕೊಂಡರು. ಜಗಳೂರು ಮತ್ತು ಮಾಡಿ ಭರಮಸಾಗರ ಏತ ನೀರಾವರಿ ಯೋಜನೆಯ ಫಲಶೃತಿಗೆ ಕುಮಾರಸ್ವಾಮಿಯವರು ಮುಖ್ಯ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ನೀಡಿದ ಸಹಕಾರವನ್ನು ಶ್ರೀ ಜಗದ್ಗುರುಗಳವರು ಸ್ಮರಿಸಿದರು.ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್. ಎಲ್.ಬೋಜೇಗೌಡ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top