Connect with us

Dvgsuddi Kannada | online news portal | Kannada news online

ಪದವೀಧರರಿಗೆ ಆಯುಷ್​ ಇಲಾಖೆಯಲ್ಲಿ 86 ಡೇಟಾ ಎಂಟ್ರಿ ಆಪರೇಟರ್​ ಹುದ್ದೆಗೆ ಅರ್ಜಿ  ಆಹ್ವಾನ

ಪ್ರಮುಖ ಸುದ್ದಿ

ಪದವೀಧರರಿಗೆ ಆಯುಷ್​ ಇಲಾಖೆಯಲ್ಲಿ 86 ಡೇಟಾ ಎಂಟ್ರಿ ಆಪರೇಟರ್​ ಹುದ್ದೆಗೆ ಅರ್ಜಿ  ಆಹ್ವಾನ

ನವದೆಹಲಿ: ಆಯುಷ್​ ಸಚಿವಾಲಯದಲ್ಲಿ ಪದವೀಧರರಿಗೆ ಬ್ರಾಡ್​ಕಾಸ್ಟ್​ ಇಂಜಿನಿಯರಿಂಗ್​ ಕನ್ಸಲ್ಟಂಟ್ಸ್​ ಇಂಡಿಯಾ ಲಿಮಿಟೆಡ್​ನಿಂದ (ಬಿಇಸಿಐಎಲ್​)  86 ಡೇಟಾ ಎಂಟ್ರಿ ಆಪರೇಟರ್​ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಆಹ್ವಾನ

ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕಿದ್ದು,  https://www.becil.com ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಯಾವುದೇ ತಾಂತ್ರಿಕ ಸಮಸ್ಯೆ ಎದುರಾದರೆ khuswindersingh@becil.com ಮೇಲ್​ ಐಡಿ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಲಾಗಿದೆ.ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಡೆದಿರಬೇಕು. ಪ್ರತಿ ನಿಮಿಷಕ್ಕೆ 35 ಇಂಗ್ಲಿಷ್​ ಪದ ಹಾಗೂ 30 ಹಿಂದಿ ಪದ ಟೈಪ್​ ಮಾಡುವ ಸಾಮರ್ಥ್ಯ ಹೊಂದಿರಬೇಕು. ಎಂಎಸ್​-ವರ್ಡ್​, ಪವರ್​ ಪಾಯಿಂಟ್​ ಹಾಗೂ ಎಕ್ಸೆಲ್​ ಜ್ಞಾನ ಹೊಂದಿರಬೇಕು. ಆಯುಷ್​ ಇಲಾಖೆಯ ಘಟಕ/ ಫೀಲ್ಡ್​ ಕಚೇರಿಗಳಲ್ಲಿ ಕಾರ್ಯನಿರ್ವಹಿಸಿ ವೃತ್ತಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ವೇತನ: ಪ್ರಸ್ತುತ ದೆಹಲಿ ಸರ್ಕಾರದಲ್ಲಿರುವ ಕನಿಷ್ಠ ವೇತನ ದರದ ಪ್ರಕಾರ ಮಾಸಿಕ 21,184 ರೂ. ನೀಡಲಾಗುವುದು. ಆಯ್ಕೆ ಪ್ರಕ್ರಿಯೆ: ಸಲ್ಲಿಕೆಯಾಗುವ ಅರ್ಜಿಗಳನ್ನು ಆಧರಿಸಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಸಾಮಾನ್ಯ ಜ್ಞಾನ, ಪ್ರಸ್ತುತ ವಿದ್ಯಮಾನ, ಇಂಗ್ಲಿಷ್​ ಗ್ರಾಮರ್​ಗೆ ಸಂಬಂಧಿಸಿದಂತೆ ಕಂಪ್ಯೂಟರ್​ ಆಧಾರಿತ ಪರೀಕ್ಷೆ/ ಬಹು ಆಯ್ಕೆ ಮಾದರಿಯ ಲಿಖಿತ ಪರೀೆ ನಡೆಸಲಾಗುವುದು. ಇದರ ಜತೆಗೆ ಟೈಪಿಂಗ್​ ಪರೀಕ್ಷೆ ಇರುತ್ತದೆ.

ಅರ್ಜಿ ಶುಲ್ಕ: ಸಾಮಾನ್ಯವರ್ಗ, ಇತರ ಹಿಂದುಳಿದ ವರ್ಗ, ಮಹಿಳಾ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 750 ರೂ. (ಪ್ರತಿ ಪ್ರತ್ಯೇಕ ಹುದ್ದೆಗೆ ಅರ್ಜಿ ಸಲ್ಲಿಸುವುದಾದರೆ 500 ರೂ. ಪ್ರತ್ಯೇಕವಾಗಿ ಪಾವತಿಸಬೇಕು), ಎಸ್​ಸಿ, ಎಸ್​ಟಿ, ಆಥಿರ್ಕವಾಗಿ ಹಿಂದುಳಿದ ವರ್ಗ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 450 ರೂ., ಜಿಎಸ್​ಟಿ ಹಾಗೂ ಬ್ಯಾಂಕ್​ ಶುಲ್ಕ ಸೇರಬಹುದು. ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು ಎಂದು ಸೂಚಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೇ ದಿನ: 22.5.2022.  ಹೆಚ್ಚಿನ ಮಾಹಿತಿಗೆ: https://www.becil.com ವೆಬ್ ಸೈಟ್ ಗೆ ಭೇಟಿ ನೀಡಿ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top