ಸಂಖ್ಯಾಶಾಸ್ತ್ರದಲ್ಲಿ ಒಂಬತ್ತನೆಯ ಸಂಖ್ಯೆಯನ್ನು ‘ಬ್ರಹ್ಮಸಂಖ್ಯೆ’ ಎನ್ನುತ್ತಾರೆ. ‘ದೈವಸಂಖ್ಯೆ’ ಮತ್ತು ‘ವೃದ್ಧಿಸಂಖ್ಯೆ’ ಎಂದೂ ಹೇಳುತ್ತಾರೆ. ಈ ಒಂಬತ್ತನೆಯ ಸಂಖ್ಯೆಯನ್ನೇ ಪುರಾಣ ಸಂಖ್ಯೆ’ ಎಂದೂ ನಂಬುತ್ತಾರೆ.
ಈ ಒಂಭತ್ತನೆಯ ಸಂಖ್ಯೆ ಮಹತ್ವವೇನೋ ನೋಡೋಣ! ಸೊನ್ನೆ ಬಿಟ್ಟರೆ ಒಟ್ಟು ಸಂಖ್ಯೆಗಳು ಒಂಬತ್ತು. ನೀವು ಯಾವುದಾದರೂ ನಿಮ್ಮಿಷ್ಟ ಬಂದ ಒಂದು ಸಂಖ್ಯೆಯನ್ನು ಒಂಬತ್ತನೆಯ ಸಂಖ್ಯೆಯಿಂದ ಗುಣಾಕಾರ ಮಾಡಿರಿ. ಬಂದ ಶೇಷಸಂಖ್ಯೆಗಳನ್ನು ಸಂಕಲನ ಮಾಡಿ ಏಕ ಸಂಖ್ಯೆಯನ್ನಾಗಿಸಿರಿ, ಒಂಬತ್ತು ಅಗುತ್ತದೆ. ಇಲ್ಲಿ ಪೂರಾ ಒಂಬತ್ತು ಸಂಖ್ಯೆಗಳನ್ನು ಒಂಬತ್ತರಿಂದ ಗುಣಿಸಲಾಗಿದೆ.
123456789×9=1111111101 ಒಟ್ಟಾಗಿ ಕೂಡಿಸಿದರೆ “9” ಆಗುತ್ತದೆ.
ಇದೇ ರೀತಿ ಒಂಬತ್ತನೆಯ ‘ಮಗ್ಗಿಯನ್ನು ನೋಡೋಣ.
9 × 1 = 9 — 9 = 9
9 × 2 = 18 — 1 + 8 = 9
9 × 3 = 27 — 2 + 7 = 9
9 × 4 = 36 — 3 + 6 = 9
9 × 5 = 45 — 4 + 5 = 9
9 × 6 = 54 — 5 + 4 = 9
9 × 7 = 63 — 6 + 3 = 9
9 × 8 = 72 — 7 + 2 = 9
9 × 9 = 81 — 8 + 1 = 9
9 × 10= 90 — 9 + 0 = 9
ಹೀಗೆ ಚತುರ್ಯುಗಗಳ ಕಾಲಾವಧಿಗಳನ್ನು ನೋಡೋಣ.
ಕಲಿಯುಗದ ಅವಧಿ:
4,32,000 ವರ್ಷಗಳು
4+3+2+0+0+0 = 9
ದ್ವಾಪರಯುಗದ ಅವಧಿ:
8,64,000 ವರ್ಷಗಳು
8+6+4+0+0+0=18, 1+8=9
ತ್ರೇತಾಯುಗದ ಅವಧಿ:
12,96,000 ವರ್ಷಗಳು
1+2+9+6+0+0+0 = 18, 1+8=9
ಕೃತಯುಗದ ಅವಧಿ:
17,28,000 ವರ್ಷಗಳು
1+7+2+8+0+0+0= 18,1+8=9
ಇಲ್ಲಿ ನೀವು ಗಮನಿಸಿರಬಹುದು.
ಕಲಿಯುಗದ ಎರಡರಷ್ಟು ದ್ವಾಪರಯುಗವಿದೆ.
ಕಲಿಯುಗದ ಮೂರರಷ್ಟು ತ್ರೇತಾಯುಗವಿದೆ.
ಕಲಿಯುಗದ ನಾಲ್ಕರಷ್ಟು ಕೃತಯುಗವಿದೆ.
ಮತ್ತೊಂದು ವಿಷಯ ಗಮನಿಸಿ.
ದ್ವಾಪರಯುಗದ ಅರ್ಧದಷ್ಟು ಕಲಿಯುಗವಿದೆ. ದ್ವಾಪರಯುಗದ ಒಂದೂವರೆ ಪಟ್ಟು ತ್ರೇತಾಯುಗವಿದೆ.
ದ್ವಾಪರಯುಗದ ಎರಡರಷ್ಟು ಕೃತಯುಗವಿದೆ
ಹೀಗೆ ನಾಲ್ಕು ಯುಗಗಳ ಒಟ್ಟುವರ್ಷಗಳು 43,20,000 4+3+2+0+0+0+0 = 9
ಮಹಾ ಇತಿಹಾಸವೆಂದು ಖ್ಯಾತಿಯಿರುವ ‘ಮಹಾಭಾರತ’ದ ಪರ್ವಗಳು: 18
1+8 = 9
ಮಹಾಭಾರತದ ಕುರುಕ್ಷೇತ್ರಯುದ್ಧದ ದಿನಗಳು: 18 1+8 = 9
ಕುರುಕ್ಷೇತ್ರ ಯುದ್ಧದಲ್ಲಿ ಪಾಲ್ಗೊಂಡ ಸೈನ್ಯದ ಸಂಖ್ಯೆ:
ಪಾಂಡವರದು: 7 ಅಕ್ಷೋಹಿಣಿ
ಕೌರವರದು: 11 ಅಕ್ಷೋಹಿಣಿ
ಒಟ್ಟು 18 ಅಕ್ಷೋಹಿಣಿಗಳು! 18 1+8 = 9
ಮಹಾಭಾರತದ ಭಗವದ್ಗೀತೆಯ ಅಧ್ಯಾಯಗಳು ಹದಿನೆಂಟು: 18
1+8 =
ವ್ಯಾಸಮಹರ್ಷಿಗಳು ಬರೆದ ಪುರಾಣಗಳು 18, (ಅಷ್ಟಾದಶ ಪುರಾಣಗಳು): 18
1+8 = 9
ವ್ಯಾಸಭಗವಾನರಿಗೂ ಒಂಬತ್ತನೆಯ ಸಂಖ್ಯೆಗೂ ಏನೋ ಅವಿನಾಭಾವ ಸಂಬಂಧವಿದೆ.
ಸಂಖ್ಯಾಶಾಸ್ತ್ರ ಮಹತ್ವದಿಂದಾಗಿ ಒಂಬತ್ತನೆಯ ಸಂಖ್ಯೆಗೆ ದೈವತ್ವವು ಬಂದಿದೆ.
ನಕ್ಷತ್ರಗಳು: 27 — 2+7 = 9
ರುದ್ರಾಕ್ಷಿ ಮಾಲೆಯಲ್ಲಿರುವ ರುದ್ರಾಕ್ಷಿಮಣಿಗಳ ಸಂಖ್ಯೆ: 108 — 1+0+8 = 9
ಈ ಒಂಬತ್ತನೆಯ ಸಂಖ್ಯೆಯ ಬಗ್ಗೆ ಮತ್ತಷ್ಟು ನೋಡೋಣ!
ಗಂಟೆಗೆ 3,600 ಸೆಕೆಂಡುಗಳು 3+6+0+0=9
ದಿನಕ್ಕೆ 1,440 ನಿಮಿಷಗಳು 1+4+4+0 = 9
ವಾರಕ್ಕೆ 10,080 ನಿಮಿಷಗಳು 1+0+0+8+0=9
ತಿಂಗಳಿಗೆ 720 ಗಂಟೆಗಳು 7+2+0 = 9
ವರ್ಷಕ್ಕೆ 360 ದಿನಗಳು = 3+6+0 = 9
60 ವರ್ಷಗಳಿಗೆ 720 ತಿಂಗಳುಗಳು =7+2+0=9
60 ವರ್ಷಗಳಿಗೆ 21,600 ದಿನಗಳು= 2+1+6+0+0 = 9
ಮನುಷ್ಯನ ಶರೀರಕ್ಕಿರುವ ರಂಧ್ರಗಳು 9 (ಸೃಷ್ಟಿಯ ಪ್ರಾಣಿಗಳಲ್ಲಿ ಸರ್ಪವನ್ನು ಬಿಟ್ಟರೆ ಉಳಿದ ಪ್ರಾಣಿಗಳಿಗೆ ಒಂಭತ್ತು ರಂಧ್ರಗಳಿರುತ್ತವೆ.)
ಮಾನವ ಶಿಶು ತಾಯಿಗರ್ಭದಲ್ಲಿ ಇರುವುದು:
9 ತಿಂಗಳುಗಳು, ಅಂದರೆ
270 ದಿನಗಳು, 7+2+0 = 9
ನವಗ್ರಹಗಳು-9
ನವರತ್ನಗಳು-9
ನವರಸಗಳು-9
ನವನಾದಗಳು-9
ನವನಿಧಿಗಳು-9
ನವಚಿತ್ತವೃತ್ತಿಗಳು-9
ನವರಂಧ್ರಗಳು-9
ನವಚಕ್ರಗಳು-9
ನವಧಾನ್ಯಗಳು-9
ನವನಾಥ ಸಿದ್ಧರು-9
ನವಭಯಗಳು-9
ನವನಾಡಿಗಳು-9
ಹೀಗೆ ಒಂಬತ್ತರ [9]ಸಂಖ್ಯೆಗೆ ಮಹತ್ವದ ಸ್ಥಾನವಿದೆ. ಇದೇ ಸನಾತನ ಧರ್ಮದ ವೈಶಿಷ್ಟ್ಯ ಮತ್ತೆ ಯಾವ ಧರ್ಮದಲ್ಲೂ ಇಷ್ಟು ವಿಜ್ಞಾನವನ್ನು ತಿಳಿಸಲು ಸಾಧ್ಯವಿಲ್ಲ.
ಶ್ರೀ ಸೋಮಶೇಖರ್ ಗುರೂಜಿ B.Sc
Mob.No.9353488403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403