Connect with us

Dvgsuddi Kannada | online news portal | Kannada news online

ದಾವಣಗೆರೆ: ತೋಟಗಾರಿಕೆ ಬೆಳೆ ತೆಂಗು, ಅಡಿಕೆ ನಿರ್ವಹಣೆ ಬಗ್ಗೆ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಪ್ರಮುಖ ಸಲಹೆಗಳು…

davangere tkvk arecanut

ದಾವಣಗೆರೆ

ದಾವಣಗೆರೆ: ತೋಟಗಾರಿಕೆ ಬೆಳೆ ತೆಂಗು, ಅಡಿಕೆ ನಿರ್ವಹಣೆ ಬಗ್ಗೆ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಪ್ರಮುಖ ಸಲಹೆಗಳು…

ದಾವಣಗೆರೆ: ತೋಟಗಾರಿಕೆ ಬೆಳೆಗಳಾದ ತೆಂಗು, ಅಡಿಕೆ ನಿರ್ವಹಣೆ ಕ್ರಮ ಬಗ್ಗೆ ದಾವಣಗೆರೆಯ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ.ಜಿ. ಹಾಗೂ ಹಿರಿಯ ವಿಜ್ಞಾನಿ ಮತ್ತು ಸಂಸ್ಥೆಯ ಮುಖ್ಯಸ್ಥರಾದ ಡಾ. ದೇವರಾಜ ಟಿ.ಎನ್ ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.

ಅಡಿಕೆ: ಬೇಸಿಗೆಯಲ್ಲಿ ಅತೀ ಹೆಚ್ಚು ಉಷ್ಣಾಂಶದಿಂದ ಕೆಲ ತೋಟಗಳಲ್ಲಿ ಗರಿಗಳು ಒಣಗಿರುವುದು ಮತ್ತು ಕೆಂಪು ನುಸಿಯ ಬಾಧೆ ಹೆಚ್ಚುವುದು ಕಂಡು ಬಂದಿದೆ. ಅತಂಹ ತೋಟಗಳಲ್ಲಿ ನಿಯಂತ್ರಣಕ್ಕೆ ಹೆಕ್ಸಿತೈಯೋಜಾಕ್ಸ್ 1.5 ಮಿಲೀ ಹಾಗೂ ಲಘು ಪೋಷಕಾಂಶಗಳ ಮಿಶ್ರಣ 5 ಮಿಲೀ ಪ್ರತೀ ಲೀಟರ್ ನೀರಿನಲ್ಲಿ ಬೆರಸಿ ಎಲೆಯ ಕೆಳಭಾಗ ಸಿಂಪಡಿಸಲು ಸೂಚಿಸಿದೆ.

ದೊಡ್ಡ ಅಡಿಕೆ ತೋಟಗಳಲ್ಲಿ ಇಂಗಾರ ಕೊಳೆ ರೋಗ ಕಂಡು ಬಂದಿರುವುದರಿಂದ ಅದರ ನಿಯಂತ್ರಣಕ್ಕೆ ಒಣಗಿರುವ ಇಂಗಾರಗಳನ್ನು ಕಿತ್ತು ಸುಡಬೇಕು. ತದನಂತರ ಮುಂಜಾಗೃತವಾಗಿ ಪ್ರೋಪಿಕೊನೋಜೋಲ್ 1 ಮಿಲೀ, ತೈಯಾಮೆಥಾಕ್ಸಾನ್ 0.5 ಗ್ರಾಂ, ಲಘು ಪೋಷಕಾಂಶಗಳ ಮಿಶ್ರಣ 5 ಮಿ.ಲೀ ಪ್ರತೀ ಲೀಟರ್ ನೀರಿನಲ್ಲಿ ಬೆರಸಿ ಎಲೆ ಮತ್ತು ಸುಳಿಗಳ ಮೇಲೆ ಸಿಂಪರಣೆಯನ್ನು ಮಾಡಬೇಕು.

ಮುಂಗಾರು ಹಂಗಾಮಿನಲ್ಲಿ ಅಡಿಕೆ ತೋಟಗಳಿಗೆ ಪೋಷಕಾಂಶಗಳನ್ನು ನೀಡುವುದಕ್ಕೆ ಸೂಕ್ತ ಕಾಲವಾಗಿದೆ. ತೋಟಗಳನ್ನು ಸ್ವಚ್ಚಪಡಿಸಿ ಮಣ್ಣಿನ ರಸಸಾರಕ್ಕೆ ಅನುಗುಣವಾಗಿ ಜಿಪ್ಸಂ ಪ್ರತಿ ಎಕರೆಗೆ 3-4 ಕ್ವಿಂಟಾಲ್‌ ಎರಚಿ ಉಳುಮೆ ಮಾಡಬೇಕು.

ಪೋಷಕಾಂಶಗಳ ನಿರ್ವಹಣೆಗೆ 1-5 ವರ್ಷದ ಒಳಗಿನ ತೋಟಗಳಿಗೆ ಸಾವಯವ ಗೊಬ್ಬರ 5-6 ಕೆಜಿ ಪ್ರತೀ ಗಿಡಕ್ಕೆ ಹಾಗೂ 10 ವರ್ಷ ಮೇಲ್ಪಟ್ಟ ಗಿಡಗಳಿಗೆ ಸಾವಯವ ಗೊಬ್ಬರ 10 ಕೆಜಿ ಪ್ರತೀ ಗಿಡಕ್ಕೆ ಹಾಗೂ ಮಣ್ಣು ಪರೀಕ್ಷೆಯ ಆಧಾರದ ಮೇಲೆ 15:15:15-150 ಗ್ರಾಂ., ಪೊಟ್ಯಾಷ್-100 ಗ್ರಾಂ ಮತ್ತು ಲಘು ಪೋಷಕಾಂಶ ಮಿಶ್ರಣ (ಬೀಟಲ್ ಮಿಕ್ಸ್) –100 ಗ್ರಾಂ ಪ್ರತಿ ಗಿಡಕ್ಕೆ ಗಿಡದಿಂದ ಎರಡು ಅಡಿ ಅಂತರದಲ್ಲಿ ನೀಡಬೇಕು.

ಮುಂಗಾರು ಪ್ರಾರಂಭವಾಗಿರುವುದರಿಂದ ಪೋಷಕಾಂಶಗಳನ್ನು ನೀಡಿದ ನಂತರ ಹಸಿರೆಲೆ ಗೊಬ್ಬರವಾಗಿ ಸೆಣಬು / ಡಯಾಂಚ (15 ಕೆಜಿ ಪ್ರತೀ ಎಕರೆಗೆ) ಅಥವಾ ವೆಲೆವೆಟ್ ಬೀನ್ಸ್ (4 ಕೆಜಿ ಪ್ರತೀ ಎಕರೆಗೆ) ಬೀಜಗಳನ್ನು ತೋಟಗಳಲ್ಲಿ ಬಳಸಿ ಹೂವಾಗುವುದಕ್ಕಿಂತ ಮುಂಚೆ ಭೂಮಿಯಲ್ಲಿ ಮುಗುಚಬೇಕು.

ತೆಂಗು: ತೆಂಗಿನ ತೋಟಗಳಲ್ಲಿ ಬಿಳಿ ನೋಣದ ಬಾಧೆ ಹೆಚ್ಚಾಗಿರುವ ಕಡೆ ನಿಯಂತ್ರಣಕ್ಕೆ ಬೇವಿನ ಎಣ್ಣೆ (5000 ಪಿಪಿಎಮ್) 2 ಮಿಲೀ ಪ್ರತೀ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಿ.
ಪೋಷಕಾಂಶಗಳ ನಿರ್ವಹಣೆಗೆ ಹತ್ತು ವರ್ಷ ಮೇಲ್ಪಟ್ಟ ತೋಟಗಳಿಗೆ ಸಾವಯವ ಗೊಬ್ಬರ 10-15 ಕೆಜಿ ಪ್ರತೀ ಗಿಡಕ್ಕೆ, ಬೇವಿನ ಪುಡಿ 4 ಕೆಜಿ, 15:15:15 1 ಕೆಜಿ, ಪೊಟ್ಯಾಷ್ 1.5 ಕೆಜಿ, ಲಘು ಪೋಷಕಾಂಶಗಳ ಮಿಶ್ರಣ 200ಗ್ರಾಂ ಪ್ರತೀ ಗಿಡಕ್ಕೆ ಗಿಡದಿಂದ ೬ ಅಡಿ ಅಚಿತರದಲ್ಲಿ ನೀಡಬೇಕು.

ತೋಟಗಳಲ್ಲಿ ಹಸಿರೆಲೆ ಗೊಬ್ಬರದ ಗಿಡಗಳನ್ನು (ಡಯಾಂಚ, ಸೆಣಬು, ವೆಲ್‌ವೆಟ್ ಬೀನ್ಸ್ ಇತರೆ) ಬೆಳೆಯುವುದು ಸೂಕ್ತ. ಸಾಮಾನ್ಯ ಬೇಸಾಯ ಕ್ರಮಗಳು ತೋಟಗಳ ಸುತ್ತ ಇರುವ ಬಸಿಗಾಲುವೆಗಳನ್ನು ಸ್ವಚ್ಚಗೊಳಿಸಿ, ಮಳೆ ನೀರು ಸರಾಗವಾಗಿ ಹರಿದು ಹೋಗಲು ಅವಕಾಶ ಮಾಡಿಕೊಡಬೇಕು.

ತೋಟಗಳಲ್ಲಿ ಸತ್ತಿರುವ ಗಿಡಗಳ ಬದಲು ಮರು ನಾಟಿ ಮಾಡುವಾಗ ಗುಂಡಿಗೆ ಟ್ರೈಕೋಡರ್ಮಾ ಮಿಶ್ರಿತ ಬೇವಿನ ಪುಡಿಯನ್ನು 4 ಕೆಜಿ ಪ್ರತಿ ಗುಂಡಿಗೆ ನೀಡಬೇಕು.ತೋಟದ ಗರಿಗಳು ವಿದ್ಯುತ್ ಕಂಬಗಳ ಹತ್ತಿರ ಲೈನ್‌ಗೆ ತಾಕುತ್ತಿದ್ದರೆ ವಿದ್ಯುತ್ ಇಲ್ಲದ ಸಮಯದಲ್ಲಿ ಅವುಗಳನ್ನು ಕತ್ತರಿಸುವುದು.ತೋಟದ ಸುತ್ತ ಇರುವ ಬೇಲಿಗಳ ಸ್ವಚ್ಚತೆಯನ್ನು ಕಾಪಾಡುವುದು ಸೂಕ್ತ.

ಹೆಚ್ಚಿನ ವಿವರಗಳಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ ಅಥವಾ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top