ಮಂಗಳೂರು: ಅಂತರ್ ರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಅಡಕೆ ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದ್ದು, ಭವಿಷ್ಯದಲ್ಲಿ ಅಡಕೆಯಿಂದಲೇ ಚಾಕಲೇಟ್ ಉತ್ಪಾದಿಸುವ ಸಾಹಸಕ್ಕೆ ಕ್ಯಾಂಪ್ಕೋ ಕೈ ಹಾಕಿದೆ. ಅಡಕೆಯಿಂದ ಮೌತ್ ಫ್ರೆಶ್ನರ್ ಬಳಿಕ ಚಾಕಲೇಟ್ ಕೂಡ ಸಿದ್ಧವಾಗಲಿದೆ.
ಗುಟ್ಕಾ, ಪಾನ್ ಗೆ ಸೀಮಿತವಾಗಿದ್ದ ಅಡಕೆ ನಂತರ ಕಾಜು ಸುಪಾರಿವರೆಗೆ ವಿವಿಧ ರೀತಿಯ ಮೌಲ್ಯವರ್ಧಿತ ಉತ್ಪನ್ನವಾಗಿ ಹೊರಹೊಮ್ಮಿತ್ತು. ಇನ್ನು ಕೆಲವು ವರ್ಷ ಹಿಂದೆ ಅಡಕೆ ಸಿಪ್ಪೆಯಿಂದ ಮೌತ್ ಫ್ರೆಶ್ನರ್ ಅಭಿವೃದ್ಧಿಪಡಿಸಿದ್ದ ಕ್ಯಾಂಫ್ಕೋ. ಇದೀಗ ಅಡಿಕೆಯಿಂದಲೇ ಮೌತ್ ಫ್ರೆಶ್ನರ್ ಸಿದ್ಧಪಡಿಸಿದೆ.
ಕ್ಯಾಂಪ್ಕೋ ನೂತನ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮಾತನಾಡಿ, ನುಂಗಲು ಬಹುದಾದ ಈ ಮೌತ್ ಫ್ರೆಶ್ನರ್‌ನ್ನ ನೈಸರ್ಗಿಕವಾಗಿ ತಯಾರಿಸಲಾಗಿದ್ದು, ಅಂತಿಮ ಪ್ರಯೋಗ ನಡೆಯುತ್ತಿದೆ. ಸದ್ಯ ಅಡಿಕೆಯಿಂದ ಚಾಕಲೇಟ್ ಸಿದ್ಧಪಡಿಸುವುದು ಕ್ಯಾಂಪ್ಕೋದ ಹೊಸ ಕಲ್ಪನೆಯಾಗಿದ್ದು, ಈಗಾಗಲೇ ಅಡಕೆಯಿಂದ ವಿವಿಧ ಕಡೆಗಳಲ್ಲಿ ಟೀ, ಕಷಾಯ, ಲಡ್ಡು ಇತ್ಯಾದಿ ಮೌಲ್ಯವರ್ಧಿತ ಉತ್ಪನ್ನ ಹೊರಬರುತ್ತಿದೆ. ಹೀಗಾಗಿ ಚಾಕಲೇಟ್‌ನ್ನ ಕೂಡ ಯಾಕೆ ತಯಾರಿಸಬಾರದು ಎಂಬ ಚಿಂತನೆ ನಡೆಸಿದೆ.
ಅಡಕೆ ಮೌತ್ ಫ್ರೆಶ್ನರ್ ತಯಾರಿಸಿರುವುದರಿಂದ ಅದರ ಮುಂದುವರಿದ ಭಾಗವಾಗಿ ಅಡಕೆ ಚಾಕಲೇಟ್ ಆವಿಷ್ಕಾರಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಇದು ಯಾವ ಹಂತದಲ್ಲಿದೆ ಎಂಬುದನ್ನು ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲಎಂದರು.