ಪ್ರಮುಖ ಸುದ್ದಿ
ಗುರುವಾರ ರಾಶಿ ಭವಿಷ್ಯ
- ಗುರುವಾರ ರಾಶಿ ಭವಿಷ್ಯ-ಡಿಸೆಂಬರ್-17,2020
- ಸೂರ್ಯೋದಯ: 06:38, ಸೂರ್ಯಸ್ತ: 17:53
- ಶಾರ್ವರಿ ನಾಮ ಸಂವತ್ಸರ
ಮಾರ್ಗಶಿರ ಮಾಸ ದಕ್ಷಿಣಾಯಣ - ತಿಥಿ: ತದಿಗೆ – 15:17 ವರೆಗೆ
ನಕ್ಷತ್ರ: ಉತ್ತರ ಆಷಾಢ – 19:13 ವರೆಗೆ - ಯೋಗ: ಧ್ರುವ – 16:04 ವರೆಗೆ
ಕರಣ: ಗರಜ – 15:17 ವರೆಗೆ ವಣಿಜ – 26:44+ ವರೆಗೆ - ದುರ್ಮುಹೂರ್ತ: 10:23 – 11:08
ದುರ್ಮುಹೂರ್ತ : 14:53 – 15:38 - ರಾಹು ಕಾಲ: 13:30 – 15:00
ಯಮಗಂಡ: 06:00 07:30
ಗುಳಿಕ ಕಾಲ: 09:00 – 10:30 - ಅಮೃತಕಾಲ: 13:02 – 14:35
ಅಭಿಜಿತ್ ಮುಹುರ್ತ: 11:53 – 12:38 - ಓಂ ಶ್ರೀ ಚಾಮುಂಡೇಶ್ವರಿ ಜ್ಯೋತಿಷ್ಯ ಕೇಂದ್ರ.
- ಶ್ರೀ ಸೋಮಶೇಖರ್ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.
ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403
ಮೇಷ ರಾಶಿ
ಆರ್ಥಿಕವಾಗಿ ಉತ್ತಮವಾಗಿಲ್ಲ. ಸಂಗಾತಿಯ ಮಾತು ಕೇಳದಿದ್ದರೆ ನಿಮಗೆ ದೊಡ್ಡ ನಷ್ಟವನ್ನುಂಟು ಮಾಡುತ್ತದೆ. ಹಣಹೂಡಿಕೆ ವಹಿವಾಟಿನಲ್ಲಿ ವಂಚನೆ ಇರಬಹುದು ಜಾಗರೂಕರಾಗಿರಿ. ಇಂದು ಕೆಲಸದ ವಿಷಯದಲ್ಲಿ ಧನಲಾಭ ಮಿಶ್ರ ದಿನವಾಗಿರುತ್ತದೆ. ವೃತ್ತಿರಂಗದಲ್ಲಿ ಕೆಲವು ಅಡೆತಡೆಗಳು ಎದುರಾಗಿದ್ದರೆ, ಮೇಲಾಧಿಕಾರಿಯ ಸಹಾಯ ದೊರೆಯುವುದು. ರಿಯಲ್ ಎಸ್ಟೇಟು ಉದ್ಯಮದಾರರು ನಿರೀಕ್ಷೆಯಂತೆ ಲಾಭದ ಕೊರತೆಯಿಂದಾಗಿ ಉದ್ಯಮಿಗಳು ನಿರಾಶೆಗೊಳ್ಳಬಹುದು. ನೀವು ಆಸ್ತಿ ವಿಚಾರಕ್ಕಾಗಿ ವಾದ ಮಾಡುವ ಸಾಧ್ಯತೆಯಿದೆ. ಕುಟುಂಬ ಜೀವನವು ಮನಸ್ತಾಪವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗಿನ ಸಂಬಂಧವು ಹಣಕಾಸು ಹಾಗೂ ಆಸ್ತಿ ಪಾಲುದಾರಿಕೆಯಿಂದ ಬೇಸರ ಉಂಟುಮಾಡುತ್ತವೆ. ಪ್ರೇಮಿಗಳ ಮನಸ್ಥಿತಿ ಇಂದು ಸ್ವಲ್ಪ ದಿಗ್ಭ್ರಮೆಗೊಳ್ಳುತ್ತದೆ. ರಾತ್ರಿ-ಹಗಲು ಕೆಲಸದ ನಿಮಿತ್ಯ ಆರೋಗ್ಯದಲ್ಲಿ ತೊಂದರೆ ಸಂಭವ. ಮಕ್ಕಳ ಆರೋಗ್ಯವೂ ಅಷ್ಟೇ ಮುಖ್ಯ. ದಂಪತಿಗಳಿಗೆ ಸಂತಾನದ ಚಿಂತನೆ ಕಾಡಲಿದೆ.
ಅದೃಷ್ಟ ಬಣ್ಣ: ಬಿಳುಪು
ಅದೃಷ್ಟ ಸಂಖ್ಯೆ: 6,8
ಅದೃಷ್ಟ ಸಮಯ: ಸಂಜೆ 4:00 ರಿಂದ 06:00ರವರೆಗೆ
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ವೃಷಭ ರಾಶಿ
ಗೃಹ ಕಟ್ಟಡದ ಅಥವಾ ನಿವೇಶನ ಖರೀದಿ ಸಂಬಂಧಿಸಿದಂತೆ ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಹೊಸ ಉದ್ಯಮಕ್ಕೆ ಸಂಬಂಧಿಸಿದಂತೆ ಹೊಸ ಯೋಜನೆ ಮಾಡುತ್ತಿದ್ದರೆ, ನಿಮ್ಮ ಮಾತಾಪಿತೃ ಹಾಗೂ ಪತ್ನಿಯ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಇಂದು ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳು ಶಮನವಾಗಿ ಆಸ್ತಿ ಪಾಲುದಾರಿಕೆ ಇತ್ಯಾರ್ಥ ಆಗುವುದು. ಪರಸ್ಪರ ಹೊಂದಾಣಿಕೆ ಕ್ಷೀಣಿಸುತ್ತಿರುವುದರಿಂದ ಪ್ರೇಮಿಗಳಲ್ಲಿ ಅಪಶ್ರುತಿ ಉಂಟಾಗುತ್ತದೆ. ಕಠಿಣ ಪರಿಸ್ಥಿತಿಯಲ್ಲಿ ನಿಮ್ಮ ಉದ್ಯೋಗದ ಬದಲಾವಣೆ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ನಿಭಾಯಿಸುತ್ತೀರಿ. ವ್ಯಾಪಾರಸ್ಥರಿಗೆ ಆದಾಯವು ಉತ್ತಮವಾಗಿರುತ್ತದೆ.ಆದರೆ ನಿರೀಕ್ಷೆಯಲ್ಲಿದ್ದ ಟಾರ್ಗೆಟ್ ಹಣವನ್ನು ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಇಂದು ನೀವು ದಣಿದ ಹೃದಯಕ್ಕೆ ಸಂಗಾತಿಯಿಂದ ಸುಖ ಸಿಗುವುದು. ನಿಮ್ಮ ಮಕ್ಕಳು ಆಲಸ್ಯದಿಂದ ಕೂಡಿರುವರು. ಅವರ ಅಲಸ್ಯ ಹಾಗೂ ಸೋಮಾರಿತನ ಅವರ ಭವಿಷ್ಯಕ್ಕೆ ಮಾರಕವಾಗುವುದು.
ಅದೃಷ್ಟ ಬಣ್ಣ: ಬಿಳಿ
ಅದೃಷ್ಟ ಸಂಖ್ಯೆ: 2,5
ಅದೃಷ್ಟ ಸಮಯ: ಬೆಳಿಗ್ಗೆ 7:00 ರಿಂದ ಸಂಜೆ 8:00 ರವರೆಗೆ
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಮಿಥುನ ರಾಶಿ
ಇಂದು ನಿಮಗೆ ವ್ಯಾಪಾರ-ವಹಿವಾಟದಲ್ಲಿ ತುಂಬಾ ಲಾಭದಾಯಕವಾಗಲಿದೆ. ಇಂದು ನಿಮಗೆ ಬಾಳಿನ ಸಂಗಾತಿಯಿಂದ ಬೇಕಾದುದನ್ನು ನೀವು ಬಯಸಬಹುದು. ಕಚೇರಿ ಕೆಲಸಗಳು ಇಂದು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತದೆ. ಬಹುದಿನದಿಂದ ಕಾಡುತ್ತಿರುವ ಒಂದು ಕೆಲಸ ಇಂದು ನೀವು ಪೂರ್ಣಗೊಳಿಸುತ್ತೀರಿ. ಉದ್ಯೋಗಿಗಳು ತಮ್ಮ ಜ್ಞಾನದ ಲಾಭವನ್ನು ಪಡೆದುಕೊಂಡು, ವೃತ್ತಿ ಕ್ಷೇತ್ರದಲ್ಲಿ ಪ್ರಮೋಷನ್ ಪಡೆಯುವ ಭಾಗ್ಯ ಸಿಗಲಿದೆ. ನಿಮ್ಮ ಉನ್ನತ ಅಧಿಕಾರಿಗಳ ಜೊತೆ ಆತ್ಮೀಯತೆ ಗಟ್ಟಿಯಾಗುವುದು. ವೃತ್ತಿ ಕ್ಷೇತ್ರ ಬದಲಾವಣೆ ಬೇಡ. ಉದ್ಯಮಿಗಳು ಇಂದು ದೊಡ್ಡ ಪ್ರಜೆಕ್ಟ್ ನಿರ್ಧರಿಸುವ ಸಾಧ್ಯತೆ. ಸಾಲದ ಬೇಡಿಕೆ ಇಂದು ಪೂರ್ಣಗೊಳ್ಳುತ್ತದೆ. ಪ್ರೇಮಿಗಳ ಜೀವನವು ಆನಂದಮಯವಾಗಿರುತ್ತದೆ. ನಿಮ್ಮ ಹೆತ್ತವರ ಆಶೀರ್ವಾದ ದಿಂದ ಕಂಕಣ ಭಾಗ್ಯ ನಿಮಗೆ ಸಿಗುತ್ತದೆ. ನಿಮ್ಮ ಸಂಗಾತಿ ಹೃದಯ ಸಾಮರಸ್ಯ ಇರುತ್ತದೆ. ಆರೋಗ್ಯದ ದೃಷ್ಟಿಯಿಂದ ವಾತ, ವಾಯು, ಪಿತ್ತ ನಿಮಗೆ ಸಮಸ್ಯೆ ಕಾಡಲಿದೆ.
ಅದೃಷ್ಟ ಬಣ್ಣ: ಹಸಿರು
ಅದೃಷ್ಟ ಸಂಖ್ಯೆ: 2,4
ಅದೃಷ್ಟ ಸಮಯ: ಸಂಜೆ 5:00 ರಿಂದ 8:00 ರವರೆಗೆ
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಕರ್ಕ ರಾಶಿ
ನಿಮ್ಮ ವೈವಾಹಿಕ ಜೀವನದಲ್ಲಿ ಮದ್ಯಸ್ತಿಕೆ ಜನರಿಂದ ಕಲಹ ಉಂಟಾಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ಭೇಟಿ ಯಾಗಿ ಮದುವೆ ಚರ್ಚೆ ಸಾಧ್ಯ. ನಿಮ್ಮ ಕೋಪವನ್ನು ನಿಯಂತ್ರಿಸುವುದು ಉತ್ತಮ, ಇಲ್ಲದಿದ್ದರೆ ಕೋಲಾಹಲ ಉಂಟು. ಪತ್ನಿಯ ಮನಸ್ತಾಪದಿಂದ ಇಂದು ನಿಮ್ಮ ಮನಸ್ಸು ಸ್ವಲ್ಪ ತೊಂದರೆಗೀಡಾಗುತ್ತದೆ. ನಿಮ್ಮ ಮನಸ್ತಾಪ ನಿಮ್ಮ ಕೆಲಸದ ಮೇಲೂ ಪರಿಣಾಮ ಬೀರುತ್ತವೆ. ನೀವು ಕಚೇರಿಯಲ್ಲಿ ಕೆಲಸ ಮಾಡುವಾಗ ಮೇಲಾಧಿಕಾರಿ ಜೊತೆ ಕೆಂಗಣ್ಣಿಗೆ ಗುರಿಯಾಗುವಿರಿ. ಹಣ ಹೂಡಿಕೆಗಾಗಿ ಪ್ರಯತ್ನ ನಡೆಯಲಿದೆ. ನಿಮ್ಮ ಮಾತಾಪಿತೃ ಆರೋಗ್ಯ ಕ್ಷೀಣಿಸಬಹುದು. ಇಂದು ಆಕಸ್ಮಿಕ ಆಸ್ಪತ್ರೆ ಭೇಟಿ ಸಂಭವ. ನೀವು ಇಂದು ಕೆಮ್ಮು ಮತ್ತು ಶೀತದಿಂದ ತೊಂದರೆಗೊಳಗಾಗುತ್ತೀರಿ.
ಕುಟುಂಬದಲ್ಲಿ ಶುಭ ಮಂಗಳ ಕಾರ್ಯದ ಚರ್ಚೆ ಸಂಭವ.
ಅದೃಷ್ಟ ಬಣ್ಣ: ಕೆಂಪು
ಅದೃಷ್ಟ ಸಂಖ್ಯೆ: 4,8
ಅದೃಷ್ಟ ಸಮಯ: ಬೆಳಿಗ್ಗೆ 8:00 ರಿಂದ ಸಂಜೆ 9:00 ರವರೆಗೆ
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಸಿಂಹ ರಾಶಿ
ಇಂದು ಉದ್ಯಮಿಗಳಿಗೆ ಹೊಸ ಉದ್ಯಮ ಪ್ರಾರಂಭದ ಚಿಂತನೆ ಮಾಡುವವರು. ಇಂದು ನಿಮಗೆ ಖರ್ಚು ವೆಚ್ಚದ ಬಗ್ಗೆ ಪತ್ನಿಯ ಜೊತೆ ಚರ್ಚೆ ಮಾಡುವಿರಿ. ಹಣಕಾಸು ಗಮನದಲ್ಲಿಟ್ಟುಕೊಂಡು ನಿವೇಶನ ಖರೀದಿ ಬಹಳ ಮುಖ್ಯವಾಗುತ್ತದೆ. ನೀವು ಕಾನೂನು ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದರೆ, ಇಂದು ಇತ್ಯಾರ್ಥವಾಗುವ ಸಂಭವ. ಹಣ ಹೂಡಿಕೆಗಾಗಿ ಶುಭದಿನವಾಗುವುದು. ನಿಮಗಾಗಿ ಕೆಲವು ಮದುವೆಯ ಒಳ್ಳೆಯ ಸುದ್ದಿ ಇರುತ್ತದೆ. ಬಹುಶಃ ಹಳೆಯ ಸಂಗಾತಿ ಭೇಟಿ ಸಂಭವ. ಹೊಸದಾಗಿ ಸೇರಿರುವ ಉದ್ಯೋಗಿಗಳಿಗೆ ಉತ್ತಮ ದಿನವಾಗುವುದಿಲ್ಲ, ಆದರೆ ಧೈರ್ಯದಿಂದ ಮುಂದುವರಿಯಿರಿ. ಸೋಮಾರಿತನದಿಂದಾಗಿ ತೊಂದರೆ ಅನುಭವಿಸುವಿರಿ.ನೀವು ಹೆಚ್ಚು ಆರೋಗ್ಯದ ಕಡೆ ಗಮನ ಹರಿಸಬೇಕು. ಗ್ಯಾಸ್ಟ್ರಿಕ್ ಹಾಗೂ ಹೃದಯಕ್ಕೆ ಸಂಬಂಧಿಸಿದ ನಿರ್ಲಕ್ಷ್ಯವನ್ನು ತಳ್ಳಿಹಾಕಬೇಡಿ. ಸ್ನೇಹಿತರ ಹಣಕಾಸಿನ ತೊಂದರೆ ನಿಭಾಯಿಸಲು ನಿಮ್ಮ ಸಹಾಯ ಕೋರುವರು. ಇಂದು ನಿಮ್ಮ ಸಂಗಾತಿ ಜೊತೆ ಸಾಕಷ್ಟು ಗಲಾಟೆ ಉಂಟಾಗುತ್ತದೆ. ನೀವು ತಾಳ್ಮೆಯಿಂದಿದ್ದರೆ ನಿಧಾನವಾಗಿ ಎಲ್ಲವೂ ಸಾಮಾನ್ಯವಾಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಕೊಂಚ ಚೇತರಿಕೆ ಸಾಧ್ಯತೆಯಿದೆ. ಇಂದು ಸಂಪತ್ತಿನ ಮೊತ್ತವನ್ನು ಲೆಕ್ಕಾಚಾರ ಮಾಡುವಿರಿ. ಮದುವೆಗಾಗಿ ಪೂರ್ವತಯಾರಿ ಮಾಡಿಕೊಳ್ಳುವಿರಿ. ಮನೆಯ ವಾತಾವರಣ ಇಂದು ಶಾಂತವಾಗಿರುತ್ತದೆ. ನಿಮ್ಮ ಕುಟುಂಬ ಸದಸ್ಯರೊಂದಿಗಿನ ನಿಮ್ಮ ಸಂಬಂಧವೂ ಉತ್ತಮಗೊಳ್ಳುವುದು. ವ್ಯಾಪಾರ ವಹಿವಾಟಿನಲ್ಲಿ ಉತ್ತಮವಾಗಿ ಉಳಿಯುತ್ತದೆ.
ಅದೃಷ್ಟ ಬಣ್ಣ: ನೀಲಿ
ಅದೃಷ್ಟ ಸಂಖ್ಯೆ: 2,9
ಅದೃಷ್ಟ ಸಮಯ: ಬೆಳಿಗ್ಗೆ 5:00 ರಿಂದ ರಾತ್ರಿ 10:00 ರವರೆಗೆ
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಕನ್ಯಾ ರಾಶಿ
ಕೆಲಸದಲ್ಲಿ ಸಹೋದ್ಯೋಗಿಗಳ ಸಹಕಾರ ಅನುಕೂಲಕರವಾಗಿರುತ್ತದೆ. ಇಂದು ಕೆಲಸದಲ್ಲಿ ಯಾವುದೇ ತರಹದ ಅಡ್ಡಿ ಇರುವುದಿಲ್ಲ. ಮೇಲಾಧಿಕಾರಿಯಾದ ನೀವು ಕಚೇರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ನಿಮ್ಮ ಹಿರಿಯರು ನಿಮ್ಮ ಮದುವೆ ಸುದ್ದಿ ಕೇಳಿ ತುಂಬಾ ಸಂತೋಷವಾಗುತ್ತಾರೆ. ಕುಲಕಸುಬು ವ್ಯಾಪಾರ ಮಾಡುವ ಜನರು ಹಳೆಯ ಹೂಡಿಕೆಯ ಲಾಭವನ್ನು ಪಡೆಯುವ ನಿರೀಕ್ಷೆಯಿದೆ. ಶೀಘ್ರದಲ್ಲೇ ಹೊಸ ಉದ್ಯೋಗ ಪ್ರಾರಂಭ ಮಾಡುವಿರಿ, ವ್ಯವಹಾರವನ್ನು ಹೆಚ್ಚಿಸುವ ನಿಮ್ಮ ಕನಸು ನನಸಾಗಲಿದೆ. ಬಾಳಿನ ಸಂಗಾತಿಯ ಜೀವನದಲ್ಲಿ ಸ್ವಲ್ಪ ಉದ್ವೇಗ ಉಂಟಾಗುತ್ತದೆ. ಆಸ್ತಿಗೆ ಸಂಬಂಧಿಸಿದ ಅಥವಾ ಹಣಕಾಸಿಗೆ ಸಂಬಂಧಿಸಿದ ಹಳೆಯ ವಾದವು ಉದ್ಭವಿಸಬಹುದು. ಅನೈತಿಕ ಸಂಬಂಧದಿಂದ ಮನೆಯಲ್ಲಿ ಜಗಳಕ್ಕೆ ಕಾರಣವಾಗಬಹುದು. ಆರ್ಥಿಕವಾಗಿ ಇಂದು ನೀವು ಶಕ್ತಿಯುತವಾಗಿರುತ್ತೀರಿ. ಹಣ ಹೂಡಿಕೆಯಲ್ಲಿ ಆದಾಯ ಹೆಚ್ಚಾಗುವ ಪ್ರಬಲ ಸಾಧ್ಯತೆ ಇದೆ. ಇಂದು ನೀವು ನಿಮ್ಮ ದುಷ್ಟ ಹವ್ಯಾಸಗಳಿಗಾಗಿ ತ್ಯಜಿಸಿವಿರಿ. ಆರೋಗ್ಯಕ್ಕಾಗಿ ಹೆಚ್ಚು ಖರ್ಚು ಮಾಡುವಿರಿ. ಇಂದು ಸಂಗಾತಿಯ ಜೊತೆ ಈ ಸಂಜೆ ಆನಂದಿಸಬಹುದು. ಧೂಮಪಾನ ಮಧ್ಯಪಾನ ನಿಮ್ಮ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಇಂದು ಬಿಡುವುದು ಉತ್ತಮ, ಇಲ್ಲದೆ ಹೋದರೆ ಮುಂದಿನ ದಿನ ತುಂಬಾ ಕಷ್ಟ ಅನುಭವಿಸುವಿರಿ.
ಅದೃಷ್ಟ ಬಣ್ಣ: ಗುಲಾಬಿ
ಅದೃಷ್ಟ ಸಂಖ್ಯೆ: 2,9
ಅದೃಷ್ಟದ ಸಮಯ: ಮಧ್ಯಾಹ್ನ 3:00 ರಿಂದ ರಾತ್ರಿ 8:30 ರವರೆಗೆ
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ತುಲಾ ರಾಶಿ
ನಿಮ್ಮ ವೈಯಕ್ತಿಕ ಜೀವನದಲ್ಲಿ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಇಂದು ಸಂಪೂರ್ಣವಾಗಿ ಬಗೆಹರಿಯಲಿದೆ. ಪ್ರೇಮಿಗಳ ಮನಸ್ತಾಪ ಸಮಸ್ಯೆಗಳನ್ನು ಇಂದು ನಿವಾರಿಸಬಹುದು. ಕುಟುಂಬ ಸದಸ್ಯರೊಂದಿಗೆ ದೇವ ದರ್ಶನಭಾಗ್ಯ ಲಭಿಸಲಿದೆ. ಪತ್ನಿಯ ಜೊತೆ ನೀವು ಸಾಕಷ್ಟು ಸಮಯ ಕಳೆದರೆ ನಿಮಗೆ ನಿರಾಳವಾಗುತ್ತದೆ. ಉದ್ಯೋಗದಲ್ಲಿರುವ ಜನರು ನಿಮ್ಮ ಬಗ್ಗೆ ಅವಹೇಳನ ಮಾಡುವ ಸಾಧ್ಯತೆ. ನೀವು ಕಷ್ಟಕರವಾದ ಸಾಲ ಪೂರ್ಣಗೊಳಿಸಲು ಶ್ರಮಿಸುತ್ತಿದ್ದೀರಿ.ಇಂದು ನಿಮ್ಮ ಋಣಭಾದೆ ಅಂತಿಮವಾಗಿ ಮುಗಿಯುವ ಹಂತಕ್ಕೆ ಬಂದಿದೆ. ಭಯಪಡಬೇಡಿ ಕೆಲಸದ ಹೊರೆ ಹಗುರವಾಗಿರುವುದು. ನೀವು ಮದುವೆಯಾಗಿದ್ದರೆ ಇಂದು ಸಂತಾನದ ಸಮಸ್ಯೆಗಾಗಿ ವೈದ್ಯರ ಭೇಟಿಯಾಗುವಿರಿ. ನವದಂಪತಿಗಳ ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಶಾಂತಿ ಇರುತ್ತದೆ. ನಿಮ್ಮ ಸಂಗಾತಿಯಿಂದ ನೀವು ನಿರೀಕ್ಷಿತ ಮದುವೆಯ ಬೆಂಬಲವನ್ನು ಪಡೆಯುತ್ತೀರಿ. ಅದು ನಿಮಗೆ ತುಂಬಾ ಸಂತೋಷವನ್ನು ನೀಡುತ್ತದೆ. ನೀವು ಇಂದು ಸಾಲ ನೀಡುವುದನ್ನು ತಪ್ಪಿಸಬೇಕು. ದೀರ್ಘಕಾಲದ ಸಾಲ ಮರಳಿ ಬರುವ ಸಾಧ್ಯತೆ. ನೀವು ಇವತ್ತು ಜಾಮೀನ್ ಸಿಲುಕಿಕೊಳ್ಳಬಹುದು. ಆರೋಗ್ಯದ ದೃಷ್ಟಿಯಿಂದ ಚೇತರಿಕೆಯ ದಿನ. ನೀವು ಒಳ್ಳೆ ಊಟ ಅನುಭವಿಸುವಿರಿ.
ಅದೃಷ್ಟ ಬಣ್ಣ: ಹಸಿರು
ಅದೃಷ್ಟ ಸಂಖ್ಯೆ: 3,7
ಅದೃಷ್ಟ ಸಮಯ: ಬೆಳಿಗ್ಗೆ 10:00 ರಿಂದ ಸಂಜೆ 7:00 ರವರೆಗೆ
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ವೃಶ್ಚಿಕ ರಾಶಿ
ದಂಪತಿಗಳಿಗೆ ಇಂದು ಶುಭ ವಾಗಲಿದೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಉತ್ತಮ ಸಾಧನೆಗಾಗಿ ಕೆಲಸದಲ್ಲಿ ಪ್ರಮೋಷನ್ ಭಾಗ್ಯ ಸಿಗಲಿದೆ. ರಾಜಕಾರಣಿಗಳಿಗೆ ನಿಮ್ಮ ಮತಕ್ಷೇತ್ರದಲ್ಲಿ ನಿಮ್ಮನ್ನು ಗೌರವಿಸಬಹುದು. ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ನಿಮ್ಮ ಬಡ್ತಿಯ ಸೂಚನೆ ಕಂಡುಬರುತ್ತವೆ. ರಿಯಲ್ ಎಸ್ಟೇಟ್ ಉದ್ಯಮಿಗಳು ಇಂದು ದೊಡ್ಡ ಲಾಭವನ್ನು ಪಡೆಯಬಹುದು. ಗುತ್ತಿಗೆದಾರರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ, ಹೊಸ ಟೆಂಡರ್ ನಿಮ್ಮ ಪಾಲಿಗೆ ಸಿಗಲಿದೆ. ಅಪಾಯಕಾರಿ ಸಂಘ ಸಂಸ್ಥೆಗಳಲ್ಲಿ ಹಣ ಹೂಡಿಕ ಮಾಡಿದ್ದರೆ ಅದು ನಿಮಗೆ ಮಾರಕವಾಗುವುದು. ಪ್ರೇಮಿಗಳ ಸಂಬಂಧ ಉತ್ತಮವಾಗಿರುತ್ತದೆ. ಪತಿ-ಪತ್ನಿ ಸಂಬಂಧ ಉತ್ತಮವಾಗಿರುತ್ತವೆ. ಇಂದು ಮನೆಯ ಮುಖ್ಯಸ್ಥರಿಂದ ನಿಮ್ಮ ಪ್ರಮುಖ ಕೆಲಸದಲ್ಲಿನ ಅಡಚಣೆಯನ್ನು ಉಂಟಾಗುವ ಸಂಭವ. ವಿರೋಧಿಗಳ ಮೇಲೆ ಇರುವ ದ್ವೇಷದ ಮನಸ್ಥಿತಿ ತೆಗೆದುಹಾಕಲಾಗುತ್ತದೆ. ನಿಮ್ಮ ಸಂಗಾತಿ ಜೊತೆ ಈ ದಿನ ತುಂಬಾ ರೋಮ್ಯಾಂಟಿಕ್ ರಾತ್ರಿ ಆಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಶುಭರಾತ್ರಿ ಕಳೆಯಿರಿ. ಸಂತಾನ ಸಂಬಂಧಿಸಿದ ಕೆಲವು ಸಮಸ್ಯೆಗಳು ಕಂಡುಬರುತ್ತವೆ. ಸಂಗಾತಿಯ ಆರೋಗ್ಯದ ಬಗ್ಗೆ ನೀವು ಚಿಂತೆ ಮಾಡುತ್ತೀರಿ. ವಾತ-ಪಿತ್ತ ವಾಯು ಹಾಗೂ ಗ್ಯಾಸ್ಟ್ರಿಕ್ ಸಣ್ಣ ಆರೋಗ್ಯ ಸಮಸ್ಯೆಗಳಿರಬಹುದು ಆದರೆ ಎಚ್ಚರಿಕೆವಹಿಸಿ.
ಅದೃಷ್ಟ ಬಣ್ಣ: ಬಿಳಿ
ಅದೃಷ್ಟ ಸಂಖ್ಯೆ: 4,6
ಅದೃಷ್ಟ ಸಮಯ ಬೆಳಗ್ಗೆ: 8:00 ರಿಂದ ರಾತ್ರಿ 7:05 ರವರೆಗೆ
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಧನು ರಾಶಿ
ಹಣದ ದೃಷ್ಟಿಯಿಂದ ಈ ದಿನ ಒಳ್ಳೆಯದು, ಹೆಚ್ಚಿನ ಕೆಲಸ ಮಾಡಿ ಹೆಚ್ಚಿನ ಹಣ ಗಳಿಸಿರಿ. ಅದೃಷ್ಟದಿಂದ ಧನಪ್ರಾಪ್ತಿ. ಮಿತಾ ಭೋಜನ, ಮಿತ ವ್ಯಾಯಾಮ ಇದು ಆರೋಗ್ಯದಲ್ಲಿ ಸುಧಾರಿಸಬಹುದು. ಹೊಸ ಹಣಕಾಸು ಯೋಜನೆಗಳನ್ನು ಆರಂಭಿಸುವಿರಿ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಇಂದು ನಿಮ್ಮ ಪ್ರಣಯ ಜೀವನದಲ್ಲಿ ನಿಮ್ಮ ಗೆಳೆಯ / ಗೆಳತಿಯೊಂದಿಗಿನ ರಾತ್ರಿಯ ದಿನಗಳು ಅನುಭವಿಸುವಿರಿ. ಸಂಗಾತಿಯ ಸಹಕಾರ ,ಪ್ರೀತಿಯ ಅಪ್ಪುಗೆ ತುಂಬಾ ಸಂತೋಷವಾಗಿರುವಿರಿ. ಇಂದು ನಿಮ್ಮ ಮಕ್ಕಳ ಮದುವೆ ಪ್ರಸ್ತಾಪಿಸುವ ಸಾಧ್ಯತೆಯಿದೆ. ನೀವು ಸಂಗಾತಿಗಾಗಿ ವಿಶೇಷ ಉಡುಗೊರೆಯನ್ನು ನೀಡುವಿರಿ. ಇಂದು, ಕಚೇರಿಯಲ್ಲಿ ಉನ್ನತ ಅಧಿಕಾರಿಗಳು ನಿಮ್ಮೊಂದಿಗೆ ಚರ್ಚಿಸುವರು ,ಪೂರ್ವ ತಯಾರಿ ಇರಲಿ. ನಿಮ್ಮ ನಿರ್ಲಕ್ಷ್ಯ ಸ್ವಭಾವದಿಂದ ಬಹುಮುಖ್ಯವಾದ ವಸ್ತು ಕಳೆದುಹೋಗುವ ಸಂಭವ. ಸಹೋದ್ಯೋಗಿಗಳ ಸಹಕಾರ ಪರಿಗಣಿಸುವುದು ಉತ್ತಮ. ವ್ಯವಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ನೀವು ಬಯಸಿದರೆ, ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು. ಹಿರಿಯರ ,ಪತ್ನಿಯ ಹಾಗೂ ಆರ್ಥಿಕ ತಜ್ಞರ ಸಲಹೆ ಪಡೆದುಕೊಳ್ಳಿರಿ. ವಿರೋಧಿಗಳ ಬಗ್ಗೆ ಜಾಗರೂಕರಾಗಿರಿ. ಆಸ್ತಿ ಪಾಲುದಾರಿಕೆಯಲ್ಲಿ ನೀವು ತರಾತುರಿಯಲ್ಲಿ ತಪ್ಪು ನಿರ್ಧಾರ ತೆಗೆದುಕೊಳ್ಳಬಹುದು. ಆರೋಗ್ಯದ ದೃಷ್ಟಿಯಿಂದ ಈ ದಿನ ಮಧ್ಯಮ.
ಅದೃಷ್ಟ ಬಣ್ಣ: ಕೇಸರಿ
ಅದೃಷ್ಟ ಸಂಖ್ಯೆ: 5,7
ಅದೃಷ್ಟ ಸಮಯ: ಬೆಳಿಗ್ಗೆ 9:00 ರಿಂದ ಸಂಜೆ 8:00 ರವರೆಗೆ
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಮಕರ ರಾಶಿ
ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುವ ಪ್ರಸಂಗ ಬರಲಿದೆ. ರಾಜಕೀಯ ಕ್ಷೇತ್ರದಲ್ಲಿ ಮತಬಾಂಧವರ ಅಭಿನಂದನೆಗಳನ್ನು ಪಡೆಯುತ್ತೀರಿ. ಇದೆ ಸಮಯದಲ್ಲಿ ಉನ್ನತ ಮೂಲಗಳಿಂದ ಚುನಾವಣೆ ಟಿಕೆಟ್ ಭಾಗ್ಯ. ಸಂಗಾತಿಯ ಉತ್ತಮ ಮನಸ್ಥಿತಿ ಇದೆ ಮದುವೆ ಚರ್ಚೆ ಮಾಡಿರಿ.ನಿಮ್ಮ ದಾನ ಧರ್ಮದಿಂದ ಮನಸ್ಸು ಸಂತೋಷಪಡಿಸುತ್ತದೆ. ಇಂದು ನೀವು ಹೊಸ ಆಲೋಚನೆಗಳು ಮಾಡುವಿರಿ. ಇಂದು ನೀವು ಪ್ರತಿಯೊಂದು ಕಾರ್ಯದಲ್ಲೂ ಯಶಸ್ವಿಯಾಗುತ್ತೀರಿ. ನೀವು ಉದ್ಯಮಿಯಾಗಿದ್ದರೆ, ನಿಮ್ಮ ಕೆಲಸಕ್ಕೆ ಉತ್ತಮ ಬೆಂಬಲ ಸಿಗುವುದು ಹಾಗೂ ಧನಪ್ರಾಪ್ತಿ. ನಿಮ್ಮ ಕಠಿಣ ಶ್ರಮದಿಂದ ನೀವು ಇಂದು ಯಶಸ್ಸನ್ನು ಪಡೆಯಬಹುದು. ಉದ್ಯೋಗದಲ್ಲಿರುವ ಜನರಿಗೆ ಹಣಕಾಸಿಗೆ ತುಂಬಾ ಒಳ್ಳೆಯದು. ನಿಮ್ಮ ಅಪೂರ್ಣ ಕಾರ್ಯಗಳನ್ನು ಪೂರ್ಣಗೊಳಿಸಲು ಶ್ರಮಿಸಬೇಕಾಗಬಹುದು. ಹೊಸ ವ್ಯಾಪಾರಸ್ಥರ ಆರ್ಥಿಕ ಪರಿಸ್ಥಿತಿ ಸದೃಢವಾಗಿ ಉಳಿಯುತ್ತದೆ. ಇಂದು ನಿಮ್ಮ ಆರೋಗ್ಯ ರಕ್ಷಣೆಗಾಗಿ ವೆಚ್ಚವೂ ಹೆಚ್ಚಾಗುತ್ತದೆ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಗೊಂದಲ ಸೃಷ್ಟಿಯಾಗಲಿವೆ. ಮೇಲಾಧಿಕಾರಿಯ ಸಲಹೆ ಪಡೆಯಿರಿ ಇಲ್ಲದಿದ್ದರೆ ನೀವು ತೊಂದರೆಯಲ್ಲಿ ಸಿಲುಕಿಕೊಳ್ಳಬಹುದು. ನಿಮ್ಮ ಮಾತಾಪಿತೃ ಆರೋಗ್ಯವೂ ಉತ್ತಮವಾಗಿರುತ್ತದೆ.
ಅದೃಷ್ಟ ಬಣ್ಣ: ಕೆಂಪು
ಅದೃಷ್ಟ ಸಂಖ್ಯೆ: 3,7
ಅದೃಷ್ಟ ಸಮಯ: ಮಧ್ಯಾಹ್ನ 3:00 ರಿಂದ ರಾತ್ರಿ 8:0 ರವರೆಗೆ
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಕುಂಭ ರಾಶಿ
ಹಣ ಹೂಡಿಕೆ ದೃಷ್ಟಿಯಿಂದ ಇಂದು ಉತ್ತಮ ದಿನವಾಗಲಿದೆ. ಇಂದು ನೀವು ಸುವರ್ಣ ಖರೀದಿಸುವಿರಿ. ಯಾವುದೇ ಹೊಸ ಯೋಜನೆ ಪ್ರಾರಂಭ ಮಾಡುವ ಮೊದಲು ಆರ್ಥಿಕ ಸ್ಥಿತಿಯ ಬಗ್ಗೆ ಗಮನವಿರಲಿ. ಆಸೆಯೇ ದುಃಖಕ್ಕೆ ಮೂಲ ವಾಗಬಹುದು. ಎಲ್ಐಸಿ ಹಾಗೂ ಸರ್ಕಾರಕ್ಕೆ ಸಂಬಂಧಿಸಿದ ಬ್ಯಾಂಕುಗಳಲ್ಲಿ ಹೂಡಿಕೆ ಮಾಡಬಹುದು, ಅದು ಮುಂದಿನ ದಿನದಲ್ಲಿ ತುಂಬಾ ಪ್ರಯೋಜನಕಾರಿ ಆಗುವುದು. ನಾನು ಯಾರಿಗಿಂತ ಕಡಿಮೆ ಇಲ್ಲ ಎಂದು ಸಾಬೀತುಪಡಿಸುತ್ತಿರಿ. ಕಿರಿಯ ಸಹೋದರರೊಂದಿಗೆ ನಿಮ್ಮ ನಿರಂತರ ಜಗಳ ಸಂಭವ. ಅಳಿಯನ ನಡವಳಿಕೆ ಬಗ್ಗೆ ಚಿಂತನೆ,ಅವನ ದುಷ್ಟ ಸಹವಾಸ ದೋಷ ಮತ್ತು ಹವ್ಯಾಸಗಳು ತಪ್ಪಿಸಲು ನೀವು ಸಮತೋಲನದಲ್ಲಿ ವರ್ತಿಸಬೇಕು. ಕೆಲಸದಲ್ಲಿ ಈ ದಿನ ಬಹಳ ಮುಖ್ಯವಾಗಿದೆ ಮೇಲಾಧಿಕಾರಿಯ ತಂಡ ಕೆಲವು ಪರೀಕ್ಷೆಗೆ ಬರಲಿದ್ದಾರೆ. ಪತ್ನಿಯ ಮಾರ್ಗದರ್ಶನದಲ್ಲಿ ಭವಿಷ್ಯಕ್ಕಾಗಿ ನೀವು ಪರಿಣಾಮಕಾರಿ ಯೋಜನೆಯನ್ನು ಮಾಡಬಹುದು. ಪ್ರೇಮಿಗಳಿಗಾಗಿ ವಿಶೇಷ ಸೂಚನೆ :ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಬಲವಾಗಿರುತ್ತದೆ. ನಿಮ್ಮಿಬ್ಬರ ನಡುವೆ ಪ್ರೀತಿ ಮತ್ತು ವಿಶ್ವಾಸ ಬೆಳೆಯುತ್ತದೆ.
ಅದೃಷ್ಟ ಬಣ್ಣ: ಕುಂಕುಮ ಬಣ್ಣ
ಅದೃಷ್ಟ ಸಂಖ್ಯೆ: 6,9
ಅದೃಷ್ಟ ಸಮಯ: ಮಧ್ಯಾಹ್ನ 1ರಿಂದ ಸಂಜೆ 7:00 ರವರೆಗೆ
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
ಮೀನ ರಾಶಿ
ಕೆಲಸದಲ್ಲಿ ಧನ ಪ್ರಾಪ್ತಿಯಾಗುವುದು.ಇಂದು ನಿಮಗೆ ಒಳ್ಳೆಯ ದಿನವಾಗಿದೆ ಎಲ್ಲಾ ಕೆಲಸ ಕಾರ್ಯಗಳು ಪೂರ್ಣಗೊಳಿಸಿರಿ. ಸಹೋದ್ಯೋಗಿಗಳು ನಿಮ್ಮ ಕೆಲಸದಲ್ಲಿ ಸಹಕಾರ ನೀಡುವರು. ಇಂದು ನಿಮ್ಮ ಪ್ರೇಮಿ ಜೊತೆ ಮೋಜು ಮಾಡಲು ನಿಮಗೆ ಅವಕಾಶಗಳು ಸಿಗುತ್ತವೆ. ಪ್ರವಾಸ ಬೇಡ. ಕುಟುಂಬದಲ್ಲಿ ಕೆಲವು ಸಮಸ್ಯೆ ಎದುರಾಗಬಹುದು. ಪತ್ನಿಯ ಭಾವನೆಗಳನ್ನು ನೀವು ಅರ್ಥಮಾಡಿಕೊಳ್ಳಬೇಕು. ನಿಮ್ಮ ತಪ್ಪು ವರ್ತನೆ ಮತ್ತು ಏಕೋ ಮನೋಭಾವನೆ ನಿರ್ಧಾರಗಳಿಂದ ಪತಿ-ಪತ್ನಿ ಮಧ್ಯೆ ಬಿರುಕು ಸಂಭವ. ನಿಮ್ಮ ಪ್ರೀತಿಪಾತ್ರರೊಂದಿಗಿನ ನಿಮ್ಮ ಸಂಬಂಧಗಳನ್ನು ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ. ಪ್ರೀತಿಯ ಜೀವನವು ಅದ್ಭುತವಾಗಿರುತ್ತದೆ ಮತ್ತು ನಿಮ್ಮ ಗೆಳೆಯ / ಗೆಳತಿಯೊಂದಿಗೆ ಕೆಲವು ಪ್ರಣಯ ಕ್ಷಣಗಳನ್ನು ಆನಂದಿಸಲು ನಿಮಗೆ ಸಾಧ್ಯವಾಗುತ್ತದೆ. ಶೇರು ಮಾರುಕಟ್ಟೆಯಲ್ಲಿ ಹಠಾತ್ ಹಣ ಗಳಿಕೆ ಸಾಧ್ಯ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಕಾಯಿಲೆಗಳ ಬಗ್ಗೆ ಜಾಗೃತಿವಹಿಸಿ. ನಿಮ್ಮ ಸಂತೋಷವು ಸಂಜೆ ಹೆಚ್ಚಾಗುತ್ತದೆ ಏಕೆಂದರೆ ಧನಪ್ರಾಪ್ತಿ ಸಮಯ. ವಿಧವೆ ಅಥವಾ ವಿಚ್ಛೇದನ ಪಡೆದ ಹೆಣ್ಣುಮಕ್ಕಳ ಮರುಮದುವೆ ಒಳ್ಳೆಯ ಸುದ್ದಿಯನ್ನು ಸ್ವೀಕರಿಸುತ್ತೀರಿ.
ಅದೃಷ್ಟ ಬಣ್ಣ: ಹಳದಿ
ಅದೃಷ್ಟ ಸಂಖ್ಯೆ: 4,8
ಅದೃಷ್ಟ ಸಮಯ: ಮಧ್ಯಾಹ್ನ 1:00 ರಿಂದ ರಾತ್ರಿ 10:00 ರವರೆಗೆ
ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob.No.9353488403
Dvgsuddi.com is a live Kannada news portal. Kannada news online. political, information, crime, film, Sports News in Kannada
