Connect with us

Dvg Suddi-Kannada News

ದಾವಣಗೆರೆ: ಕೊರೊನಾದಿಂದ ತಂದೆ-ತಾಯಿ ಕಳೆದುಕೊಂಡ ಮಕ್ಕಳಿಗೆ ಲಯನ್ಸ್ ಕ್ಲಬ್ ನಿಂದ 2 ಲಕ್ಷ ನೆರವು

ದಾವಣಗೆರೆ

ದಾವಣಗೆರೆ: ಕೊರೊನಾದಿಂದ ತಂದೆ-ತಾಯಿ ಕಳೆದುಕೊಂಡ ಮಕ್ಕಳಿಗೆ ಲಯನ್ಸ್ ಕ್ಲಬ್ ನಿಂದ 2 ಲಕ್ಷ ನೆರವು

ದಾವಣಗೆರೆ: ಕೊರೊನಾದಿಂದ ತಂದೆ-ತಾಯಿಗಳನ್ನು ಕಳೆದುಕೊಂಡ ಮಕ್ಕಳಿಗೆ ಭದ್ರತೆ ನೀಡುವ ದೃಷ್ಠಿಯಿಂದ ದಾವಣಗೆರೆ ಲಯನ್ಸ್ ಕ್ಲಬ್ ವತಿಯಿಂದ 2 ಲಕ್ಷ ನೆರವು ನೀಡಲಾಗುವುದು ಎಂದು ಲಯನ್ಸ್ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಎಸ್. ನಾಗಪ್ರಕಾಶ್ ಹೇಳಿದರು.

ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅರ್ಜಿ ಸಲ್ಲಿಸುವ ಮಕ್ಕಳು ತಂದೆ-ತಾಯಿ ಮರಣಪತ್ರ, ಕೋವಿಡ್ ಪಾಸಿಟಿವ್ ರಿಪೋರ್ಟ್, ಆಧಾರ್ ಕಾರ್ಡ್, ವಿಳಾಸ ಹಾಗೂ ಓದುತ್ತಿರುವ ಶಾಲೆಯ ವಿವರ ನೀಡಬೇಕು. ಅಂತಹ ಮಕ್ಕಳು ಜೂನ್ 18 ಅರ್ಜಿ ಸಲ್ಲಿಸಲು ಕಡೆಯ ದಿನಾಂಕವಾಗಿದೆ ಮಾಹಿತಿಗೆ ಆಸಕ್ತರು ಮೊಬೈಲ್ ಸಂಖ್ಯೆ: 9844063504, 9448043560 ಸಂಪರ್ಕಿಸಬಹುದು ಎಂದು ತಿಳಿಸಿದರು.

ತಂದೆ, ತಾಯಿ ಕಳೆದುಕೊಂಡ ಮಕ್ಕಳಿಗೆ ಭದ್ರತೆ ಒದಗಿಸುವ ದೃಷ್ಟಿಯಿಂದ 2 ಲಕ್ಷ ದೇಣಿಗೆ ನೀಡಲು ಕ್ಲಬ್ ಮುಂದಾಗಿದೆ. ಅರ್ಜಿಗಳನ್ನು ಪರಿಶೀಲಿಸಿ ಅಂಥ ಮಕ್ಕಳ ಹೆಸರಲ್ಲಿ ಭದ್ರತಾ ಠೇವಣಿ ಇರಿಸಲಾಗುವುದು. ಈ ಬಗ್ಗೆ
ಜೂನ್ 21ರಂದು ಭದ್ರತಾ ಠೇವಣಿಗಳ ಬಾಂಡ್ ನೀಡಲಾಗುವುದು.ಮಕ್ಕಳಿಗೆ 18 ವರ್ಷ ತುಂಬಿದ ನಂತರ ಬಾಂಡ್‌ನ ಅವಧಿ ಪೂರ್ಣಗೊಂಡು ವಿದ್ಯಾಭ್ಯಾಸ, ಮದುವೆ ಅಥವಾ ಸ್ವ-ಉದ್ಯೋಗ ಮಾಡಲು ಹಣ ಸಿಗಲಿದೆ. ಇದಲ್ಲದೆ,ಕೋವಿಡ್‌ನಿಂದಾಗಿ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ 1ರಿಂದ 10ನೇ ತರಗತಿಯವರೆಗೆ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್‌. ಓಂಕಾರಪ್ಪ, ಎನ್‌.ವಿ. ಬಂಡಿವಾಡ್, ವೈ.ಬಿ. ಸತೀಶ್, ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ ಉಪಸ್ಥಿತರಿದ್ದರು.

 

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top