ಮುಧೋಳ್: ಮಾಜಿ ಸಚಿವ ಎಸ್.ಎಸ್.ಮಲ್ಲಿಕರ‍್ಜುನ್ ಅವರ ಒಡೆತನದ ಮುಧೋಳ್ ತಾಲ್ಲೂಕಿನ ಉತ್ತೂರು ಗ್ರಾಮದಲ್ಲಿರುವ ಇಂಡಿಯನ್ ಕೇನ್ ಪವರ್ ಲಿಮಿಟೆಡ್ ನಲ್ಲಿ (ಐಸಿಪಿಎಲ್) ದಾಖಲೆಯ ೫೦ ದಿನಗಳಲ್ಲಿ ೧೦ ಲಕ್ಷ ಟನ್ ಅರಿದ ಹಿನ್ನೆಲೆಯಲ್ಲಿ ಇಂದು ಸ್ಥಳೀಯ ರೈತ ಮುಖಂಡರುಗಳು ಕಂಪನಿಯ ಛರ‍್ಮನ್ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ವ್ಯವಸ್ಥಾಪಕ ನರ‍್ದೇಶಕ ಎಸ್.ಎಸ್.ಮಲ್ಲಿಕರ‍್ಜುನ್ ಅವರನ್ನು ನೇಗಿಲು ನೀಡಿ ಹಸಿರು ಶಾಲು ಹೊದಿಸಿ ಸನ್ಮಾನಿಸಿದರು.
ಪ್ರಗತಿಪರ ರೈತರಾದ ಗೋವಿಂದಪ್ಪ ಗುಜ್ಜನವರ್ ಅವರು ೧ ಎಕರೆಯಲ್ಲಿ ೧೦೫ ಟನ್ ಕಬ್ಬು ಬೆಳೆದಿರುವುದನ್ನು ಪ್ರರ‍್ಶಿಸಿದರು. ಈ ವೇಳ ಶಾಮನೂರು ಶಿವಶಂಕರಪ್ಪ ರೈತ ಮುಖಂಡರುಗಳಿಗೆ ರೈತರ ದಿನಾಚರಣೆಯ ಶುಭಕೋರಿದರು. ಈ ಸಂರ‍್ಭದಲ್ಲಿ ರೈತ ಮುಖಂಡ ಸಚಿನ್ ಪಾಟೀಲ್, ವೆಂಕಣ್ಣ ಪೂಜಾರ್, ಮುಧೋಳ್ ಬಂಡು ಘಾಟ್ಗೆ, ಚಿ. ಎಸ್.ಎಂ.ಸರ‍್ಥ್, ಕಂಪನಿಯ ಪ್ರಧಾನ ವ್ಯವಸ್ಥಾಪಕ ಪ್ರಕಾಶ್, ಸರವನ್, ಜೋಷಿ, ಮಾರುತಿ, ಉದ್ಯಮಿ ಎಸ್.ಕೆ.ವೀರಣ್ಣ ಮತ್ತಿತರರು ಉಪಸ್ಥಿತರಿದ್ದರು.