Connect with us

Dvgsuddi Kannada | online news portal | Kannada news online

2020ರ ಟಾಪ್ 10 ಬ್ಯಾಂಕ್ ಪಟ್ಟಿಯಲ್ಲಿ ಯಾವ ಬ್ಯಾಂಕ್ ಗಳಿವೆ ಗೊತ್ತಾ..?

ಪ್ರಮುಖ ಸುದ್ದಿ

2020ರ ಟಾಪ್ 10 ಬ್ಯಾಂಕ್ ಪಟ್ಟಿಯಲ್ಲಿ ಯಾವ ಬ್ಯಾಂಕ್ ಗಳಿವೆ ಗೊತ್ತಾ..?

 ನವದೆಹಲಿ: ಎಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೆಸ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಎ‌ಚ್ ಎಸ್ ಬಿಸಿ ಬ್ಯಾಂಕ್ 2020ನೇ ಇಸವಿಯಲ್ಲಿ ದೇಶದ ಟಾಪ್ 10 ಬ್ಯಾಂಕ್ ಗಳಾಗಿವೆ.

ಇನ್ನು ಗೂಗಲ್ ಪೇ ಹಾಗೂ ಫೋನ್ ಪೇ ಟಾಪ್ ವ್ಯಾಲೆಟ್ ಗಳು ಎನಿಸಿವೆ. ಬ್ಯಾಂಕಿಂಗ್, ಫೈನಾನ್ಷಿಯಲ್ ಸರ್ವೀಸಸ್ ಅಂಡ್ ಇನ್ಷೂರೆನ್ಸ್ (BFSI) ಮೂವರ್ಸ್ ಅಂಡ್ ಶೇಕರ್ಸ್ 2020 ವರದಿ ಈ ಪಟ್ಟಿ ತಯಾರಿಸಿದೆ.  ಭಾರತದ ಟಾಪ್ 100 ಬ್ಯಾಂಕ್ ಗಳು ಮತ್ತು ಬಿಎಫ್ ಎಸ್ ಐ ಮಾಡೆಲ್ ಗಳಾದ ವ್ಯಾಲೆಟ್ ಗಳು, ಯುಪಿಐ, ನಿಯೋಬ್ಯಾಂಕ್ಸ್, ನಾನ್ ಬ್ಯಾಂಕಿಂಗ್ ಫೈನಾನ್ಷಿಯಲ್ ಕಂಪೆನೀಸ್ (ಎನ್ ಬಿಎಫ್ ಸಿ), ಸಣ್ಣ ಹಣಕಾಸು ಬ್ಯಾಂಕ್ ಮತ್ತು ಪೇಮೆಂಟ್ಸ್ ಬ್ಯಾಂಕ್ ಗಳ ಬಗ್ಗೆ ಪ್ರಸ್ತಾವ ಮಾಡಲಾಗಿದೆ.

ಕೊರೊನಾ ಕಾರಣಕ್ಕೆ ಈ ವರ್ಷ ಇನ್ಷೂರೆನ್ಸ್ ಬಹಳ ಜನಪ್ರಿಯತೆ ಕಂಡಿತು. “ಎಚ್ ಡಿಎಫ್ ಸಿ, ಐಸಿಐಸಿಐ, ಎಸ್ ಬಿಐ, ಯೆಸ್ ಬ್ಯಾಂಕ್, ಪಿಎನ್ ಬಿ, ಎಚ್ ಎಸ್ ಬಿಸಿ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ದಾಯಿಶ್ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್ 2020ರ ಟಾಪ್ 10 ಬ್ಯಾಂಕ್ ಗಳಾಗಿವೆ.ಈ ವರ್ಷ ಯುಪಿಐ ಮತ್ತು ವ್ಯಾಲೆಟ್ ಗಳಲ್ಲೂ ಭರ್ಜರಿ ಏರಿಕೆ ಕಂಡುಬಂದಿದೆ. ಲಾಕ್ ಡೌನ್ ಸಂದರ್ಭದಲ್ಲಿ ಗೂಗಲ್ ಪೇ ನಂಬರ್ ಒನ್ ಮೂವರ್ ಅಂಡ್ ಶೇಕರ್ ಆಗಿದ್ದು, ಫೋನ್ ಪೇ ಎರಡನೇ ಸ್ಥಾನದಲ್ಲಿದೆ ಎಂದು ತಿಳಿಸಲಾಗಿದೆ.

ಭಾರತೀಯ ಗ್ರಾಹಕರಿಗೆ ಸೇವೆ ಸಲ್ಲಿಸುವ ಕಾರಣಕ್ಕೆ ರಾತ್ರೋರಾತ್ರಿ ಮೂರು ಬ್ಯಾಂಕ್ ಗಳು ಬದಲಾವಣೆ ಕಂಡಿವೆ. ಐಸಿಐಸಿಐ, ಎಚ್ ಡಿಎಫ್ ಸಿ ಮತ್ತು ಎಸ್ ಬಿಐ ಸಂಖ್ಯೆ ಹಾಗೂ ಗುಣಮಟ್ಟದಿಂದ ಮುಂದಿವೆ. ಇವುಗಳ ಜತೆಗೆ ಆಕ್ಸಿಸ್ ಹಾಗೂ ಕೊಟಕ್ ಮಹೀಂದ್ರಾ ಬ್ಯಾಂಕ್ ಕೂಡ ಸೇರಿಕೊಂಡಿವೆ.ವಾಟ್ಸಾಪ್ ಕೂಡ ಪೇಮೆಂಟ್ ಸರ್ವೀಸ್ ಶುರು ಮಾಡಿದ್ದು, ಇತರರಿಗಿಂತ ಹಿಂದಿದೆ

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top