Connect with us

Dvgsuddi Kannada | online news portal | Kannada news online

ದಾವಣಗೆರೆ: ಉಚಿತ ತರಬೇತಿಗೆ ಅರ್ಜಿ ಆಹ್ವಾನ

ದಾವಣಗೆರೆ

ದಾವಣಗೆರೆ: ಉಚಿತ ತರಬೇತಿಗೆ ಅರ್ಜಿ ಆಹ್ವಾನ

ದಾವಣಗೆರೆ: ಹರಿಹರದಲ್ಲಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ (ಎಸ್‍ಸಿಪಿ, ಟಿಎಸ್‍ಪಿ) ಮೂಲಕ 18 ರಿಂದ 35 ವರ್ಷದೊಳಗಿನ ನಿರುದ್ಯೋಗಿಗಳಿಗೆ ವಿವಿಧ ಕೋರ್ಸ್‍ಗಳ ಅಲ್ಪಾವಧಿ ಉಚಿತ ತರಬೇತಿ ನೀಡಲಾಗುತ್ತಿದ್ದು, ಆಸಕ್ತ ಯುವಕ, ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸಲು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಂಗಸಂಸ್ಥೆಯಾದ ಹರಿಹರದಲ್ಲಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ/ಪಿ.ಯು.ಸಿ/ಐ.ಟಿ.ಐ/ಡಿಪ್ಲೋಮ ಮೆಕಾನಿಕಲ್ /ಬಿ.ಇ ಮೆಕಾನಿಕಲ್, ಮತ್ತು ಯಾವುದೇ ಪದವಿ, ಪಾಸ್ ಆಗಿರುವ ಅಭ್ಯರ್ಥಿಗಳಿಗೆ ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ್, ಸಿ.ಎನ್.ಸಿ ಆಪರೇಟರ್ ಟರ್ನಿಂಗ್, ಸಿ.ಎನ್.ಸಿ ಪ್ರೋಗ್ರಾಮರ್, ಕನ್ವೆನ್ಷನಲ್ ಟರ್ನಿಂಗ್ ಮಷಿನ್ ಆಪರೇಟರ್, ಮಿಲ್ಲಿಂಗ್ ಮಷಿನ್ ಆಪರೇಟರ್, ಸರ್ಫೇಸ್ ಗ್ರೈಂಡಿಂಗ್ ಮಷಿನ್ ಆಪರೇಟರ್, ಡಿಸೈನರ್ ಮೆಕಾನಿಕಲ್, ಪ್ರೋಡಕ್ಷನ್ ಇಂಜಿನಿಯರ್, ಟೂಲ್ ರೂಮ್ ಮಷಿನಿಷ್ಟ್ ಕೋರ್ಸ್‍ಗಳಲ್ಲಿ ಅಲ್ಪಾವಧಿ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.

ತರಬೇತಿ ಅವಧಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶಿಷ್ಯವೇತನ ನೀಡುವುದರ ಜೊತೆಗೆ ತರಬೇತಿ ಮುಗಿದ ನಂತರ ಉದ್ಯೋಗಾವಕಾಶಕ್ಕೆ ಮಾರ್ಗದರ್ಶನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಫೆ.18 ಕೊನೆಯ ದಿನವಾಗಿರುತ್ತದೆ ಹಾಗೂ ಹೆಚ್ಚಿನ ವಿವರಗಳಿಗಾಗಿ ಪ್ರಾಂಶುಪಾಲರು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ನಂ. 22 ಸಿ ಅಂಡ್ ಡಿ, ಕೆಐಎಡಿಬಿ, ಇಂಡಸ್ಟ್ರಿಯಲ್ ಏರಿಯ ಹರ್ಲಾಪುರ, ಕೆಎಸ್‍ಆರ್‍ಟಿಸಿ ಡಿಪೋ ಹತ್ತಿರ, ಹರಿಹರ ಇವರಲ್ಲಿ ಅಥವಾ ದೂರವಾಣಿ ಸಂಖ್ಯೆ 08192243937, 9916018111, 8884488202, 8711913947 ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top