Connect with us

Dvgsuddi Kannada | online news portal | Kannada news online

ದಾವಣಗೆರೆ: ಕೆರೆಗಳಲ್ಲಿ ಮೀನುಗಾರಿಕೆ ಪರವಾನಗಿ ಪಡೆಯಲು ಅರ್ಜಿ ಆಹ್ವಾನ

ದಾವಣಗೆರೆ

ದಾವಣಗೆರೆ: ಕೆರೆಗಳಲ್ಲಿ ಮೀನುಗಾರಿಕೆ ಪರವಾನಗಿ ಪಡೆಯಲು ಅರ್ಜಿ ಆಹ್ವಾನ

ದಾವಣಗೆರೆ: ಒಳನಾಡು ಮೀನುಗಾರಿಕೆ ಕಾರ್ಯನೀತಿಯನ್ವಯ, ಮೀನುಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕೆರೆಗಳ/ಜಲಸಂಪನ್ಮೂಲಗಳ ಮೀನುಪಾಶುವಾರು ಹಕ್ಕನ್ನು ಮೀನುಗಾರರಿಗೆ ಸಹಕಾರ ಸಂಘಗಳಿಗೆ/ರೈತ ಮೀನುಗಾರ ಉತ್ಪಾದಕ ಸಂಸ್ಥೆಗಳಿಗೆ ಗುತ್ತಿಗೆ ಮತ್ತು ಮೀನುಗಾರರಿಗೆ ಪರವಾನಿಗೆ ಮುಖಾಂತರ ಮೀನುಗಾರಿಕೆ ನಡೆಸಲು ಅವಕಾಶ ನೀಡಲಾಗಿದೆ.

ಜಲಸಂಪನ್ಮೂಲಗಳನ್ನು ಹೊರತುಪಡಿಸಿ ಉಳಿದ ಇಲಾಖಾ ವ್ಯಾಪ್ತಿಯ ಜಲಸಂಪನ್ಮೂಲಗಳನ್ನು ಇ-ಟೆಂಡರ್ ಪ್ರಕ್ರಿಯೆಯ ಮೂಲಕ 2022-23 ನೇ ಫಸಲಿ ವರ್ಷದಿಂದ ವಿಲೇವಾರಿ ಮಾಡಲು ಸರ್ಕಾರವು ಆದೇಶ ಹೊರಡಿಸಿರುತ್ತದೆ.
ಆದರಿಂದ ಇನ್ನುಮುಂದೆ ಮೀನುಗಾರಿಕೆ ಇಲಾಖೆಯ ವತಿಯಿಂದ ಹೊರಡಿಸಲಾಗುವ ಇ-ಟೆಂಡರ್ ಪ್ರಕಟಣೆಯನ್ವಯ ಕೆರೆಗಳ ಮೀನುಪಾಶುವಾರು ಹಕ್ಕನ್ನು ಪಡೆಯಲಿಚ್ಚಿಸುವವರು/ಮೀನುಗಾರರ ಸಹಕಾರ ಸಂಘಗಳ/ರೈತ ಮೀನುಗಾರ ಉತ್ಪಾದಕ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು/ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ ಇ-ಸಂಗ್ರಹಣ ಪೋರ್ಟಲ್ (e-procument portal)ನಲ್ಲಿ ನೋಂದಾಯಿಸಿಕೊಳ್ಳುವುದು ಮತ್ತು ಅಗತ್ಯ ಡಿ.ಎಸ್.ಸಿ. ಕೀ ಪಡೆಯುವುದು ಕಡ್ಡಾಯವಾಗಿದೆ.

ಹೆಚ್ಚಿನ ಮಾಹಿತಿಗಾಗಿ https://eproc.karnataka.gov.in ವೆಬ್‍ಸೈಟ್‍ಗೆ ಹಾಗೂ ಸಹಾಯವಾಣಿ ಕೇಂದ್ರ 8277200300 ಕ್ಕೆ ಅಥವಾ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top