Connect with us

Dvgsuddi Kannada | online news portal | Kannada news online

ಪಿಎಚ್‌ಡಿ, ಎಂ.ಫಿಲ್ ಸಂಶೋಧನೆಗೆ ಅರ್ಜಿ ಆಹ್ವಾನ

ದಾವಣಗೆರೆ

ಪಿಎಚ್‌ಡಿ, ಎಂ.ಫಿಲ್ ಸಂಶೋಧನೆಗೆ ಅರ್ಜಿ ಆಹ್ವಾನ

ಡಿವಿಜಿಸುದ್ದಿ.ಕಾಂ,ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ೨೦೧೯-೨೦ ನೇ ಶೈಕ್ಷಣಿಕ ಸಾಲಿನ ಪಿ.ಎಚ್.ಡಿ ಮತ್ತು ಎಂ.ಫಿಲ್ ಸಂಶೋಧನೆಗೆ ಅರ್ಜಿ ಆಹ್ವಾನಿಸಿದೆ.
ಯು.ಜಿ.ಸಿಯಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾನಿಲಯಗಳಿಂದ ಸಂಬಂಧಪಟ್ಟ ಸ್ನಾತಕೋತ್ತರ ಪದವಿಗಳಲ್ಲಿ ಶೇಕಡ ೫೫ ರಷ್ಟು ಅಂಕಗಳಿಸಿದ ಅಭ್ಯರ್ಥಿಗಳು ಅರ್ಹರು. ಇನ್ನು ಎಸ್ಸಿ, ಎಸ್ಟಿ, ಪ್ರವರ್ಗ-೧ ಅಭ್ಯರ್ಥಿಗಳು ಶೇ. ೫೦ ರಷ್ಟು ಅಂಕ ಪಡೆದಿರಬೇಕು ಅಥವಾ ಗ್ರೇಡಿಂಗ್ ಪದ್ದತಿಯಲ್ಲಿ ತತ್ಸಮಾನ ಗ್ರೇಡಿಂಗ್ ಪಡೆದಿರಬೇಕು.

ಯಾವ ಕೋರ್ಸ್ ಗೆ ಎಷ್ಟು ಸೀಟ್

ಇತಿಹಾಸ- ಪಿ.ಎಚ್‌ಡಿ-2, ಎಂಫಿಲ್-2
ಸಮಾಜಕಾರ್ಯ- ಪಿ.ಎಚ್‌ಡಿ -9, ಎಂಫಿಲ್-4
ಅರ್ಥಶಾಸ್ತ್ರ- ಪಿ.ಎಚ್‌ಡಿ-13, ಎಂಫಿಲ್-8 
ಇಂಗ್ಲೀಷ್-ಪಿ.ಎಚ್‌ಡಿ-1, ಎಂಫಿಲ್-3
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ- ಪಿ.ಎಚ್‌ಡಿ-6, ಎಂಫಿಲ್-2
ಜೀವರಸಾಯನಶಾಸ್ತ್ರ -ಪಿ.ಎಚ್‌ಡಿ-11, ಎಂಫಿಲ್-7
ಸೂಕ್ಷ್ಮ ಜೀವಶಾಸ್ತ್ರ  -ಪಿ.ಎಚ್‌ಡಿ -16, ಎಂಫಿಲ್-11.
ಜೈವಿಕ ತಂತ್ರಜ್ಞಾನ-ಪಿ.ಎಚ್‌ಡಿ -12, ಎಂಫಿಲ್-4
ಭೌತಶಾಸ್ತ್ರ -ಪಿ.ಎಚ್‌ಡಿ-11, ಎಂಫಿಲ್-4
ಆಹಾರ ತಂತ್ರಜ್ಞಾನ -ಪಿ.ಎಚ್‌ಡಿ -23, ಎಂಫಿಲ್-11
ರಸಾಯನ ಶಾಸ್ತ್ರ -ಪಿ.ಎಚ್‌ಡಿ -14, ಎಂಫಿಲ್-7
ಸಸ್ಯಶಾಸ್ತ್ರ -ಪಿ.ಎಚ್‌ಡಿ -13, ಎಂಫಿಲ್-5
ಗಣಿತ ಶಾಸ್ತ್ರ -ಪಿ.ಎಚ್‌ಡಿ -9, ಎಂಫಿಲ್-6
ಎಲೆಕ್ಟ್ರಾನಿಕ್ಸ್ -ಪಿ.ಎಚ್‌ಡಿ -2
ವಾಣಿಜ್ಯ ಶಾಸ್ತ್ರ-ಪಿ.ಎಚ್‌ಡಿ -25
ಆಡಳಿತ ನಿರ್ವಹಣಾ ಶಾಸ್ತ್ರ -ಪಿ.ಎಚ್‌ಡಿ -12
ಶಿಕ್ಷಣ -ಪಿ.ಎಚ್‌ಡಿ -6, ಎಂಫಿಲ್-2

ಅರ್ಜಿಯನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪಡೆಯಬಹುದಾಗಿದೆ. ಅಥವಾ ವಿಶ್ವವಿದ್ಯಾನಿಲಯದ ವೆಬ್ www.davangereuniversity.ac.in ಮೂಲಕ ಅರ್ಜಿ ನಮೂನೆಗಳನ್ನು ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಸೆ. ೩೦ರ ಸಂಜೆ ೪ ಗಂಟೆಯೊಳಗೆ ಸಂಬಂಧಪಟ್ಟ ವಿಭಾಗಗಳಲ್ಲಿ ಸ್ವೀಕರಿಸಲಾಗುವುದು.
ಹೆಚ್ಚಿನ ಮಾಹಿತಿಗೆ: 08192-208029, 208444 ಸಂಪರ್ಕಿಸಿ. ಸಂಶೋಧನೆಗೆ ಸಂಬಂಧಿಸಿದಂತೆ ವಿಶ್ವವಿದ್ಯಾನಿಲಯದಿಂದ ಪ್ರಕಟಿಸಲಾಗಿರುವ ಸ್ಥಾನಗಳನ್ನು ಭರ್ತಿ ಮಾಡುವ ಅಥವಾ ಭರ್ತಿ ಮಾಡದಿರುವ ಅಧಿಕಾರವನ್ನು ವಿಶ್ವವಿದ್ಯಾನಿಲಯವು ಹೊಂದಿರುತ್ತದೆ ಎಂದು ಕುಲಸಚಿವರು ಬಸವರಾಜ್ ಬಣಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ: 9844460336, 7483892205   

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top