-ಡಿ. ಬಸವರಾಜ್, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಲೋಕಸಭೆ ಹಾಗೂ
ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಮಂಡಿಸಿ ಒಪ್ಪಿಗೆ ಪಡೆದಿರುವುದು
ಸಂವಿಧಾನಕ್ಕೆ ಬಗೆದ ಅಪಚಾರವಾಗಿದೆ. ಭಾರತ ಧರ್ಮ ನಿರಪೇಕ್ಷ ರಾಷ್ಟ್ರವಾಗಿದ್ದು, ಈ
ಮಸೂದೆ ಜಾರಿಯಾದರೆ ಸಂವಿಧಾನದ ವಿರುದ್ಧವಾಗಲಿದೆ.
ದೇಶದ ಏಕತೆ ಸಮಗ್ರತೆಗಾಗಿ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಮತ್ತು
ರಾಜೀವ್ಗಾಂಧಿ ತ್ಯಾಗ ಬಲಿದಾನ ಮಾಡಿದರು. ಆದರೆ ಪ್ರಧಾನಿ ನರೇಂದ್ರ ಮೋದಿ ಗೃಹ ಸಚಿವ
ಅಮಿತ್ಶಾ ದೇಶ ಇಬ್ಭಾಗವಾಗುವ ರೀತಿಯಲ್ಲಿ ಜಾತಿ ಆಧಾರಿತ, ಧರ್ಮ ಆಧಾರಿತವಾದ ಪೌರತ್ವ ತಿದ್ದುಪಡೆ ಮಸೂದೆವನ್ನು ಜಾರಿಗೊಳಿಸಲು ಮುಂದಾಗಿರುವುದು ಆತಂಕ ಉಂಟು ಮಾಡಿದೆ. ಭಾರತದ ಜಾತ್ಯಾತೀತ ಸಂವಿಧಾನ ಆಶಯಗಳಿಗೆ ವಿರುದ್ಧವಾಗಿ
ಮುಸ್ಲಿಂ ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯದ ಸಂವಿಧಾನಿಕ ಮೂಲಭೂತ
ಹಕ್ಕುಗಳನ್ನು ಕಸಿಯುವಂತಹ ಪೌರತ್ವ ತಿದ್ದುಪಡೆಯ ಮಸೂದೆಯು ವಿವಿಧ
ಧರ್ಮ ಹಾಗೂ ಸಮಾಜಗಳಲ್ಲಿ ಕಂದಕ ಉಂಟು ಮಾಡಲಿದೆ.
ಪೌರತ್ವ ಮಸೂದೆ ತಿದ್ದುಪಡೆ ಕಾಯ್ದೆಯು ಅವೈಜ್ಞಾನಿಕವಾಗಿದ್ದು, ಭಾರತ ನಂಬಿ ಕೊಂಡಿರುವ ಮೌಲ್ಯಗಳಿಗೆ ವಿರುದ್ಧವಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪಘಾನಿಸ್ತಾನ ಮುಂತಾದ ದೇಶಗಳಿಂದ ಭಾರತಕ್ಕೆ ವಲಸೆ ಬಂದು
ವಾಸಿಸುತ್ತಿರುವ ನಿರಾಶ್ರಿತರ ಪೈಕಿ ಕೇವಲ ಮುಸ್ಲಿಂ ಜನಾಂಗವನ್ನು ಗುರಿಯಾಗಿಟ್ಟುಕೊಂಡು ರೂಪಿಸಿರುವ ತಿದ್ದುಪಡಿ ಮಸೂದೆಯು ಭಾರತದ ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿದೆ. ಕಾಯ್ದೆಯು ಬಿಜೆಪಿಯು ಮತ ಬ್ಯಾಂಕ್ ಬಲಪಡಿಸಿಕೊಳ್ಳುವ ದುರುದ್ದೇಶವನ್ನು ಹೊಂದಿದೆ. ಕಾಯ್ದೆಯು ಕೋಮುವಾದಿ ನೀತಿಯನ್ನು ಪ್ರತಿಪಾದಿಸುವ ಉದ್ದೇಶ ಹೊಂದಿದೆ. ರಾಷ್ಟದ ಹಿತಕ್ಕೆ ವಿರುದ್ಧವಾದ ಪೌರತ್ವ ಮಸೂದೆ ತಿದ್ದುಪಡಿ ಜಾರಿ ಆಗದಂತೆ ರಾಷ್ಟ್ರದ ಅತ್ಯುನ್ನತ ನ್ಯಾಯ ಕೇಂದ್ರ ಸುಪ್ರಿಂ ಕೋರ್ಟ್ ಮಧ್ಯೆ ಪ್ರವೇಶಿಸಿ ಸಂವಿಧಾನ ರಕ್ಷಿಸಬೇಕಿದೆ.
ಕೇಂದ್ರ ಸರ್ಕಾರವು ಎಲ್ಲಾ ರಂಗಗಳಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ದೇಶದ
ಆರ್ಥಿಕ ಸ್ಥಿತಿ ಅದೋಗತಿಗೆ ಹೋಗಿದೆ. ನಿರುದ್ಯೋಗ ಪ್ರಮಾಣ ದಾಖಲೆ ಪ್ರಮಾಣದಲ್ಲಿ
ಏರುಗತಿಯಲ್ಲಿದೆ. ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯಗಳು
ಹೆಚ್ಚಾಗುತ್ತಿವೆ, ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿವೆ. ಜನರು ಜೀವನ
ನಡೆಸುವುದೇ ದುಸ್ತರವಾಗಿದೆ. ದೇಶದ ಜನರ ನಿರೀಕ್ಷೆಗಳಿಗೆ ವಿರುದ್ಧವಾಗಿ ಮೋದಿ
ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇದೊಂದು ಬೇಜವಾಬ್ದಾರಿ, ಜನವಿರೋಧಿ ಸರ್ಕಾರವಾಗಿದೆ.
ಅಧಿಕಾರಕ್ಕೆ ಬಂದ ಕಳೆದ ಆರು ವರ್ಷಗಳಲ್ಲಿ ದೇಶದ ಜನರಿಗೆ ನೆರವಾಗುವಂತಹ
ಯಾವುದೇ ಕಾರ್ಯವನ್ನು ಸರ್ಕಾರ ಕಾರ್ಯಗತ ಮಾಡಿಲ್ಲ. ಅಗತ್ಯವಿಲ್ಲದ, ಕೆಲಸಕ್ಕೆ
ಬಾರದ ಮಸೂದೆಗಳನ್ನು ಮಂಡಿಸಿ ಕೇಂದ್ರ ಸರ್ಕಾರವು ವ್ಯರ್ಥ ಕಾಲಹರಣ ಮಾಡುತ್ತಿದೆ.
ಜನರ ದಿಕ್ಕು ತಪ್ಪಿಸುವ ಕಾರ್ಯದಲ್ಲಿ ತೊಡಗಿದೆ. ಇದಕ್ಕೆ ಪೌರತ್ವ ತಿದ್ದುಪಡಿ ಮಸೂದೆಯೇ ಸಾಕ್ಷಿಯಾಗಿದೆ. ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಮುಸ್ಲಿಂ ವಿರೋಧಿ ನಿಲುವು ಹೊಂದಿದ್ದಾರೆ. ಮೋದಿ, ಶಾ ಆಯೋಗ ರಚಿಸಿದರೆ ನಾಥೂರಾಮ್ ಗೋಡ್ಸೆಗೂಕ್ಲೀನ್ಚಿಟ್ ಸಿಗಲಿದೆ.
ಸಹಸ್ರಾರು ಜನರ ಸಾವಿಗೆ ಕಾರಣವಾದ 2002ರ ಗುಜರಾತಿನ ಗೋದ್ರಾ ಹತ್ಯಾಕಾಂಡದಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ನೇತೃತ್ವದ ಸರ್ಕಾರಕ್ಕೆ ನ್ಯಾಯಮೂರ್ತಿ ನಾನಾವತಿ ಮತ್ತು ಮೆಹ್ತಾ ಆಯೋಗ ಕ್ಲಿನ್ ಕಿಟ್
ನೀಡಿರುವುದು ಅಚ್ಚರಿ ಮೂಡಿಸಿದೆ. ಗುಜರಾತ್ ಹತ್ಯಾಕಾಂಡ ಘಟನೆ ನಡೆದು 17 ವರ್ಷಗಳ ನಂತರ ಹಾಗೂ ನಾನಾವತಿ
ಆಯೋಗ ವರದಿ ನೀಡಿದ 5ವರ್ಷಗಳ ನಂತರ ಕೇಂದ್ರದಲ್ಲಿ ಮೋದಿಯವರೇ ಪ್ರಧಾನಿ
ಆಗಿರುವ ಸಂದರ್ಭದಲ್ಲಿ ಗುಜರಾತ್ ಬಿಜೆಪಿ ಸರ್ಕಾರ ವಿಧಾನಸಭೆಯಲ್ಲಿ ವರದಿ
ಮಂಡಿಸಿರುವುದು ಸೂಕ್ತ ಸಮಯವಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಗೃಹ ಸಚಿವ ಅಮಿತ್ಶಾ ಅವರುಗಳು ರಾಷ್ಟ್ರದ ಮಹಾತ್ಮಗಾಂಧೀಜಿ ಹತ್ಯೆಯ ಬಗ್ಗೆ ಮರು ತನಿಖೆಗೆ ಆದೇಶಿಸಿ ಹೊಸ ಆಯೋಗವನ್ನು ರಚಿಸಿದರೆ ಖಂಡಿವಾಗಿಯೂ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಗೂ ಕ್ಲೀನ್ಚಿಟ್ ಸಿಗಲಿದೆ ಎಂದಿರುವ ಅವರು ಗಾಂಧೀಜಿಯೇ ಆತ್ಮಹತ್ಯೆ ಮಾಡಿಕೊಂಡರು ಎಂಬ ವರದಿ
ನೀಡಿದರೆ ಅಚ್ಚರಿ ಇಲ್ಲ.