Connect with us

Dvgsuddi Kannada | online news portal | Kannada news online

ಎಸಿಬಿ ಅಧಿಕಾರಿಗಳ ದಾಳಿ: 1.77 ಲಕ್ಷ ವಶ

ದಾವಣಗೆರೆ

ಎಸಿಬಿ ಅಧಿಕಾರಿಗಳ ದಾಳಿ: 1.77 ಲಕ್ಷ ವಶ

ಡಿವಿಜಿಸುದ್ದಿ ಕಾಂ, ದಾವಣಗೆರೆ: ಆರ್‌ಟಿಒ ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ೧೫ ಕ್ಕೂ ಹೆಚ್ಚು ಬ್ರೋಕರ್ ಸಹಿತ 1 ಲಕ್ಷದ 76  ಸಾವಿರದ 855 ರೂಪಾಯಿ ವಶ ಪಡಿಸಿಕೊಂಡಿದ್ದಾರೆ.

ಡಿವೈಎಸ್‌ಪಿ ಪರಮೇಶ್ವರಪ್ಪ, ಸರ್ಕಲ್ ಇನ್ಸ್ಪೆಕ್ಟರ್ ಮಧುಕುಮಾರ್ ಸೇರಿದಂತೆ ೨೮ ಅಧಿಕಾರಿಗಳನೊಳಗೊಂಡ ತಂಡ ಈ ದಾಳಿ ನಡೆಸಿದೆ. ಆರ್‌ಟಿಒ ಅಧಿಕಾರಿಗಳು ಸಹಿತ ಏಜೆಂಟರ್ ಮೇಲೆ ದಾಳಿ ನಡೆಸಲಾಗಿದ್ದು, 15 ಬ್ರೋಕರ್ ಗಳು ದಾಳಿ ವೇಳೆ ಸಿಕ್ಕಿ ಬಿದ್ದಿದ್ದಾರೆ. ಆದರೆ, ಯಾವುದೇ ಅಧಿಕಾರಿಗಳು ದಾಳಿ ವೇಳೆ ಸಿಕ್ಕಿ ಬಿದ್ದಿಲ್ಲ. ವಶಕ್ಕೆ ಪಡೆದ ಏಜೆಂಟರ್‌ಗಳಿಂದ 1 ಲಕ್ಷದ 76  ಸಾವಿರದ 855 ರೂಪಾಯಿ ವಶಕ್ಕೆ ಪಡೆದುಕೊಳ್ಳಲಾಗಿದೆ.

ಸೆ. 1 ರಿಂದ ನೂತನವಾಗಿ ಮೋಟರ್ ವಾಹನ ಕಾಯ್ದೆ ಜಾರಿಗೆ ಬಂದಾಗಿನಿಂದ ಆರ್‌ಟಿಒ ಕಚೇರಿಯಲ್ಲಿ ಸಾರ್ವಜನಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ ಎನ್ನುವ ದೂರು ಬಂದಿದ್ದವು. ಈ ದೂರಿನ ಅನ್ವಯ ಈ ದಾಳಿ ನಡೆದಿದೆ. ಸಾರ್ವಜನಿಕರಿಂದ ಡಿಎಲ್, ಎಲ್‌ಎಲ್‌ಆರ್, ವಾಹನ ನೋಂದಣಿ ಗಾಗಿ ಏಜೆಂಟರ್ ಗಳು ಹೆಗ್ಗಿಲ್ಲದೆ ಹಣ ವಸೂಲಿ ಮಾಡುತ್ತಿದ್ದರು.

ಈ ದಾಳಿಗೂ ನಮಗೂ ಸಂಬಂಧವಿಲ್ಲ. ಯಾವುದೇ ಏಜೆಂಟರ್ ಇಲ್ಲದೆ ನೇರವಾಗಿ ಆರ್‌ಟಿಒ ಕಚೇರಿಗೆ ಬಂದು ಅರ್ಜಿ ತುಂಬಿ ತಮಗೆ ಅಗತ್ಯವಾದ ಡಿಎಲ್, ಎಲ್‌ಎಲ್‌ಆರ್, ವಾಹನ ನೋಂದಣಿ ಮಾಡಿಸಿಕೊಳ್ಳಲು ಅವಕಾಶವಿದೆ. ಇದಲ್ಲದೆ ಆನ್‌ಲೈನ್ ನಲ್ಲಿಯೂ ಸೇವೆ ಲಭ್ಯವಿದೆ. ಇದಲ್ಲ ಇದ್ದರೂ, ಸಾರ್ವಜನಿಕರು ಏಜೆಂಟರ್ ಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಈ ದಾಳಿಗೂ ಮನಗೂ ಸಂಬಂಧವಿಲ್ಲ. ಸೂಕ್ತ ಪರಿಶೀಲನೆ ನಡೆಯಲಿ. ಯಾರು ತಪ್ಪಿತಸ್ಥರು ಇದ್ದರೂ, ಅವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಿ ಎಂದು ಆರ್‌ಟಿಒ ಎನ್.ಜೆ ಬಣಕಾರ್ ತಿಳಿಸಿದರು.

ಸದಾ ಬ್ಯುಸಿಯಾಗಿರುತ್ತಿದ್ದ ಆರ್‌ಟಿಒ ಆಫೀಸ್‌ನಲ್ಲಿ ಎಸಿಬಿ ದಾಳಿಯಿಂದ ಸ್ಥಬ್ಧವಾಗಿತ್ತು. ದಿನಂಪ್ರತಿ ನೂರಾರು ಏಜೆಂಟರ್‌ಗಳು ಸಾರ್ವಜನಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿ ಡಿಎಲ್, ಎಲ್‌ಎಲ್‌ಆರ್ ಮಾಡಿಸಿಕೊಡುತ್ತಿದ್ದರು. ಈ ದಾಳಿ ನಂತರವಾದ್ರೂ ಆರ್‌ಟಿಒ ಆಫೀಸ್ ನಲ್ಲಿ ಏಜೆಂಟರ್ ಗಳ ಹಾವಳಿಗೆ ಬ್ರೇಕ್ ಬೀಳುತ್ತಾ ಎಂಬುದು ಸದ್ಯದ ಪ್ರಶ್ನೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

0 Comments

  1. SHUKRU SAB

    September 17, 2019 at 1:30 pm

    I really appreciate you sir good job thanku so much

Leave a Reply

Your email address will not be published. Required fields are marked *

More in ದಾವಣಗೆರೆ

To Top