ಡಿವಿಜಿ ಸುದ್ದಿ, ದಾವಣಗೆರೆ: ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರ 54ನೇ ಹುಟ್ಟುಹಬ್ಬದ ಅಂಗವಾಗಿ ನಗರದ ದಾವಣಗೆರೆ ರಕ್ತ ಬಂಡಾರ ದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ರಕ್ತದಾನ ಮಾಡುವುದರ ಮುಖಾಂತರ ಚಾಲನೆ ನೀಡಿದರು.
ರಕ್ತದಾನಿಗಳಿಗೆ ಸಸಿಗಳನ್ನು ವಿತರಣೆ ಮಾಡಿ ಮಾತನಾಡಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ , ರಕ್ತದಾನ ಮಾಡುವುದು ಬಹಳ ಶ್ರೇಷ್ಠ ದಾನ. ಅಂತ ಕಾರ್ಯ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಕೊರೊನಾ ಸಂದರ್ಭದಲ್ಲೂ ಸಹ ರಕ್ತದಾನ ಮಾಡಿ ಕೆಲವು ಜೀವಗಳಿಗೆ ಜೀವ ದಾನಮಾಡುವ ಮಾಡುವಂತ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೇಂದ್ರ ನಗರ ವೃತ್ತ ನಿರೀಕ್ಷಕ ತಮ್ಮಣ್ಣನವರ ದಾವಣಗೆರೆ ರಕ್ತ ಬಂಡಾರ ಮುಖ್ಯಸ್ಥ ಎಚ್ ಬಿ ಕುಮಾರ್ , ಗಿರೀಶ್ ಕುಮಾರ್ , ಕೆಜಿ ಬಸವರಾಜ್, ಸಂತೋಷ್, ಪ್ರದೀಪ್ , ವಿನಯ್, ಸಿದ್ದೇಶ್ , ಮಂಜುನಾಥ್, ಲೋಕೇಶ್, ಮಲ್ಲಿಕಾರ್ಜುನ್, ಪರಮೇಶ್, ಸುರೇಶ್, ಕರಿ ಬಸವರಾಜ್, ರಾಘವೇಂದ್ರ , ಧೀರೇಂದ್ರ, ರವಿಕುಮಾರ್ , ಗೋಪಾಲ್ ದೇವರಮನೆ , ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಬಸಮ್ಮ , ಕಾರ್ಯದರ್ಶಿ ಮಂಜುಳಮ್ಮ, ವೈದ್ಯಾಧಿಕಾರಿ ಡಾಕ್ಟರ್ ವಿಶ್ವನಾಥ್, ದಾವಣಗೆರೆ ರಕ್ತನಿಧಿ ಕೇಂದ್ರದ ವ್ಯವಸ್ಥಾಪಕ ರೇವಣ ಸಿದ್ದಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



