Connect with us

Dvgsuddi Kannada | online news portal | Kannada news online

ವಚನಗಳ ಮೂಲ ವ್ಯಕ್ತಿತ್ವ ವಿಕಾಸನ:ಅರವಿಂದ ಜತ್ತಿ

ದಾವಣಗೆರೆ

ವಚನಗಳ ಮೂಲ ವ್ಯಕ್ತಿತ್ವ ವಿಕಾಸನ:ಅರವಿಂದ ಜತ್ತಿ

ಡಿವಿಜಿಸುದ್ದಿ.ಕಾಂ, ದಾವಣಗೆರೆ: ಬಸವಾದಿ ಶರಣರ ವಚನ ಸಾಹಿತ್ಯ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಒಂದು ಮೈಲುಗಲ್ಲು. ಜೀವನ ಮೌಲ್ಯಗಳನ್ನು ಒಳಗೊಂಡಿರುವ ವಚನ ಸಾಹಿತ್ಯವನ್ನು ಮಕ್ಕಳ ವಚನ ಅಧ್ಯಾಯನ ಮಾಡುವ ಮೂಲಕ ಸುಂದರ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಬಸವ ಸಮಿತಿಯ ಆಧ್ಯಕ್ಷ ಅರವಿಂದ್ ಜತ್ತಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

maganuru basappa dvgsuddi

ಶರಣ ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ ಮತ್ತು ಮಾಗನೂರು ಬಸಪ್ಪ ಶಿಕ್ಷಣ ಸಂಸ್ಥೆ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ `ವಚನ ಮತ್ತು ವ್ಯಕ್ತಿತ್ವ’ ವಿಷಯ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಹವೇ ಒಂದು ದೇಗುಲವಿದ್ದಂತೆ. ದೇವರನ್ನು ಹುಡುಕಿಕೊಂಡು ಎಲ್ಲಿಯೂ ಹೋಗುವ ಅವಶ್ಯಕತೆ ಇಲ್ಲ. ನಿಮ್ಮ ದೇಹವನ್ನೇ  ದೇವಾಲಯ ಮಾಡಿಕೊಂಡು. ನಿಮ್ಮ ಆತ್ಮ ಶುದ್ಧಿಕರಣ ಮಾಡಿಕೊಳ್ಳಿ. ನಿಮ್ಮ ಒಳಗಿರುವ ಆತ್ಮ ಶುದ್ಧಿಯಾದರೆ ನಿಮ್ಮ ವ್ಯಕ್ತಿತ್ವ ತಾನಾಗಿಯೇ ವಿಕಾಸವಾಗಲಿದೆ ಎಂದರು.

maganuru basappa dvgsuddi 4

ಬಸವಣ್ಣ, ಅಕ್ಕಮದೇವಿ, ಅಲ್ಲಮ ಪ್ರಭು ಸೇರಿದಂತೆ ಅನೇಕ ಶರಣರು ಸರಳ ಕನ್ನಡದಲ್ಲಿ ಸಾವಿರಾರು ವಚನಗಳನ್ನು ರಚಿಸಿದ್ದಾರೆ. ಈ ವನಗಳ ಸಾರವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಅಧ್ಯಾಯನ ಮಾಡುವ ಮೂಲಕ ನಿಮ್ಮ ಆತ್ಮಥೈರ್ಯ ಹೆಚ್ಚಿಸಿಕೊಳ್ಳಿ ಎಂದು ಕರೆ ನೀಡಿದರು.

maganuru basappa dvgsuddi 2

ಈ ಸಂವಾದ ಅಧ್ಯಕ್ಷತೆಯನ್ನು ಮಾಗನೂರು ಬಸಪ್ಪ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ಸಂಗಮೇಶ್ವರ ಗೌಡರ ವಹಿಸಿದ್ದರು. ಪ್ರೌಢಶಾಲೆ, ಸಿ.ಬಿ.ಎಸ್.ಇ ಶಾಲಾ ಮಕ್ಕಳು ಎಸ್.ಎಸ್.ಎಂ.ಬಿ. ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಹಾಗೂ ಎಲ್ಲಾ ವಿಭಾಗದ ಸಿಬ್ಬಂದಿ ವರ್ಗದ ವರು ಪಾಲ್ಗೊಂಡಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top