ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆಯಲ್ಲಿ ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. ಆದರೆ, ಕೊರೊನಾದಿಂದ ಗುಣಮುಖರಾದ 08 ಮಂದಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.
ಪಿ-727, ಪಿ-1186, ಪಿ-1248, ಪಿ-1249, ಪಿ-626, ಪಿ-633, ಪಿ-634 ಮತ್ತು ಪಿ-615 ಕೊರೊನಾದಿಂದ ಗುಣಮುಖರಾಗಿ ಮನೆ ಸೇರಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 142 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, ಅದರಲ್ಲಿ 75 ಜನ ಗುಣಮುಖರಾಗಿದ್ದು, 4 ಜನ ಮೃತಪಟ್ಟಿದ್ಧಾರೆ. ಇನ್ನು 63 ಪಾಸಿಟಿವ್ ಕೇಸ್ ಗಳು ಜಿಲ್ಲೆಯಲ್ಲಿ ಸಕ್ರಿಯವಾಗಿವೆ.



