ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿಂದು 75 ಮಂದಿಗೆ ಕೊರೊನಾ ಸೋಂಕು ಬಂದಿದ್ದು, ಸೋಂಕಿತರ ಸಂಖ್ಯೆ 2,493ಕ್ಕೆ ಏರಿಕೆಯಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ, 75 ಸೋಂಕಿತರ ಪೈಕಿ 46 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. 6 ಮಂದಿ ತಮಿಳುನಾಡಿನಿಂದ ಬಂದಿದ್ದಾರೆ. ಉಡುಪಿಯಲ್ಲಿ ಒಟ್ಟು 27 ಮಂದಿಗೆ ಸೋಂಕು ಬಂದಿದೆ. ಈ ಪೈಕಿ 26 ಮಂದಿ ಮಹಾರಾಷ್ಟ್ರದಿಂದ ಬಂದಿದ್ದರೆ, ತೆಲಂಗಾಣದಿಂದ ಬಂದ ಓರ್ವ ಮಹಿಳೆಗೆ ಸೋಂಕು ಬಂದಿದೆ.
ಹಾಸನ 13, ಬೆಂಗಳೂರು 7, ದಕ್ಷಿಣ ಕನ್ನಡ 6 , ಯಾದಗಿರಿ 7, ಚಿತ್ರದುರ್ಗ 6, ಕಲಬರುಗಿ 3, ಚಿಕ್ಕಮಗಳೂರು 2, ವಿಜಯಪು 2 ಕೊರೊನಾ ಪತ್ತೆಯಾಗಿದೆ. ಇಂದು ಒಟ್ಟು 28 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು ರಾಜ್ಯದಲ್ಲಿ 1635 ಸಕ್ರಿಯ ಪ್ರಕರಣಗಳಿದ್ದು, 47 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ಒಟ್ಟು 809 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.



