ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ದೇಶದ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಇಂದು ಅಧಿಕಾರ ಸ್ವೀಕರಿಸಿದರು.
ಕೊರೊನಾ ವೈರಸ್ ಎಂಬ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ನಾನು ವಿಶ್ವ ಆರೋಗ್ಯ ಸಂಸ್ಥೆ ಪ್ರವೇಶಿಸುತ್ತಿದ್ದೇನೆ. ಮುಂದಿನ 2 ದಶಕಗಳಲ್ಲಿ ಅನೇಕ ಆರೋಗ್ಯ ಸವಾಲುಗಳು ಎದುರಾಗಲಿವೆ. ಅವುಗಳನ್ನು ಅರ್ಥಮಾಡಿಕೊಂಡು ಎಲ್ಲ ಸವಾಲುಗಳನ್ನು ನಾವು ನಮ್ಮ ಜವಾಬ್ದಾರಿಯಿಂದ ಎದುರಿಸಬೇಕಿದೆ ಎಂದು ಹರ್ಷವರ್ಧನ್ ತಿಳಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯು ವಿವಿಧ ದೇಶಗಳ 34 ಸದಸ್ಯರನ್ನು ಹೊಂದಿದ್ದು, ನಮ್ಮ ದೇಶದ ಆರೋಗ್ಯ ಸಚಿವರು ಮಂಡಳಿಯ ಅಧ್ಯಕ್ಷರಾಗಿದ್ದಾರೆ.
Delhi: Union Health Minister Dr Harsh Vardhan takes charge as the chairman of the World Health Organisation (WHO) Executive Board pic.twitter.com/fz3ervSEYZ
— ANI (@ANI) May 22, 2020