ಡಿವಿಜಿ ಸುದ್ದಿ, ದಾವಣಗೆರೆ: ವಿದ್ಯಾನಗರದ ಶಿವ ಮಾರ್ಕೆಟಿಂಗ್ ಫುಡ್ ಮಾರ್ಟ್ ವತಿಯಿಂದ ಬಡವರಿಗೆ ಆಹಾರ ಕಿಟ್ ವಿತರಿಸಲಾಯಿತು.

ನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ಬಡವರಿಗೆ ಆಹಾರ ಕಿಟ್ ವಿತರಿಸಿದರು. 25 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಫುಡ್ ಮಾರ್ಟ್ ಮಾಲೀಕ ಕೊಂಡಜ್ಜಿ ಬಣಕಾರ್ ಶಿವಕುಮಾರ್, ವೀರಣ್ಣ ಬಣಕಾರ್, ನಗರ ಪಾಲಿಕೆ ಸದಸ್ಯ ಶಿವನಗೌಡ ಟಿ ಪಾಟೀಲ್, ಬಿಜೆಪಿ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ್ ಕಡ್ಲೆಬಾಳು ಮತ್ತಿತರರು ಉಪಸ್ಥಿತರಿದ್ದರು.



