ಡಿವಿಜಿ ಸುದ್ದಿ, ಚಿತ್ರದುರ್ಗ: ಕೊರೊನಾ ವೈರಸ್ ಹಿನ್ನೆಲೆ ಲಾಕ್ಡೌನ್ ಪರಿಣಾಮ ರೈತರು ನಷ್ಟ ಅನುಭವಿಸಿದ ಹೂ ಮತ್ತು ತರಕಾರಿ ಬೆಳೆಗಾರರಿಗೆ ಪರಿಹಾರ ನೀಡಲು ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಹೇಳಿದರು.
ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ, ಡಿಸಿಸಿ ಬ್ಯಾಂಕ್ಗೆ ಭೇಟಿ ನೀಡಿದ ಬಳಿಕೆ ಮಾತನಾಡಿದ ಅವರು, ಹೊರ ರಾಜ್ಯಗಳಿಗೆ ಹಣ್ಣು ಮತ್ತು ತರಕಾರಿಗಳನ್ನು ಸರಬರಾಜಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಸಾಗಟ ಮಾಡುವ ಲಾರಿ, ಟ್ರಕ್ ಗಳನ್ನು ತಡೆಯುವಂತಿಲ್ಲ. ರೈತರಿಗೆ ಹಸಿರು ಪಾಸ್ ನೀಡಲಾಗುತ್ತಿದೆ. ಇದು ದುರ್ಬಳಕೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ನಕಲಿ ಪಾಸ್ ಪತ್ತೆಯಾದರೆ ಪ್ರಕರಣ ದಾಖಲಿಸಿ ಬಂಧಿಸಲಾಗುವುದ ಎಂದು.
ಮದ್ಯದಂಗಡಿ ತೆರೆಯುವಂತೆ ಒತ್ತಡ ಹಾಕಲಾಗುತ್ತದೆ. ಆದರೆ, ಮದ್ಯ ಮಾರಾಟದ ಸಂದರ್ಭದಲ್ಲಿ ಅಂತರ ಕಾಯ್ದುಕೊಳ್ಳಲು ಸಾಧ್ಯವಿಲ್ಲ. ಸರ್ಕಾರಕ್ಕೆ ನಷ್ಟವಾದರೂ ಸರಿ ಮದ್ಯದಂಗಡಿ ತೆರೆಯುವುದಿಲ್ಲ ಎಂದರು.



