ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಜಿಲ್ಲೆಯ ಸಹಕಾರ ಸಂಘ, ಸಹಕಾರ ಬ್ಯಾಂಕುಗಳಿಂದ ಅಲ್ಪಾವಧಿ ಸಾಲವಾಗಿ ಗರಿಷ್ಠ 1 ಲಕ್ಷದ ವರೆಗೆ ಸಾಲ ಪಡೆದವರು , ಸಾಲ ಮನ್ನಾಕ್ಕೆ ಸೂಕ್ತ ಅರ್ಜಿ ಸಲ್ಲಿಸಲು ಮಾ.25 ಕೊನೆಯ ದಿನವಾಗಿದೆ.
ದಿನಾಂಕ: 10.07.2018 ರೊಳಗೆ ಗರಿಷ್ಟ ರೂ. 1.00 ಲಕ್ಷ ಸಾಲ ಮನ್ನಾ ಅರ್ಹ ಫಲಾನುಭವುಗಳು ಆಧಾರ, ಪಡಿತರ ಚೀಟಿ ಮತ್ತು ಭೂಮಿ ದಾಖಲಾತಿಗಳನ್ನು ಹಾಗೂ ಸ್ವಯಂ ದೃಡೀಕರಣ ಪತ್ರವನ್ನು ಇದುವರೆಗೆ ಸಲ್ಲಿಸದೇ ಇರುವಂತಹ ರೈತರು ಮಾರ್ಚ್ 25 ರೊಳಗಾಗಿ ದಾಖಲೆಗಳನ್ನು ಸಂಬಂಧಿಸಿದ ಸಂಘ, ಬ್ಯಾಂಕುಗಳಿಗೆ ಸಲ್ಲಿಸಲು ಅಂತಿಮ ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ದಾಖಲೆ ಸಲ್ಲಿಸಲು ವಿಫಲರಾದಲ್ಲಿ ಅಂತಹ ರೈತರು ಸಾಲಮನ್ನಾ ಸೌಲಭ್ಯ ಪಡೆಯಲು ಅನರ್ಹತೆ ಹೊಂದಿರುತ್ತಾರೆ.
ಪಡಿತರ ಚೀಟಿಯನ್ನು ರೈತರು ಹೊಂದಿಲ್ಲದೇ ಇದ್ದಲ್ಲಿ ಅಥವಾ ಹೊಂದಿದ್ದರೂ ಸಹ ಚಾಲನೆಯಲ್ಲಿ ಇಲ್ಲದೆ ಇದ್ದಲ್ಲಿ ಅಂತಹ ರೈತರು ಮಾ. 25 ರೊಳಗಾಗಿ ಹೊಸ ಪಡಿಡತರ ಚೀಟಿಗಳನ್ನು ಪಡೆದು ಸಲ್ಲಿಸಬೇಕು. ಇದು ಸಾಲ ಮನ್ನಾ ಪಡೆಯಲು ಅಂತಿಮ ಅವಕಾಶವೆಂದು ದಾವಣಗೆರೆ ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



