ದಾವಣಗೆರೆ: ಚಿನ್ನಾಭರಣ ಕಳವು ಪ್ರಕರಣದಲ್ಲಿ ಸುಮಾರು 31 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹರಿಹರ ಪೊಲೀಸರು ಬಂಧನ ಮಾಡಿದ್ದಾರೆ.ಆರೋಪಿ ವಿರುದ್ಧ ಚಿನ್ನಾಭರಣ ಕಳವು ಪ್ರಕರಣದಲ್ಲಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣ ದಾಖಲಾಗಿದ್ದವು. ಅಕ್ಬರ್ ಸಾಬ್ ಬಂಧಿತ ಆರೋಪಿ.
ಪ್ರಕರಣದ ಹಿನ್ನೆಲೆ: ದಿನಾಂಕ : 01-10-1993ರಂದು ಅಬ್ದುಲ್ ಜಬ್ಬಾರ್ ಅವರ ಹರಿಹರದ ಬೆಂಕಿ ನಗರನಿವಾದಲ್ಲಿ ಅಕ್ಬರ್ ಸಾಬ್ ತನ್ನ ಮೈಮೇಲೆ ದೇವರು ಬರುತ್ತದೆ. ನಾನು ಮಾಟ ಮಂತ್ರ ಮಾಡುವೆ, ನಿಮ್ಮ ಮನೆಯಲ್ಲಿ ಪೂಜೆ ಮಾಡುತ್ತೇನೆಂದು ನಂಬಿಸಿ ಮನೆಯಲ್ಲಿ ಪೂಜೆ ಮಾಡುವಾಗ ಹೆಂಡತಿಯ ಮೈಮೇಲಿದ್ದ ಬಂಗಾರದ ಒಡವೆಗಳನ್ನು ಒಂದು ಕಬ್ಬಿಣದ ಪೆಟ್ಟಿಗೆಯಲ್ಲಿ ಹಾಕಲು ಹೇಳಿ ಅದನ್ನು ಪೂಜೆ ಮಾಡಿ ಸ್ವಲ್ಪ ದಿನದಲ್ಲಿ ತೆರೆದು ನೋಡಿದರೆ ಡಬಲ್ ಆಗುವುದಾಗಿ ನಂಬಿಸಿ 7 ಗ್ರಾಮ 650 ಮಿಲಿ ಬಂಗಾರದ ವಿವಿಧ ಆಭರಣಗಳನ್ನು ಪೆಟ್ಟಿಗೆಯಲ್ಲಿ ಹಾಕಿ, ತಮಗೆ ಕುಡಿಯಲು ನೀರು ತರಲು ಹೇಳಿದಾಗ ಪರ್ಯಾದಿ ಮನೆಯ ಒಳಗೇ ಹೋಗಿದ್ದಾಗ ಕಬ್ಬಿಣದ ಪೆಟ್ಟಿಗೆಯೊಂದಿಗೆ ಪರಾರಿಯಾಗಿದ್ದು, ತಮಗೆ ನಂಬಿಸಿ ಬಂಗಾರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾಗಿ ನೀಡಿದ ದೂರು ನೀಡಿದ್ದರು.
ದಾವಣಗೆರೆ: ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಗೆ ಅರ್ಜಿ ಆಹ್ವಾನ
ಅಂದಿನ ಹರಿಹರ ಗ್ರಾಮಾಂತರ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಎಲ್ ನರಸಿಂಹಯ್ಯ ಸಿಬ್ಬಂದಿ ಎಸ್ ಬಂಗಾರಪ್ಪ, ಗುರುರಾಜಚಾರ್, ಟಿ ಹಾಲಪ್ಪ, ಎಂ ಆರ್ ಹನುಮಂತಪ್ಪ ತಂಡವು ಪ್ರಕರಣದ ಆರೋಪಿತನಾದ ಅಕ್ಬರ್ (26) 1993 ರಲ್ಲಿ ಬಂಧನ ಮಾಡಲಾಗಿತ್ತು.
ಆರೋಪಿತನಿಂದ 1] ಒಂದು ಹರಳಿರುವ 2 ಗ್ರಾಂ ತೂಕದ ಬಂಗಾರದ ಉಂಗುರ, 2] 4 ಗ್ರಾಂ ತೂಕದ ಬಂಗಾರದ ಉಂಗುರ, 3] 1 ಗ್ರಾಂ 650 ಮಿಲಿ ಇರುವ ಬಂಗಾರದ ಬೆಂಡೋಲಿಯನ್ನು ವಶಪಡಿಸಿಕೊಂಡು ತನಿಖೆ ಪೂರೈಸಿ ಆರೋಪಿಯ ವಿರುದ್ಧ ದೋಷರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ದಾವಣಗೆರೆ: ಲಾರಿ ಡಿಕ್ಕಿ ಹೊಡೆದು ಪಾದಚಾರಿ ಸಾವಿಗೆ ಕಾರಣವಾಗಿದ್ದ ಚಾಲಕ 32 ವರ್ಷ ನಂತರ ಬಂಧನ
ಪ್ರಕರಣವು ಸಿಜೆ & ಜೆಎಂಎಫ್ಸಿ ಹರಿಹರದಲ್ಲಿ ಸಿಸಿ ನಂ : 272/1994 ರಲ್ಲಿ ವಿಚಾರಣೆಯಲ್ಲಿರುವಾಗ ಆರೋಪಿತನು 1995 ರಿಂದ ಹಾಜರಾಗದೇ ಇರುವುದರಿಂದ ದಿ : 02-01-1997 ರಿಂದ ನ್ಯಾಯಾಲಯವು ಎಲ್ಪಿಆರ್ ನಂ : 05/1997 ಎಂದು ಘೋಷಿಸಿದ್ದು ಇರುತ್ತದೆ.ಎಲ್ ಪಿ ಆರ್ ಪ್ರಕರಣದ ಆರೋಪಿತನಾದ ಅಕ್ಬರ್ ನನ್ನು ಪತ್ತೆ ಹಚ್ಚಲು ಡಿವೈಎಸ್ಪಿ ಬಿ ಎಸ್ ಬಸವರಾಜ , ಸಿಪಿಐ ಸುರೇಶ ಸಗರಿ ಮಾರ್ಗದರ್ಶನದಲ್ಲಿ ಪಿಎಸ್ ಐ ಯುವರಾಜ ಕಂಬಳಿ, ಮಂಜುಳಾ ಡಿ ನೇತೃತ್ವದಲ್ಲಿ ಸಿಬ್ಬಂದಿಯವರಾದ ರಾಜಶೇಖರಯ್ಯ ಎಎಸ್ಐ, ಪ್ರಸನ್ನಕಾಂತ ಮತ್ತು ಷಣ್ಮುಖಪ್ಪ ಬಾತ್ಮಿದಾರರಿಂದ ಹಾಗೂ ಪ್ರಕರಣದ ದೂರುದಾರರ ಕಡೆಯಿಂದ ಮಾಹಿತಿಯನ್ನು ಸಂಗ್ರಹಿಸಿ, ಸುಮಾರು 31 ವರ್ಷದಿಂದ ಘನ ನ್ಯಾಯಾಲಯಕ್ಕೆ ಹಾಜರಾಗದ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಬೆಂಗಳೂರು, ಹೊನ್ನಾಳಿ, ಶಿವಮೊಗ್ಗ ಇತರೆ ಕಡೆಗಳಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ತಲೆಮರೆಸಿಕೊಂಡಿದ್ದನು. ಅಕ್ಬರ್ ಇತ್ತೀಚಿಗೆ ಹರಿಹರ ನಗರಕ್ಕೆ ವಾಪಾಸ್ ಬಂದಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಜನವರಿ 28 ರಂದು ಹರಿಹರ ಟೌನ್ ನಲ್ಲಿ ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಆರೋಪಿತನ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.



