ದಾವಣಗೆರೆ: ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬಿಜೆಪಿ ಮಾಜಿ ಕಾರ್ಪೊರೇಟರ್ ಶವ ಪತ್ತೆಯಾಗಿದೆ. ತಂದೆ ಸಾವಿನಿಂದ ಆತಂಕಗೊಂಡ ಮಕ್ಕಳುಆತ್ಮಹತ್ಯೆಗೆ ಯತ್ನಿಸಿದ ಶಂಕೆ ವ್ಯಕ್ತವಾಗಿದ್ದು, ಅಸ್ವಸ್ಥಗೊಂಡ ಇಬ್ಬರು ಮಕ್ಕಳನ್ನು ಆಸ್ಪತ್ರೆ ಸೇರಿದ್ದಾರೆ. ದಾವಣಗೆರೆ ಹೊರ ವಲಯದದಲ್ಲಿ ನಿನ್ನೆ ತಡ ರಾತ್ರಿ ಈ ಘಟನೆ ನಡೆದಿದೆ. ದಾವಣಗೆರೆಯ 43ನೇ ವಾರ್ಡ್ ಮಾಜಿ ಕಾರ್ಪೊರೇಟರ್ ಸಂಕೋಳ್ ಚಂದ್ರಶೇಖರ್ ಮೃತ ದೇಹ ಎಂದು ಗುರುತಿಸಲಾಗಿದೆ.
ದಾವಣಗೆರೆ: ಟಿಸಿ ಬಳಿ ಬಿದ್ದಿದ್ದ ಕಸ ತೆಗೆಯುವಾಗ ವಿದ್ಯುತ್ ಸ್ಪರ್ಶ ; ವ್ಯಕ್ತಿ ಸಾವು
ಪೆಟ್ರೋಲ್ ಸುರಿದುಕೊಂಡು ಕಾರಿನಲ್ಲೇ ಆತ್ಮಹತ್ಯೆಗೆ ಶರಣಾದ್ರಾ ಮಾಜಿ ಕಾರ್ಪೊರೇಟರ್ ..?
ದಾವಣಗೆರೆ ಹೊರವಲಯ ಹದಡಿ ರಸ್ತೆಯ ಬಳಿಯ ತೋಟದ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮಾಜಿ ಕಾರ್ಪೊರೇಟರ್ ಮೃತ ದೇಹ ಸಿಕ್ಕಿದೆ. ಕಾರಿನಲ್ಲಿ ಕುಳಿತು ಮಾಜಿ ಕಾರ್ಪೊರೇಟರ್ ಸಂಕೋಳ್ ಚಂದ್ರಶೇಖರ್ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಚಂದ್ರಶೇಖರ್ ಸಾವು ಹಲವು ಅನುಮಾನಕ್ಕೆ ಕಾರಣವಾಗಿದೆ. ಇತ್ತ ತಂದೆ ಸಾವಿನಿಂದ ಶಾಕ್ ಗೆ ಒಳಗಾದ ಇಬ್ಬರು ಮಕ್ಕಳು ಸಹ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ದಾವಣಗೆರೆ:ಕೊಂಡಜ್ಜಿ ಪೊಲೀಸ್ ಪಬ್ಲಿಕ್ ಶಾಲೆಗೆ ಶಿಕ್ಷಕರ ಭರ್ತಿಗೆ ಅರ್ಜಿ ಆಹ್ವಾನ
ದಾವಣಗೆರೆಯ 43ನೇ ವಾರ್ಡ್ ಮಾಜಿ ಕಾರ್ಪೊರೇಟರ್ ಸಂಕೋಳ್ ಚಂದ್ರಶೇಖರ ಮೃತ ಪಟ್ಟಿದ್ದು, ಅವರ ಮಗನಾದ ಮಗ ನರೇಶ್ (20) ಹಾಗೂ ಮಗಳು ಪವಿತ್ರಾ (23) ಸಹ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಸಿಮೆಂಟ್ ಮತ್ತು ಕಬ್ಬಿಣದ ಅಂಗಡಿ ಇಟ್ಟುಕೊಂಡಿದ್ದ ಶಾಮನೂರು ಗ್ರಾಮದ ಚಂದ್ರಶೇಖರ್ ಸಂಕೊಳ್ ಅವರು ಬಿಜೆಪಿ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಬಿಸ್ಲೇರಿ ಹಾಗೂ ಶಾಮನೂರುಗಳಲ್ಲಿ ಆಸ್ತಿ ಹೊಂದಿದ್ದರು. 2007ರಲ್ಲಿ ಶಾಮನೂರು ಸಾಮಾನ್ಯ ಕ್ಷೇತ್ರದಿಂದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಗಳಿಸಿದ್ದರು. ಅವರು ಶಾಮನೂರು ಆಂಜನೇಯ ದೇವಸ್ಥಾನದ ಟ್ರಸ್ಟಿ ಸಹ ಆಗಿದ್ದರು.
ತೀವ್ರ ಸಾಲದ ಮುಜುಗರ; ಜಗಳವೇ ಆತ್ಮಹತ್ಯೆ ಕಾರಣನಾ..?
ತೀವ್ರ ಸಾಲ ಮಾಡಿಕೊಂಡಿದ್ದ ವಿಚಾರವಾಗಿ ಮನೆಯಲ್ಲಿ ಮಕ್ಕಳ ಜೊತೆಗೆ ನಿನ್ನೆ ರಾತ್ರಿ (ಜ.10) ಜಗಳ ನಡೆದಿದೆ ಎನ್ನಲಾಗ್ತಿದೆ. ನಿನ್ನೆ ರಾತ್ರಿ ಮನೆಯಲ್ಲಿ ಮಾಜಿ ಕಾರ್ಪೊರೇಟರ್ ಸಂಕೋಳ್ ಚಂದ್ರಶೇಖರ ಹಾಗೂ ಮಕ್ಕಳ ಜೊತೆಗೆ ವಾಗ್ವಾದ ನಡೆದಿದ್ದು, ಬಳಿಕ ನಾಗನೂರು ಹೊರ ವಲಯದ ತೋಟಕ್ಕೆ ಬಂದು ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೊಲೀಸರು ಕೂಡ ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರ ತನಿಖೆ ಬಳಿಕ ಸಾವಿನ ವಿವರ ಹೊರಬರಲಿದೆ.
ಮಾಜಿ ಕಾರ್ಪೋರೇಟರ್ ಆಗಿರುವ ಸಂಕೋಳ್ ಚಂದ್ರಶೇಖರ ಸಾಲ ಮಾಡಿಕೊಂಡಿದ್ದರು. ಸಾಲ ಹೊರೆ ಹೆಚ್ಚಾಗುುತ್ತಿದ್ದ ಕಾರಣ ಮನೆಗೆ ಸಾಲಗಾರರು ಆಗಮಿಸಲು ಆರಂಭಿಸಿದ್ದರು. ಇದರಿಂದ ಸಂಕೋಳ್ ಚಂದ್ರಶೇಖರ ಅವರ ಇಬ್ಬರು ಮಕ್ಕಳಾದ 20 ವರ್ಷದ ನರೇಶ ಹಾಗೂ 23 ವರ್ಷದ ಪವಿತ್ರಾಗೆ ತೀವ್ರ ಕಿರಿಕಿರಿಯಾಗುತ್ತಿತ್ತು. ಎಲ್ಲೇ ಹೋದರೂ ಸಾಲದ ವಿಚಾರವಾಗಿ ಜನರು ಪ್ರಶ್ನೆ ಮಾಡುತ್ತಿದ್ದರು. ಹೀಗಾಗಿ ಆಕ್ರೋಶಗೊಂಡಿದ್ದ ಮಕ್ಕಳು ನಿನ್ನೆ (ಜ.10) ಸಂಕೋಳ್ ಚಂದ್ರಶೇಖರ ಮನೆಗೆ ಆಗಮಿಸುತ್ತಿದ್ದಂತೆ ಕ್ಲಾಸ್ ತೆಗೆದುಕೊಂಡಿದ್ದರು. ಇದು ಮುಂದವರಿದರೆ ನಾವು ಸಾಯಬೇಕಾಗುತ್ತದೆ ಎಂದು ಮಕ್ಕಳು ಎಚ್ಚರಿಕೆ ನೀಡಿದ್ದರು. ಈ ಮಾತು ಸಂಕೋಳ್ ಚಂದ್ರಶೇಖರ ಅವರ ತೀವ್ರ ಘಾಸಿಗೊಳಿಸಿತ್ತು ಎನ್ನಲಾಗಿದೆ.



