ದಾವಣಗೆರೆ: ತಂದೆ ಬೈದಿದ್ದಕ್ಕೆ ಬೇಜಾರಾಗಿ ಮನೆಬಿಟ್ಟು ಬಂದಿದ್ದ 12 ವರ್ಷದ ಬಾಲಕನನ್ನು ಮತ್ತೆ ಪೋಷಕರ ಮಡಿಲು ಸೇರಿಸಲು ಸಂಚಾರಿ ಪೊಲೀಸರು ಶ್ರಮಿಸಿದ್ದಾರೆ.
ಘಟನೆ ನಡೆದಿದ್ದು ಯಾವಾಗ, ಎಲ್ಲಿ..?
ನ. 9ರಂದು ದಾವಣಗೆರೆ ಉತ್ತರ ಸಂಚಾರ ಪೊಲೀಸ್ ಠಾಣೆಯ ಎ ಎಸ್ ಐ ಹೊನ್ನೂರು ಸಾಬ್ ಹಾಗೂ ಸಿಬ್ಬಂದಿ ಗಣೇಶ ನಾಯ್ಕ್ ಹಳೆ ಪಿಬಿ ರಸ್ತೆಯ ಜಿಎಂಐಟಿ ಬಳಿ ಕರ್ತವ್ಯದಲ್ಲಿದ್ದ ಸಮಯದಲ್ಲಿ ಓರ್ವ 12 ವರ್ಷದ ಬಾಲಕ ಅನುಮಾನಾಸ್ಪದವಾಗಿ ಕಂಡುಬಂದಿದ್ದು, ಸದರಿ ಬಾಲಕನನ್ನು ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸರು ಕರೆದು ವಿಚಾರಿಸಿದಾಗ ತನ್ನ ಬಗ್ಗೆ ಮಾಹಿತಿ ತಿಳಿಸಿದ್ದಾನೆ.
ನಾನು ಹರಿಹರ ನಗರದವನು. ಮನೆಯಲ್ಲಿ ನಮ್ಮ ತಂದೆ ಬೈದಿದ್ದರಿಂದ ಬೇಜಾರಾಗಿ ಮನೆಬಿಟ್ಟು ಬಂದಿದೆ
-12 ವರ್ಷದ ಬಾಲಕ
ತಂದೆ ಬೈದಿದ್ದಕ್ಕೆ ಬೇಜಾರು..!!
ನಾನು ಹರಿಹರ ನಗರದವನು. ಮನೆಯಲ್ಲಿ ನಮ್ಮ ತಂದೆ ಬೈದಿದ್ದರಿಂದ ಬೇಜಾರಾಗಿ ಮನೆಬಿಟ್ಟು ಬಂದಿದ್ದು, ಬೇರೆ ಬೇರೆ ಕಡೆ ಸುತ್ತಾಡಿ ದಾವಣಗೆರೆ ಗೆ ಯಾವುದೋ ವಾಹನದಲ್ಲಿ ಬಂದು ಇಲ್ಲಿ ಇಳಿದುಕೊಂಡಿದ್ದರ ಬಗ್ಗೆ ತಿಳಿಸಿದ್ದಾನೆ. ನಂತರ ಪೊಲೀಸರು ಬಾಲಕನು ನೀಡಿದ ಮಾಹಿತಿ ಮೇರೆಗೆ ಹರಿಹರದ ಬಾಲಕನ ಪೋಷಕರ ಬಗ್ಗೆ ಪತ್ತೆ ಹೆಚ್ಚಿದ್ದು, ಘಟನೆ ಬಗ್ಗೆ ತಿಳಿಸಿದ್ದಾರೆ.
ಪೋಷಕರ ಪತ್ತೆಹಚ್ಚಿ, ಬುದ್ಧಿವಾದ ಹೇಳಿದ ಸಂಚಾರಿ ಪೊಲೀಸ್
ಪೊಲೀಸ್ ಕಂಟ್ರೋಲ್ ರೂಮ್ ಗೆ ಮಾಹಿತಿ ನೀಡಿದ್ದಾರೆ. ಬಾಲಕನು ದಾವಣಗೆರೆಯ ವಿನೋಬಾ ನಗರದಲ್ಲಿ ತನ್ನ ದೊಡ್ಡಮ್ಮನ ಮನೆ ಇರುವುದಾಗಿ ತಿಳಿಸಿದ್ದು, ಅವರ ಮನೆ ಪತ್ತೆ ಹಚ್ಚಿ ಕರೆದುಕೊಂಡು ಹೋಗಿ ಬಾಲಕನ ದೊಡ್ಡಮ್ಮನಿಗೆ ಘಟನೆ ಬಗ್ಗೆ ತಿಳಿಸಿರುತ್ತಾರೆ. ಬಾಲಕನ ಪೋಷಕರನ್ನು ದಾವಣಗೆರೆಗೆ ಕರೆಯಿಸಿ ಸೂಕ್ತ ಬುದ್ಧಿವಾದ ಹೇಳಿ ಮಕ್ಕಳಿಗೆ ಉತ್ತಮ ರೀತಿಯಲ್ಲಿ ತಿಳಿಹೇಳಬೇಕು ಎಂದು ಎಚ್ಚರಿಕೆ ನೀಡಿ ಪೋಷಕರ ವಶಕ್ಕೆ ಬಾಲಕನನ್ನು ಒಪ್ಪಿಸುತ್ತಾರೆ. ಬಾಲಕನ ಪೋಷಕರು ತಮ್ಮ ಮಗನಿಗಾಗಿ ಎಲ್ಲಾ ಕಡೆ ಹುಡುಕಾಡಿರುವುದು ತಿಳಿದು ಬಂದಿರುತ್ತದೆ. ಮಕ್ಕಳ ಸಹಾಯ ವಾಣಿ 1098 ಕರೆ ಮಾಡಿ.



