ದಾವಣಗೆರೆ: ರಾತ್ರೋರಾತ್ರಿ ದಾಳಿಂಬೆ ತೋಟಕ್ಕೆ ನುಗ್ಗಿದ ಕಳ್ಳರು ಗ್ಯಾಂಗ್ , 4 ಟನ್‌ಗೂ ಹೆಚ್ಚು ದಾಳಿಂಬೆ ಹಣ್ಣು ದೋಚಿ ಪರಾರಿಯಾದ ಘಟನೆ ನಡೆದಿದೆ.
ಜಿಲ್ಲೆಯ ಜಗಳೂರು ತಾಲ್ಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಬಳಿ ಘಟನೆ ನಡೆದಿದೆ. ಗ್ರಾಮದ ರವಿಕುಮಾರ್ ಎಂಬುವರ ತೋಟಕ್ಕೆ ನುಗ್ಗಿರುವ ಕಳ್ಳರ ಗ್ಯಾಂಗ್, 3 ಲಕ್ಷ ಮೌಲ್ಯದ 4 ಟನ್‌ಗೂ ಹೆಚ್ಚು ಹಣ್ಣು ಕಿತ್ತುಕೊಂಡು ಹೋಗಿದ್ದಾರೆ. ಸಾಲ ಮಾಡಿ, ಬೆಳೆ ಬೆಳೆದಿದ್ದು, ಫಸಲು ಕೈ ಸೇರುವ ಮುನ್ನವೇ ಕಳ್ಳರ ಪಾಲಾಗಿದೆ ಎಂದು ರೈತ ಆತಂಕ ವ್ಯಕ್ತಪಡಿಸಿದ್ದಾನೆ. ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.



