ದಾವಣಗೆರೆ: ಅನ್ವೇಷಕರು ಆರ್ಟ್ ಫೌಂಡೇಷನ್ ವತಿಯಿಂದ ನಟನೆ ಜೊತೆಗೆ ಚಲನಚಿತ್ರದ ವಿವಿಧ ಬಗೆಯ ವಿಷಯಗಳ ಕುರಿತು ಕಾರ್ಯಾಗಾರ ಹಾಗೂ ಕಿರುಚಿತ್ರಗಳ ನಿರ್ಮಾಣ ಮತ್ತು ಅಭಿನಯ, ನಿರ್ದೇಶನದ ಕಲಿಕೆ ಉಚಿತ ತರಬೇತಿ ಹಮ್ಮಿಕೊಳ್ಳಲಾಗಿದೆ.
18 ವರ್ಷ ಮೇಲ್ಪಟ್ಟ ಹಾಗೂ 30 ವರ್ಷದೊಳಗಿನ ಕನಿಷ್ಟ ದ್ವಿತೀಯ ಪಿಯುಸಿ ಪಾಸ್ ಅಥವಾ ಫೇಲಾದವರು ಮಾತ್ರ ಸಂದರ್ಶನಕ್ಕೆ ಹಾಜರಾಗ ಬಹುದು. ಇದೇ ದಿನಾಂಕ 8ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬೆಂಗಳೂರಿನ ಜೆಪಿ ನಗರದಲ್ಲಿರುವ ಕಪ್ಪಣ್ಣ ಅಂಗಳದಲ್ಲಿ ಸಂದರ್ಶನವಿ ರುತ್ತದೆ. ವಿವರಕ್ಕೆ 9844268176, 8884603051, 94816 69521 ಸಂಪರ್ಕಿಸಬಹುದು.



